ನವದೆಹಲಿ: ಇವು ಭಾರತೀಯ ಪ್ರಜಾಪ್ರಭುತ್ವಕ್ಕೆ ಪರೀಕ್ಷಾ ಸಮಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಸಂದೇಶದಲ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ 'ಪ್ರಸ್ತುತ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು ಮತ್ತು ಸ್ಥಾಪಿತ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ತೋರುತ್ತದೆ. ಇವು ಭಾರತೀಯ ಪ್ರಜಾಪ್ರಭುತ್ವಕ್ಕೂ ಪರೀಕ್ಷಾ ಸಮಯಗಳಾಗಿವೆ" ಎಂದು ಹೇಳಿದರು.


ಇದನ್ನು ಓದಿ: ಭಾರತೀಯ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದ್ದೇಗೆ? ಎನ್ನುವುದನ್ನು ಪ್ರಧಾನಿ ತಿಳಿಸಲಿ-ಸೋನಿಯಾ ಗಾಂಧಿ


'ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರ್ಯವನ್ನು ಹಾಗೇ ಉಳಿಸಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮತ್ತು ಹೋರಾಟವನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.ಇಂದು ದೇಶದಲ್ಲಿ ಬರೆಯಲು, ಮಾತನಾಡಲು, ಪ್ರಶ್ನೆಗಳನ್ನು ಕೇಳಲು, ಒಪ್ಪಲು, ಅಭಿಪ್ರಾಯಗಳನ್ನು ಹೊಂದಲು, ಹೊಣೆಗಾರಿಕೆಯನ್ನು ಪಡೆಯಲು ಸ್ವಾತಂತ್ರ್ಯವಿದೆಯೇ?" ಎಂದು ಅವರು ಪ್ರಶ್ನಿಸಿದರು.


ಇದನ್ನು ಓದಿ: ಭಾರತ-ಚೀನಾ ಬಿಕ್ಕಟ್ಟು: ಹಲವು ವಿಷಯಗಳಲ್ಲಿ ನಾವಿನ್ನೂ ಕತ್ತಲೆಯಲ್ಲಿದ್ದೇವೆ-ಸೋನಿಯಾ ಗಾಂಧಿ 


ಇದೆ ವೇಳೆ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ ದೇಶಕ್ಕಾಗಿ 20 ಸೈನಿಕರು ಸಾವನ್ನಪ್ಪಿ 60 ದಿನಗಳು ಕಳೆದಿವೆ ಎಂದು ಹೇಳಿದರು.


ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶ್ರೀಮತಿ ಸೋನಿಯಾಗಾಂಧಿ ಭಾಗವಹಿಸಲಿಲ್ಲ.ಪಕ್ಷದ ಪ್ರಧಾನ ಕಚೇರಿಯಲ್ಲಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಎ.ಕೆ.ಆಂಟನಿ ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಅಹ್ಮದ್ ಪಟೇಲ್, ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಅಧೀರ್ ರಂಜನ್ ಚೌಧರಿ, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಲಾ ಉಪಸ್ಥಿತರಿದ್ದರು.