Insurance ಅವಧಿ ಆಯ್ಕೆಗೆ IRDAI ನಿಂದ ಸಿಕ್ತು ಸ್ವಾತಂತ್ರ್ಯ...ಇಲ್ಲಿದೆ ಡಿಟೇಲ್ಸ್
ಇದರಿಂದ ಒಂದು ವೇಳೆ ನೀವು ದೀರ್ಘಾವಧಿಯ ವಿಮಾ ಯೋಜನೆ (ವಿಮಾ ಯೋಜನೆ) ತೆಗೆದುಕೊಳ್ಳಲು ಬಯಸದಿದ್ದರೆ, ನೀವು ಅಲ್ಪಾವಧಿಗೆ ಯೋಜನೆಯನ್ನು ಕೂಡ ಪಡೆಯಬಹುದಾಗಿದೆ.
ನವದೆಹಲಿ: ಒಂದು ವೇಳೆ ನೀವು ಇನ್ಸೂರೆನ್ಸ್ ಪ್ಲಾನ್ ತೆಗೆದುಕೊಳ್ಳಲು ಯೋಜನೆ ರೂಪಿಸುತ್ತಿದ್ದರೆ ಮತ್ತು ನಿಮಗೆ ದೀರ್ಘಾವಧಿಯ ಯಾವುದೇ ಇನ್ಸೂರೆನ್ಸ್ ಪ್ಲಾನ್ ಬೇಡ ಎಂದಾದಲ್ಲಿ ಇನ್ಮುಂದೆ ನೀವು ಅಲ್ಪಾವಧಿಯ ಯೋಜನೆಯನ್ನೂ ಸಹ ಪಡೆದುಕೊಳ್ಳಬಹುದು. ಹೌದು, ಕೊವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರಕರಣಗಳ ನಡುವೆ ವಿಮಾ ನಿಯಂತ್ರಕ ಪ್ರಾಧಿಕಾರ (IRDAI) ದೇಶದ ಆರೋಗ್ಯ ಮತ್ತು ಸಾಮಾನ್ಯ ವಿಮಾ ಕಂಪನಿಗಳಿಗೆ ಈ ಕುರಿತು ವಿನಾಯ್ತಿ ನೀಡಿದೆ.
ಐಆರ್ಡಿಎಐ ಪ್ರಕಾರ, ಕಂಪನಿಗಳು ಕೊರೊನಾವೈರಸ್ ಸೋಂಕಿನ ವಿರುದ್ಧ ವಿಮಾ ರಕ್ಷಣೆಯನ್ನು ನೀಡುವ ಅಲ್ಪಾವಧಿಯ ಆರೋಗ್ಯ ವಿಮಾ ಪಾಲಿಸಿಯನ್ನು ನೀಡಬಹುದು ಎಂದಿದೆ.
ಇದಕ್ಕೆ ಸಂಬಂಧಿಸಿದಂತೆ ಐಆರ್ಡಿಎಐ ಹೊರಡಿಸಿರುವ ಸುತ್ತೋಲೆ ಪ್ರಕಾರ, ಕೋವಿಡ್ 19 ಸಾಂಕ್ರಾಮಿಕ ರೋಗದ ಎಲ್ಲಾ ವರ್ಗದವರಿಗೂ ವಿಮಾ ರಕ್ಷಣೆಯನ್ನು ಒದಗಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದಿದೆ. ಅದರಲ್ಲೂ ವಿಶೇಷವಾಗಿ ಕೋವಿಡ್ -19 ಮಹಾಮಾರಿಯ ಸಮಯದಲ್ಲಿ ಆರೋಗ್ಯ ಪಾಲಸಿ ಜಾರಿಗೆ ತರುವುದು ಇದು ಕಾಲದ ಬೇಡಿಕೆಯಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಸುತ್ತೋಲೆಯ ಪ್ರಕಾರ, ಅಲ್ಪಾವಧಿಯ ಪಾಲಿಸಿಗಳನ್ನು ಕನಿಷ್ಠ 3 ತಿಂಗಳು ಮತ್ತು ಗರಿಷ್ಠ 11 ತಿಂಗಳವರೆಗೆ ನೀಡಬಹುದು.ಆದರೆ, ಮೂರು ತಿಂಗಳಿಗಿಂತ ಕಡಿಮೆ ಅವಧಿಯ ಪಾಲಿಸಿಯನ್ನು ನೀಡಲು ಅನುಮತಿಸಲಾಗಿಲ್ಲ.
ಮಾರ್ಗಸೂಚಿಗಳ ಪ್ರಕಾರ, ಪಾಲಿಸಿಯ ಅವಧಿ ಮೂರು ತಿಂಗಳಿಂದ 11 ತಿಂಗಳವರೆಗೆ ಇರಲಿದೆ. ಈ ನೀತಿ ಒಬ್ಬ ವ್ಯಕ್ತಿ ಅಥವಾ ಒಂದು ನಿರ್ಧಿಷ್ಟ ಗುಂಪಿಗೆ ಅನ್ವಯಿಸಲಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಐಆರ್‌ಡಿಎಐ ಪ್ರಕಾರ ಎಲ್ಲಾ ವಿಮಾ ಕಂಪನಿಗಳಿಗೆ (ಲೈಫ್, ಜನರಲ್ ಮತ್ತು ಹೆಲ್ತ್) ಮಾರ್ಗಸೂಚಿಗಳ ಅಡಿಯಲ್ಲಿ ಕೋವಿಡ್ -19 ಗಾಗಿ ಅಲ್ಪಾವಧಿಗೆ ಆರೋಗ್ಯ ವಿಮಾ ಪಾಲಿಸಿಗಳನ್ನು ನೀಡುವುದರಿಂದ ವಿನಾಯಿತಿ ನೀಡಲಾಗಿದೆ.
ಪ್ರಾಧಿಕಾರ ನೀಡಿದ ಈ ಸಡಿಲಿಕೆಯಿಂದ ಎಸ್‌ಬಿಐ ಲೈಫ್, ಎಚ್‌ಡಿಎಫ್‌ಸಿ ಲೈಫ್, ಐಸಿಐಸಿಐ ಪ್ರುಡೆನ್ಷಿಯಲ್ ಗಳಂತಹ ಲಿಸ್ಟೆಡ್ ಕಂಪನಿಗಳಿಗೆ ಭಾರಿ ಅವಕಾಶ ಸಿಕ್ಕಂತಾಗಿದೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.