ನಿಮ್ಮ ಬಳಿ ಇರುವ Pan Card ಅಸಲಿಯೇ? ಅದನ್ನು ಹೀಗಿ ಪರಿಶೀಲಿಸಿ
ನೀವು ಇನ್ನೂ ಪ್ಯಾನ್ ಕಾರ್ಡ್ ಮಾಡಿಸದಿದ್ದರೆ ಸರ್ಕಾರವು ಅದನ್ನು ನಿಮಿಷಗಳಲ್ಲಿ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ.
ನವದೆಹಲಿ: ಪ್ಯಾನ್ ಕಾರ್ಡ್ ಸರ್ಕಾರಿ ದಾಖಲೆಯಾಗಿದೆ. ಇದು ಬ್ಯಾಂಕಿಂಗ್ (Banking) ಮತ್ತು ಇತರ ಹಣಕಾಸು ವಿಷಯಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಬ್ಯಾಂಕ್ ಖಾತೆ ಮತ್ತು ಇತರ ಹಣಕಾಸು ಕಾರ್ಯಗಳ ನಿರ್ವಹಣೆಗೆ ನೀವು ಪ್ಯಾನ್ ಕಾರ್ಡ್ (PAN Card) ಅನ್ನು ಹೊಂದುರುವುದು ಕಡ್ಡಾಯವಾಗಿದೆ. ಆದರೆ ಈ ದಿನಗಳಲ್ಲಿ ಎಲ್ಲೆಡೆ ವಂಚನೆ ಹೆಚ್ಚಾಗಿರುವುದರಿಂದ ನಿಮ್ಮ ಪ್ಯಾನ್ ಕಾರ್ಡ್ ನಕಲಿ ಅಥವಾ ಇಲ್ಲವೇ ಎಂಬ ಭಯವಿದೆಯೇ. ನಿಮ್ಮ ಪ್ಯಾನ್ ಕಾರ್ಡ್‌ನ ಮೂಲವನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಪ್ಯಾನ್ ಬಳಕೆ ಹಣಕಾಸು ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆ 10-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಪ್ಯಾನ್ ಕಾರ್ಡ್ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ.
ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ನಿಯಮ ಅನುಸರಿಸಿ ನಿಮ್ಮ PAN Card ಪಡೆಯಿರಿ
ನಿಮ್ಮ ಪ್ಯಾನ್ ಅನ್ನು ಅಸಲಿಯೇ ಎಂದು ನೀವು ಹೇಗೆ ಗುರುತಿಸಬಹುದು?
ನೀವು ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಬೇಕು.
ಇಲ್ಲಿ ನೀವು ನೇರವಾಗಿ 'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
ಇದರ ನಂತರ ಬಳಕೆದಾರರು ಪ್ಯಾನ್ ಕಾರ್ಡ್‌ನ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಇದರಲ್ಲಿ ನೀವು ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ ಹೊಂದಿರುವವರ ಪೂರ್ಣ ಹೆಸರು, ಅವರ ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ಗೆ ಹೊಂದಿಕೆಯಾಗುತ್ತದೆಯೋ ಇಲ್ಲವೋ ಎಂಬ ಸಂದೇಶ ಪೋರ್ಟಲ್‌ನಲ್ಲಿ ಬರುತ್ತದೆ.
ಈ ರೀತಿಯಾಗಿ ನೀವು ಪ್ಯಾನ್ ಕಾರ್ಡ್ ಅಸಲಿಯೇ? ನಕಲಿಯೇ? ಎಂದು ಸುಲಭವಾಗಿ ಕಂಡುಹಿಡಿಯಬಹುದು.
ಪ್ಯಾನ್ ಕಾರ್ಡ್‌ನ ABCD... ನಂಬರ್ ಹಿಂದಿದೆ ನಿಮ್ಮ ವಿವರ
ಹೆಚ್ಚುತ್ತಿವೆ ನಕಲಿ ಪ್ರಕರಣಗಳು :
ದೇಶಾದ್ಯಂತ ಲಾಕ್ ಡೌನ್ ಬಳಿಕ ಜನರು ನಕಲಿ ಪ್ಯಾನ್ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆಗೆ ಬಲಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಪ್ಯಾನ್ ಕಾರ್ಡ್‌ನ ಸತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ದೇಶದ ಆದಾಯ ತೆರಿಗೆ ಇಲಾಖೆ ನೀಡುವ ಪ್ಯಾನ್ ಕಾರ್ಡ್ ಅನ್ನು ಪರಿಶೀಲಿಸುವುದು ಸಹ ಮುಖ್ಯವಾಗಿದೆ.
ಕೇವಲ ಹತ್ತು ನಿಮಿಷಗಳಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಲು ಇಲ್ಲಿದೆ ಸುಲಭ ವಿಧಾನ
ನಿಮ್ಮ ಪ್ಯಾನ್ ಅನ್ನು ಈ ರೀತಿ ಪಡೆಯಿರಿ:
ನೀವು ಇನ್ನೂ ಪ್ಯಾನ್ ಮಾಡದಿದ್ದರೆ, ಸರ್ಕಾರವು ಅದನ್ನು ನಿಮಿಷಗಳಲ್ಲಿ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಈ ಸೇವೆ ಇನ್ನೂ ಪ್ಯಾನ್ ಮಾಡದವರಿಗೆ. ಇ ಪ್ಯಾನ್‌ಗಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀವು ಒದಗಿಸಬೇಕಾಗುತ್ತದೆ, ಅದರಿಂದ ಒಟಿಪಿ ಉತ್ಪತ್ತಿಯಾಗುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ನಿಮಗೆ ಇ ಪ್ಯಾನ್ (e-PAN) ನೀಡಲಾಗುತ್ತದೆ.