ಕ್ರಿಕೆಟ್ ಆಟಗಾರ ಇರ್ಫಾನ್ ಖಾನ್ ರಾಜಕೀಯಕ್ಕೆ ಎಂಟ್ರಿ ..?
ಗೌತಮ್ ಗಂಭೀರ್ ಇತ್ತೀಚಿಗೆ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಕ್ರಿಕೆಟ್ ಆಟಗಾರ ರಾಜಕೀಯಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಗೌತಮ್ ಗಂಭೀರ್ ಇತ್ತೀಚಿಗೆ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಕ್ರಿಕೆಟ್ ಆಟಗಾರ ರಾಜಕೀಯಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ವಡೋದರಾದಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿದ ವೇಗದ ಬೌಲರ್ ಇರ್ಫಾನ್ ಖಾನ್ " ನಾನು ಇದುವರೆಗೆ ದೇಶಕ್ಕಾಗಿ ಕ್ರಿಕೆಟ್ ಆಡಿದ್ದೇನೆ, ಇನ್ಮುಂದೆ ಸಮಯ ಸಿಕ್ಕರೆ ದೇಶಕ್ಕಾಗಿ ಸೇವೆ ಮಾಡುವುದಾಗಿ ಹೇಳಿದ್ದಾರೆ. ಸಹ ಆಟಗಾರ ಗೌತಮ್ ಗಂಭೀರ್ ರಾಜಕೀಯ ಸೇರಿರುವುದಕ್ಕೆ ಇರ್ಫಾನ್ ಪಠಾನ್ ಅವರು ಅಭಿನಂಧನೆ ಸಲ್ಲಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲಸ,ಪ್ರಯಾಣ ,ಮತದಾನ ಎಂದು ಬರೆದುಕೊಂಡಿದ್ದರು. ಇರ್ಫಾನ್ ಪಠಾನ್ ಇದುವರೆಗೆ ಭಾರತದ ಪರವಾಗಿ 120 ಏಕದಿನ, ಹಾಗೂ 29 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ.2007 ರಲ್ಲಿ ಟ್ವೆಂಟಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.