ದೆಹಲಿ ವಿಮಾನ ನಿಲ್ದಾಣದಲ್ಲಿ 85 ಲಕ್ಷ ಮೌಲ್ಯದ ಐಫೋನ್ ವಶಕ್ಕೆ
ನವದೆಹಲಿ: ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರದಂದು 85 ಲಕ್ಷ ರೂಪಾಯಿ ಮೌಲ್ಯದ ನೂರಾರು ಐಫೋನ್ ಗಳೊಂದಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ,ಈ ವ್ಯಕ್ತಿಯು ಐಫೋನ್ನೊಂದಿಗೆ ದುಬೈಯಿಂದ ಬರುತ್ತಿದ್ದನು ಎಂದು ಹೇಳಲಾಗಿದೆ. ವಾಯು ಗುಪ್ತಚರರ ಮಾಹಿತಿ ಮೇರೆಗೆ ಪೊಲೀಸರು ಈ ವ್ಯಕ್ತಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.ಬಂಧಿತನಾಗಿರುವ ವ್ಯಕ್ತಿಯು ಸುಮಾರು 53 ವರ್ಷದವನಾಗಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ವಿಮಾನ ನಿಲ್ದಾಣದಲ್ಲಿನ ಹೆಚ್ಚುವರಿ ಕಸ್ಟಮ್ಸ್ ಆಯುಕ್ತ ಅಮಂದೀಪ್ ಸಿಂಗ್ " ಈ ವ್ಯಕ್ತಿಯನ್ನು ಪರಿಶೀಲಿಸಿದಾಗ ಸುಮಾರು 85.61 ಲಕ್ಷ ಮೌಲ್ಯದ ನೂರಾರು ಐಫೋನ್ನಲ್ಲಿರುವ ಹ್ಯಾಂಡ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಯಿತು"ಎಂದರು.