ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಅಖಾಡಕ್ಕೆ ಇಲಿಯಲಿದ್ದಾರೆಯೇ? ಎಂಬ ಪ್ರಶ್ನೆ ಬಹಳ ದಿನಗಳಿಂದ ಅವರನ್ನು ಸುತ್ತುವರೆದಿದೆ. ಈ ಕುರಿತಂತೆ ಮಾತನಾಡಿರುವ ಅವರು ಡಿ. 31ಕ್ಕೆ ಈ ಕುರಿತು ಅಂತಿಮ ತೀರ್ಮಾನವನ್ನು ಘೋಷಿಸುವುದಾಗಿ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ತನ್ನ ಅಭಿಮಾನಿಗಳೊಂದಿಗೆ ಅವರ ಆರು ದಿನಗಳ ಫೋಟೊ ಸೆಷನ್ ಕಾರ್ಯಕ್ರಮದ ಮೊದಲ ದಿನದಲ್ಲಿ ಮಾತನಾಡಿದ ತಲೈವ, "ರಾಜಕೀಯ ನಿಯಮಗಳು ಹಾಗೂ ನಿಬಂಧನೆಗಳು ತಿಳಿದಿದೆ. ನಾನು ರಾಜಕೀಯಕ್ಕೆ ಹೊಸಬನಲ್ಲ. ಆದರೆ ರಾಜಕೀಯ ಪ್ರವೇಶ ಮಾಡುವುದನ್ನು ನಿಧಾನಿಸುತ್ತಿದ್ದೇನೆ. ರಾಜಕೀಯ ಪ್ರವೇಶ ಮತ್ತು ವಿಜಯ ಎರಡೂ ಸಮಾನತೆಯನ್ನು ಹೊಂದಿದೆ. ಈ ಬಗ್ಗೆ ಡಿಸೆಂಬರ್ 31 ರಂದು ತಮ್ಮ ನಿಲುವನ್ನು ಘೋಷಿಸುತ್ತೇನೆ" ಎಂದು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಇದೇ ರೀತಿಯ ಘಟನೆಯಲ್ಲಿ ಅವರ ಅಭಿಮಾನಿಗಳಿಗೆ ಮಾತನಾಡುತ್ತಾ, 67 ವರ್ಷ ವಯಸ್ಸಿನ ನಟ "ಯುದ್ಧವು ಬಂದಾಗ, ನಾವು ಹೋರಾಡುತ್ತೇವೆ" ಎಂದು ಹೇಳಿದ್ದರು. ನಂತರ ಅವರ ಈ ಹೇಳಿಕೆ ರಜನಿ ರಾಜಕೀಯ ಪ್ರವೇಶಿಸುವ ಸಾಧ್ಯತೆಯ ಸಂಕೇತವಾಗಿ ಕಂಡು ಬಂದಿತ್ತು.


ಹಲವು ವರ್ಷಗಳಿಂದ ರಜನಿಕಾಂತ್ ಅವರ ಆಲೋಚನೆಗಳನ್ನು ರಾಜಕೀಯಕ್ಕೆ ಒಳಪಡಿಸಲಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ. ಈಗಾಗಲೇ ಅವರಿಗೆ ಬಿಜೆಪಿಯಿಂದ ಆಹ್ವಾನ ನೀಡಲಾಗಿದೆ. ಆದರೆ ಅವರು ಈ ಆಹ್ವಾನವನ್ನು ಸ್ವೀಕರಿಸಲಿಲ್ಲ. ಆದಾಗ್ಯೂ, ಅವರ ಕೆಲವು ವಿಚಾರಗಳು ಬಿಜೆಪಿ ಪರವಾಗಿ ಇರುವುದರಿಂದ  ತಲೈವ ಭಾರತೀಯ ಜನತಾ ಪಾರ್ಟಿ ಸೇರಬಹುದೆಂದು ಊಹಿಸಲಾಗಿದೆ. ಆದರೆ ರಜನಿಕಾಂತ್ ಬಿಜೆಪಿಗೆ ಸೇರುವ ಯಾವುದೇ ಸೂಚನೆ ನೀಡಿಲ್ಲ.


ಈಗ ಪ್ರತಿಯೊಬ್ಬರ ಕಣ್ಣುಗಳು ಡಿಸೆಂಬರ್ 31 ರತ್ತ ನೆಟ್ಟಿದೆ. ರಜನಿಕಾಂತ್ ದಕ್ಷಿಣ-ಸಿನಿಮಾ ಸೂಪರ್ಸ್ಟಾರ್ ಮಾತ್ರವಲ್ಲ, ಅವರನ್ನು ದೇವರಾಗಿ ನೋಡಲಾಗುತ್ತದೆ. ದಕ್ಷಿಣದಲ್ಲಿ ಅವರ ಅಭಿಮಾನಿಗಳು ಕೂಡಾ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಇದೀಗ ರಜಿನಿ ಯಾವುದಾದರೂ ಪಕ್ಷ ಸೇರುವರೇ? ಅಥವಾ ತಮ್ಮದೇ ಪಕ್ಷವನ್ನು ಸ್ಥಾಪಿಸುವರೆ ಎಂಬುದು ನಿಜವಾಗಿಯೂ ಆಸಕ್ತಿದಾಯಕವಾಗಿದೆ.