ನೀವೂ ಸಮುದ್ರ ಮತ್ತು ಹಸಿರನ್ನು ಇಷ್ಟ ಪಡುತ್ತೀರೇ... ಐಲೆಂಡ್ ನಲ್ಲಿ ಕೆಲವು ಸಮಯವನ್ನು ಕಳೆಯಲು ನಿಮಗೂ ಆಸಕ್ತಿ ಇದೆಯೇ? ಐಲೆಂಡ್ ಗೆ ಪ್ರವಾಸ ಕೈಗೊಳ್ಳುವುದರಿಂದ ಜೇಬಿಗೆ ನಷ್ಟ ಎಂದು ಯೋಸಿಸುತ್ತಿದ್ದಿರೆ? IRCTC ನಿಮ್ಮ ಆಶಯವನ್ನು ಪೂರೈಸಲಿದೆ. ಅದುವೇ ಕಡಿಮೆ ವೆಚ್ಚದಲ್ಲಿ.


COMMERCIAL BREAK
SCROLL TO CONTINUE READING


IRCTC(ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ) ಅಂಡಮಾನ್ ಪ್ರವಾಸಕ್ಕಾಗಿ ಒಂದು ದೊಡ್ಡ ಆಫರ್ ಅನ್ನು ನೀಡಿದೆ. ಇದು ಕೋಲ್ಕತಾದಿಂದ ಅಂಡಮಾನ್ಗೆ, 4 ರಾತ್ರಿ ಮತ್ತು 5 ಹಗಲಿನ ಪ್ರವಾಸದ ಪ್ಯಾಕೇಜ್. IRCTCಯ ಅಧಿಕೃತ ವೆಬ್ಸೈಟ್ ಪ್ರಕಾರ, ಇಂಡಿಗೊ ಎಕಾನಮಿ ಕ್ಲಾಸ್ ವಿಮಾನದಲ್ಲಿ ನೀವು ಕೊಲ್ಕತ್ತಾದಿಂದ ಅಂಡಮಾನ್ಗೆ ಪ್ರಯಾಣಿಸುತ್ತೀರಿ.



2018 ರ ಆಗಸ್ಟ್ 15 ರಂದು ಪ್ರಾರಂಭವಾಗುವ ಪ್ರವಾಸಕ್ಕಾಗಿ, ಪ್ರತಿ ವ್ಯಕ್ತಿಗೆ 21,120 ರೂ.(ಟ್ರಿಪಲ್ ಆಕ್ಯುಪೆನ್ಸಿ ಸೆಗ್ಮೆಂಟ್) ವೆಚ್ಚ ತಗುಲಲಿದೆ ಇದರಲ್ಲಿ ಜಿಎಸ್ಟಿ ಒಳಗೊಂಡಿದೆ. ಮಕ್ಕಳ ಹಾಸಿಗೆಯೊಂದಿಗೆ ಡಬಲ್ ಆಕ್ಯುಪೆನ್ಸಿಯಲ್ಲಿ, IRCTCಗೆ ರೂ. 21,760 ಮತ್ತು ಮಗುವಿಗೆ ರೂ. 19,815 ಪಾವತಿಸಬೇಕಾಗುತ್ತದೆ. 



ಇಂಡಿಗೋ ವಿಮಾನವು(6E-282)  ಕೋಲ್ಕತಾದಿಂದ ಆಗಸ್ಟ್ 15ರಂದು ಬೆಳಿಗ್ಗೆ 07:35 ಗಂಟೆಗೆ ಹೊರಟು ಬೆಳಿಗ್ಗೆ 09:50ಕ್ಕೆ ಪೋರ್ಟ್ ಬ್ಲೇರ್ ತಲುಪಲಿದೆ. ಆಗಸ್ಟ್ 19ರಂದು ಮಧ್ಯಾಹ್ನ 12:35ಕ್ಕೆ ಪೋರ್ಟ್ ಬ್ಲೇರ್ ನಿಂದ ಇಂಡಿಗೋ ವಿಮಾನ(6E-6616) ಕೊಲ್ಕತ್ತಾಗೆ ಬರಲಿದೆ. ಪ್ಯಾಕೇಜ್ನಲ್ಲಿರುವ ಎಲ್ಲಾ ವಸತಿ ಸೌಕರ್ಯಗಳು ಡಬಲ್ ಹಂಚಿಕೆ ಆಧಾರದ ಮೇಲೆ ಎಸಿ ಸೌಕರ್ಯವನ್ನು ಸಹ ಒಳಗೊಂಡಿರುತ್ತದೆ. ಇದಲ್ಲದೆ, ಪ್ರವೇಶ ಅನುಮತಿ, ಪ್ರವೇಶ ಟಿಕೆಟ್ಗಳು, ದೋಣಿ ಟಿಕೆಟ್ಗಳು, ಅರಣ್ಯ ಪ್ರದೇಶದ ಪರವಾನಿಗೆ ಇತ್ಯಾದಿಗಳನ್ನು ಸಹ ಸೇರಿಸಲಾಗುವುದು.


1 ರಿಂದ 4 ವರ್ಷ ನಡುವಿನ ಮಕ್ಕಳ ಪ್ರಯಾಣದ ವೆಚ್ಚ ಪೂರಕವಾಗಿರುತ್ತದೆ. ಮಕ್ಕಳು ಹೋಟಲ್ ನಲ್ಲಿ ತಮ್ಮ ಪೋಷಕರೊಂದಿಗೆ ತಂಗಲು ಅವಕಾಶವಿದೆ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ವಿಮಾನ ಟಿಕೆಟ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ IRCTC ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ www.irctctourism.com ಗೆ ಭೇಟಿ ನೀಡಿ. (ಫೋಟೋ ಕೊಡುಗೆ: @Twitter)