ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಯುವ ಉದ್ಯಮಿ ಆನಂದ್‌ ಪಿರಮಲ್‌ ಅದ್ಧೂರಿ ವಿವಾಹ ಅಂಬಾನಿಯವರ 27 ಅಂತಸ್ತುಗಳ ಅಂಟಿಲಾ ನಿವಾಸದಲ್ಲಿ ನೆರವೇರಿತು.


COMMERCIAL BREAK
SCROLL TO CONTINUE READING

ಈ ಅದ್ದೂರಿ ವಿವಾಹದಲ್ಲಿ ಉದ್ಯಮಿಗಳು, ಕ್ರೀಡಾಪಟುಗಳು, ರಾಜಕೀಯ ಪ್ರಮುಖರು ಹಾಗೂ ಬಾಲಿವುಡ್‌‌‌ನ ಗಣ್ಯಾತಿಗಣ್ಯರು ಭಾಗವಹಿಸಿ ನವ ವಧು-ವರರಿಗೆ ಶುಭಹಾರೈಸಿದರು. 



ಈ ಹೈಫೈಮ್ ಮದುವೆ ಬಗ್ಗೆ ಅತ್ಯಂತ ಗಮನಾರ್ಹ ವಿಷಯವೆಂದರೆ, ತನ್ನ ಬಾಳ ಸಂಗಾತಿಯಾಗುತ್ತಿರುವ ಇಶಾ ಅಂಬಾನಿಯನ್ನು ಆನಂದ್ ಪಿರಮಲ್ ಮಂಟಪದಲ್ಲಿ ಕೈಜೋಡಿಸಿ ಸ್ವಾಗತಿಸಿದರು. ಇದು ಒಂದು ಸಣ್ಣ ಕ್ಷಣವಾದರೂ, ಭಾವನಾತ್ಮಕವಾಗಿತ್ತು.


ಈ ಸಂದರ್ಭದಲ್ಲಿ ವರ ಆನಂದ್ ಪಿರಮಲ್ ಕಾರಿನಲ್ಲಿ ಮಂಟಪ ತಲುಪಿದರು. ವಧು ಇಶಾ ಅಂಬಾನಿ ಅಪ್ಸರೆಯಂತೆ ಕಾಣುತ್ತಿದ್ದರು.



ಈ ಅದ್ಧೂರಿ ವಿವಾಹದಲ್ಲಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ನವ ಜೋಡಿಗಳಾದ ನಿಕ್ ಜೊನಸ್ ಮತ್ತು ಪ್ರಿಯಾಂಕ ಚೋಪ್ರ ವಿವಾಹ ಸಂಭ್ರಮದಲ್ಲಿ ಭಾಗವಹಿಸಿದ್ದರೆ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡರು. ಇನ್ನು ಬಾಲಿವುಡ್ ಬಿಗ್ ಬಿ ಇಡೀ ಕುಟುಂಬದೊಂದಿಗೆ ಭಾಗವಹಿಸಿದ್ದರು.



ರಾಜಕೀಯ ಕ್ಷೇತ್ರದ ಗಣ್ಯ ವ್ಯಕ್ತಿಗಳಾದ ಮಮತಾ ಬ್ಯಾನರ್ಜಿ, ಡಾ. ಸುಭಾಷ್ ಚಂದ್ರ, ಶರದ್ ಪವಾರ್, ರಾಜ್ನಾಥ್ ಸಿಂಗ್ ಸಹ ಮದುವೆಗೆ ಸಾಕ್ಷಿಯಾದರು. ಶಾರುಖ್, ಅಮೀರ್ ಮತ್ತು ಸಲ್ಮಾನ್ ಖಾನ್ ಕರೀನಾ ಮತ್ತು ಐಶ್ವರ್ಯಾ ರವೀನಾ ಅವರಲ್ಲದೆ ಹಲವು ಬಾಲಿವುಡ್ ತಾರೆಯರು ಉಪಸ್ಥಿತರಿದ್ದರು.


ಇನ್ನು ಕ್ರೀಡಾ ಕ್ಷೇತ್ರದ ಸಚಿನ್ ತೆಂಡೂಲ್ಕರ್ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಮಹೇಶ್ ಭೂಪತಿ ಹಲವರು ಈ ವಿವಾಹದಲ್ಲಿ ಕಾಣಿಸಿಕೊಂಡರು.