IRCTC New feature - ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲು ಟಿಕೆಟ್ ರದ್ದುಗೊಳಿಸಿದ ನಂತರ, ಮರುಪಾವತಿಗಾಗಿ ನೀವು ಇನ್ಮುಂದೆ ಎರಡು-ಮೂರು ದಿನಗಳವರೆಗೆ ಕಾಯಬೇಕಾಗಿಲ್ಲ. ನಿಮ್ಮ ಹಣವನ್ನು ತಕ್ಷಣ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ಖರೀದಿಸಿದ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ ನೀವು ಈ ಸೌಲಭ್ಯವನ್ನು ಪಡೆಯುತ್ತೀರಿ. IRCTC-ipay ಗೇಟ್‌ವೇ ಮೂಲಕ ಟಿಕೆಟ್ ಖರೀದಿಸಿದ ನಂತರ ಅದನ್ನು ರದ್ದುಗೊಳಿಸಿದ ಪ್ರಯಾಣಿಕರು, ಇನ್ಮುಂದೆ ಮರುಪಾವತಿಗಾಗಿ 48 ರಿಂದ 72 ಗಂಟೆಗಳ ಕಾಲ ಕಾಯಬೇಕಾಗಿಲ್ಲ. 


COMMERCIAL BREAK
SCROLL TO CONTINUE READING

IRCTC-ipay ವೈಶಿಷ್ಟ್ಯವನ್ನೂ ಕೂಡ ಅಪ್ಗ್ರೇಡ್ ಮಾಡಲಾಗಿದೆ
IRCTC-ipay ಅನ್ನು 2019 ರಲ್ಲಿ ಡಿಜಿಟಲ್ ಇಂಡಿಯಾ (Digital India) ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರವು (Central Government) ಆರಂಭಿಸಿತ್ತು. ಇದೀಗ ಈ ಸೌಲಭ್ಯಕ್ಕಾಗಿ ಐಆರ್‌ಸಿಟಿಸಿ (IRCTC) ತನ್ನ ವೆಬ್‌ಸೈಟ್‌ನಲ್ಲಿ ಬದಲಾವಣೆಗಳನ್ನು ಸಹ ಮಾಡಿದೆ. ಈ ಹೊಸ ವ್ಯವಸ್ಥೆಯಲ್ಲಿ, ತತ್ಕಾಲ್ ಮತ್ತು ಸಾಮಾನ್ಯ ಟಿಕೆಟ್‌ಗಳನ್ನು ಕಾಯ್ದಿರಿಸುವುದರ ಜೊತೆಗೆ, ರದ್ದತಿ ಸೌಲಭ್ಯವೂ ಲಭ್ಯವಿರುತ್ತದೆ. ರೈಲು ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ, ಐಆರ್‌ಸಿಟಿಸಿ ತನ್ನ ಬಳಕೆದಾರ ಇಂಟರ್ಫೇಸ್ ಜೊತೆಗೆ ಐಆರ್‌ಸಿಟಿಸಿ-ಐಪೇ ವೈಶಿಷ್ಟ್ಯವನ್ನು ನವೀಕರಿಸಿದೆ.


ಇದನ್ನೂ ಓದಿ-Tablet For Coronavirus: ಕೇವಲ ಒಂದೇ ಒಂದು ಮಾತ್ರೆಯಿಂದ ಕೊರೊನಾ ಚಿಕಿತ್ಸೆ! ವಿಶ್ವದ ಟಾಪ್ ವಿಜ್ಞಾನಿಗಳು ಹೇಳಿದ್ದೇನು?


ಈ ಕಾರಣದಿಂದಾಗಿ, ಟಿಕೆಟ್ ಕಾಯ್ದಿರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಐಆರ್‌ಸಿಟಿಸಿ ನಿರಂತರವಾಗಿ ನವೀಕರಣವನ್ನು ಮಾಡುತ್ತಿದೆ. ಡಿಜಿಟಲ್ ವಹಿವಾಟಿನ ಬಳಕೆಯ ಜೊತೆಗೆ, ಆನ್‌ಲೈನ್ ಬುಕಿಂಗ್ ಕೂಡ ವೇಗ ಪಡೆದುಕೊಳ್ಳಲಿದೆ. IPO ಜಾರಿಗೆ ಬಂದ ಬಳಿಕ, ಕಂಪನಿಯ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಲಾಕ್ ಡೌನ್ ಸಮಯದಲ್ಲಿ ಕಂಪನಿಯ ಷೇರುಗಳು ಗಮನಾರ್ಹ ಕುಸಿತ ಕಂಡಿದೆ. ಆದರೆ ಕರೋನಾದ ಅಲೆಯು ನಿಧಾನವಾದ ತಕ್ಷಣ, ಅದರ ಷೇರುಗಳಲ್ಲಿ ಸಾಕಷ್ಟು ಸುಧಾರಣೆ ಕೂಡ ಕಂಡುಬಂದಿವೆ. ಪ್ರಯಾಣ, ಪ್ರವಾಸೋದ್ಯಮ ಕ್ಷೇತ್ರವು ಮತ್ತೆ ಜಾರಿಗೆ ಬಂದ ತಕ್ಷಣ, ಅದರ ಷೇರುಗಳು ಮತ್ತೆ ಜಿಗಿತವನ್ನು ನೋಡಬಹುದು. ದೇಶದ ಹಲವು ನಗರಗಳಲ್ಲಿ ಇದೀಗ ಲಾಕ್ ಡೌನ್ ಅನ್ನು ಸಡಿಲಿಸಲಾಗುತ್ತಿದ್ದು,  ಪ್ರವಾಸ, ಪ್ರವಾಸೋದ್ಯಮ ಹಾಗೂ ಹಾಸ್ಪಿಟ್ಯಾಲಿಟಿ ಉದ್ಯಮ ಮತ್ತೆ ಹೊಸ ವೇಗ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.


ಇದನ್ನೂ ಓದಿ-International Yoga Day 2021: PM Modiಯಿಂದ mYoga App ಬಿಡುಗಡೆ, ನಿಮ್ಮ ಈ Yoga Buddy ಕುರಿತಾದ ಡೀಟೇಲ್ಸ್ ಇಲ್ಲಿದೆ


IRCTC iPay ಮೂಲಕ ಈ ರೀತಿ ಟಿಕೆಟ್ ಬುಕ್ ಮಾಡಿ
>> www.irctc.co.in ಮೇಲೆ ಮೊದಲು ಕ್ಲಿಕ್ಕಿಸಿ.
>> ಯಾತ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒದಗಿಸಿ.
>> ವೆಬ್ ಸೈಟ್ ನಲ್ಲಿ credentials ಗಳನ್ನು ನಮೂದಿಸಿ.
>> ಪ್ಯಾಸೆಂಜರ್ ವಿವರಗಳನ್ನು ಭರ್ತಿ ಮಾಡಿ. 
>> Mode of payment ಆಯ್ಕೆ ಮಾಡಿ.
>> ಟಿಕೆಟ್ ಬುಕ್ ಮಾಡಲು IRCTC ipay option ಆಯ್ಕೆ ಮಾಡಿ.
>> Pay ಮೇಲೆ ಕ್ಲಿಕ್ಕಿಸಿ ಟಿಕೆಟ್ ಬುಕ್ ಮಾಡಿ.


ಇದನ್ನೂ ಓದಿ-Big Expose: 1 ಸಾವಿರ ಜನರನ್ನು ಮತಾಂತರಗೊಳಿಸಿದ ಆರೋಪದಡಿ ಇಬ್ಬರನ್ನು ಬಂಧಿಸಿದ ATS ಅಧಿಕಾರಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.