Tablet For Coronavirus: ಕೇವಲ ಒಂದೇ ಒಂದು ಮಾತ್ರೆಯಿಂದ ಕೊರೊನಾ ಚಿಕಿತ್ಸೆ! ವಿಶ್ವದ ಟಾಪ್ ವಿಜ್ಞಾನಿಗಳು ಹೇಳಿದ್ದೇನು?

Tablet For Coronavirus - ಅಮೆರಿಕದ (America) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ (US-NIH) ವಿಜ್ಞಾನಿಗಳು ಪ್ರಸ್ತುತ 'ವಿಶೇಷ' ಆಂಟಿವೈರಲ್ ಔಷಧಿಯನ್ನು (Anti-Viral Drug) ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ, ಇದು ಕೇವಲ ಕರೋನವೈರಸ್ (Coronavirus) ಅನ್ನು ಮಾತ್ರ ಸೋಲಿಸದೆ, ಭವಿಷ್ಯದಲ್ಲಿ ಬರುವ ಇತರ ಅಪರಿಚಿತ ಸಾಂಕ್ರಾಮಿಕ ರೋಗಗಳಿಂದಲೂ ಮನುಷ್ಯರ ಪ್ರಾಣ ಉಳಿಸಬಹುದು ಎನ್ನಲಾಗಿದೆ . ವಿಜ್ಞಾನಿಗಳು ಈ ಔಷಧಿಯನ್ನು ಟ್ಯಾಬ್ಲೆಟ್ (Tablet) ರೂಪದಲ್ಲಿ ತಯಾರಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- ಯಾವ ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಹಾಗೂ ICU ಅವಶ್ಯಕತೆ ಬೀಳಲಿದೆ ಹೇಳುತ್ತೆ ಈ ಸಾಫ್ಟ್ ವೆಯರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

1. ಅಮೆರಿಕಾದ ರಾಷ್ಟ್ರಪತಿಗಳಿಂದ ಫಂಡ್ ಜಾರಿ - ಇತ್ತೀಚೆಗಷ್ಟ ಯುಎಸ್ ಅಧ್ಯಕ್ಷ ಜೋ ಬಿಡನ್ (US President Joe Biden) ಅವರ ಸರ್ಕಾರವು ಅಮೆರಿಕನ್ ರೆಸ್ಕ್ಯೂ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ  3 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಅಂದರೆ ಸುಮಾರು 22,243 ಕೋಟಿ ರೂಪಾಯಿಗಳು. ಇದರಿಂದ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಆಂಟಿವೈರಲ್ ಔಷಧಿಯ ತಂತ್ರವನ್ನು ತಯಾರಿಸಬಹುದು ಮತ್ತು ಔಷಧಿಯನ್ನು ಅಭಿವೃದ್ದಿಪಡಿಸಬಹುದು.

2 /5

2. ಕಾಯಿಲೆಗಳಿಗೆ ಮಾತ್ರೆಗಳು ಅತ್ಯುತ್ತಮ ಆಯ್ಕೆಗಳಿವೆ - ಈ ಕುರಿತು ಹೇಳಿಕೆ ನೀಡಿರುವ ಅಮೆರಿಕಾದ ಅಧ್ಯಕ್ಷ ಬಿಡೆನ್‌ನ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ (Dr. Anthoney Fouchi), "ಯಾವುದೇ ಕಾಯಿಲೆಗೆ ಮಾತ್ರೆಗಳು ಅತ್ಯುತ್ತಮ ಆಯ್ಕೆಗಗಳಾಗಿವೆ. ಭವಿಷ್ಯದಲ್ಲಿ ಸೇವನೆ ಮಾಡಬಹುದಾದಂತಹ ಔಷಧಿಗಳು ಬರಲಿದ್ದು, ಇವು ಕೋವಿಡ್ -19 (Covid-19) ನಿಂದ ರಕ್ಷಣೆ ನೀಡುತ್ತದೆ ಮತ್ತು ನಾವು ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ" ಎಂದು ಹೇಳಿದ್ದಾರೆ.

3 /5

3. ಆಂಟಿ ವೈರಲ್ ಔಷಧಿ ತಯಾರಿಕೆಗೆ ಕೋಟ್ಯಾಂತರ ವೆಚ್ಚ - ಈ ಸಂದರ್ಭದಲ್ಲಿ ಮಾತನಾಡಿರುವ ಡಾ. ಫೌಸಿ, ಅಮೆರಿಕದ ರೆಸ್ಕ್ಯೂ ಯೋಜನೆಯ ಬಹುಪಾಲು ಭಾಗವನ್ನು ಕೋವಿಡ್ -19  ಔಷಧಿಗಳ ಸಂಶೋಧನೆ ಮತ್ತು ತಯಾರಿಕೆಯಲ್ಲಿ ಖರ್ಚು ಮಾಡಲಾಗುವುದು ಎಂದಿದ್ದಾರೆ.  ಬಳಿಕ ಅಂಕಿಅಂಶಗಳ ಕುರಿತು ಮಾತನಾಡಿರುವ ಅವರು , ಆಂಟಿವೈರಲ್ ಔಷಧಿ ತಯಾರಿಸಲು 22,243 ಕೋಟಿ ರೂ.ಗಳಲ್ಲಿ 8897 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದಿದ್ದಾರೆ.

4 /5

4. ವಿಶ್ವದ ಅತ್ಯುತ್ತಮ ವಿಜ್ಞಾನಿಗಳು ಈ ಔಷಧಿಯನ್ನು ತಯಾರಿಸಲಿದ್ದಾರೆ - ಪಾಪ್ಯುಲರ್ ಸೈನ್ಸ್ ಮ್ಯಾಗಜೀನ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, 'ಯಾವುದೇ ಔಷಧಿಯನ್ನು ತಯಾರಿಸಲು ಬಹಳ ದೀರ್ಘಾವಧಿಯ ಸಂಶೋಧನೆ ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ನಾವು ಔಷಧಿಗಳನ್ನು ತಯಾರಿಸುವ ಬಗ್ಗೆ ಮಾತನಾಡುವಾಗ, ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ತಂಡವು ಅದರ ಮೇಲೆ ಕಾರ್ಯನಿರ್ವಹಿಸಲಿದೆ ಎಂದು ಫೌಸಿ ಹೇಳಿದ್ದಾರೆ. ಇಂತಹ ಔಷಧಿ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

5 /5

5. ಯಾವುದೇ ವ್ಯಾಕ್ಸಿನ್ ಶೇ.100 ಪ್ರಭಾವಶಾಲಿ ಅಲ್ಲ - ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವೈರಸ್ ವಿರುದ್ಧ ಹೋರಾಡಲು ಅತ್ಯಂತ ಪರಿಣಾಮಕಾರಿ ಔಷಧಿ ಎಂದರೆ ಅದು ಲಸಿಕೆ ಮಾತ್ರ ಎನ್ನಲಾಗುತ್ತಿದೆ.  ಆದರೆ ಯಾವುದೇ ಲಸಿಕೆ 100% ಪರಿಣಾಮಕಾರಿಯಲ್ಲ. ಅದಕ್ಕಾಗಿಯೇ ಜಗತ್ತಿಗೆ ವಿವಿಧ ರೀತಿಯ ಚಿಕಿತ್ಸೆಯ ಅಗತ್ಯವಿದೆ. ವಿಜ್ಞಾನಿಗಳು ಈ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಲಿಯವರೆಗೆ ನೀವೆಲ್ಲರೂ ಮಾಸ್ಕ್ ಧರಿಸಿ, ನಿಯಮಿತವಾಗಿ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ, ಸುರಕ್ಷಿತವಾಗಿರಿ.