ISRO ಮುಖ್ಯಸ್ಥ ಎಸ್ ಸೋಮನಾಥ್’ಗೆ ಕ್ಯಾನ್ಸರ್: Aditya-L1 ಉಡಾವಣೆಯ ದಿನವೇ ಪತ್ತೆಯಾಗಿತ್ತು ಮಾರಕ ಕಾಯಿಲೆ!
ISRO Chief Suffering From Stomach Cancer: ಆದಿತ್ಯ-ಎಲ್ 1 ಉಡಾವಣೆಯಾದ ದಿನದಂದು ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಂದ್ರಯಾನದ ಸಂದರ್ಭದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದರೂ ಸ್ಪಷ್ಟವಾಗಿ ಈ ಬಗ್ಗೆ ತಿಳಿದಿರಲಿಲ್ಲ. ಇದೀಗ ಕಿಮೋಥೆರಪಿ ಕೂಡ ಮಾಡಲಾಗಿದ್ದು, ಔಷಧಿ ಸೇವಿಸಿ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ISRO Chief Suffering From Stomach Cancer: ಚಂದ್ರಯಾನ ಮತ್ತು ಸನ್ ಮಿಷನ್ ಯಶಸ್ವಿಗೊಳಿಸುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಭಾರತಕ್ಕೆ ಕೀರ್ತಿ ತಂದ ಇಸ್ರೋ ಮುಖ್ಯಸ್ಥ ಸೋಮನಾಥ್ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಸ್ವತ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸ್ಕ್ಯಾನಿಂಗ್ ಮಾಡುವಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ, ಸದ್ಯ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ರೋಹಿತ್’ನನ್ನು ಟೀಂ ಇಂಡಿಯಾ ನಾಯಕನಾಗಿ ಮಾಡಿರುವುದು ಇದೇ ಕಾರಣಕ್ಕೆ- ನಿಜ ಬಿಚ್ಚಿಟ್ಟ ಸೌರವ್ ಗಂಗೂಲಿ
ಆದಿತ್ಯ-ಎಲ್ 1 ಉಡಾವಣೆಯಾದ ದಿನದಂದು ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಂದ್ರಯಾನದ ಸಂದರ್ಭದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದರೂ ಸ್ಪಷ್ಟವಾಗಿ ಈ ಬಗ್ಗೆ ತಿಳಿದಿರಲಿಲ್ಲ. ಇದೀಗ ಕಿಮೋಥೆರಪಿ ಕೂಡ ಮಾಡಲಾಗಿದ್ದು, ಔಷಧಿ ಸೇವಿಸಿ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಡಾ. ಸೋಮನಾಥ್ ಅವರು ಚಂದ್ರಯಾನ-3 ಮಿಷನ್ ಉಡಾವಣೆಯಾದ ದಿನಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದಿತ್ಯ ಮಿಷನ್ ಪ್ರಾರಂಭವಾದಾಗಲೂ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಸಾಕಷ್ಟು ಸಮಸ್ಯೆ ಇತ್ತು. ಆದ್ದರಿಂದ ಹೊಟ್ಟೆಯ ಸ್ಕ್ಯಾನ್ ಮಾಡಿಸಿದ್ದರು. ಸ್ಕ್ಯಾನಿಂಗ್ ವರದಿಯಲ್ಲಿ ವೈದ್ಯರು ಕ್ಯಾನ್ಸರ್ ಸಾಧ್ಯತೆ ಬಗ್ಗೆ ಹೇಳಿದ್ದರು. ಇದಾದ ಬಳಿಕ ಕಾಯಿಲೆ ದೃಢಪಡಿಸಿಕೊಳ್ಳಲು ಚೆನ್ನೈಗೆ ತೆರಳಿದ್ದರು. ಅಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರ, ಹೊಟ್ಟೆಯ ಕ್ಯಾನ್ಸರ್ನಿಂದ ಬಳಲುತ್ತಿರುವುದು ಖಚಿತವಾಗಿತ್ತು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ದೃಢಪಡಿಸಿದರು.
ಇದನ್ನೂ ಓದಿ: RCB ಓಪನಿಂಗ್’ನಲ್ಲಿ ದೊಡ್ಡ ಬದಲಾವಣೆ: ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್ ಆರಂಭಿಕ ಜೋಡಿಯಲ್ಲ!
“ಕ್ಯಾನ್ಸರ್‌ನಿಂದ ಬಳಲುತ್ತಿರುವುದು ದೃಢಪಟ್ಟಾಗ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು” ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ. “ಕ್ಯಾನ್ಸರ್ ವಿಷಯ ಕಛೇರಿ ತಲುಪಿತ್ತು, ಆದರೆ ಅವರಿಗೆ ಎಲ್ಲರಿಗೂ ವಿವರಿಸಿ ಹೇಳಲಾಯಿರತು. ಇನ್ನು ಸ್ವಲ್ಪ ವಿರಾಮ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದರು. ಈಗ ಆರೋಗ್ಯವಾಗಿದ್ದರೂ, ಕ್ಯಾನ್ಸರ್ ಚಿಕಿತ್ಸೆಯು ದೀರ್ಘವಾಗಿದೆ. ಆಸ್ಪತ್ರೆಯಲ್ಲಿ ಕೇವಲ 4 ದಿನ ಇದ್ದೆ. 5ನೇ ದಿನಕ್ಕೆ ಆಫೀಸಿಗೆ ಬಂದೆ. ಗಾಬರಿಯಾಗುವ ಅಗತ್ಯವಿಲ್ಲ. ನಾನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ. ಔಷಧೋಪಚಾರ ನಡೆಯುತ್ತಿದೆ. ಮನೆಯವರು ಸಹಾಯಕನನ್ನು ಕಳುಹಿಸಿದ್ದಾರೆ. ಇದೀಗ ನಾನು ಗಗನ್‌ಯಾನ್ ಮಿಷನ್‌ಗಾಗಿ ತಯಾರಿ ನಡೆಸುತ್ತಿದ್ದೇನೆ. ಎಲ್ಲಾ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರವೇ ನನ್ನ ಪ್ರಾಣ ನಿಲ್ಲುವುದು” ಎಂದಿದ್ದಾರೆ ಸೋಮನಾಥ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ