Aakash Chopra Statement on RCB Opening: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮಹಾಟೂರ್ನಿ ಶುರುವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಮೊದಲ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ, ಚೆನ್ನೈನ ಚೆಪಾಕ್ ಮೈದಾನದಲ್ಲಿ ಈ ಸೆಣಸಾಟ ನಡೆಯಲಿದೆ.
ಇದನ್ನೂ ಓದಿ: ನಟನೆ ತೊರೆದು ಸನ್ಯಾಸಿಯಾದ ಪ್ರಖ್ಯಾತ ನಟಿ: ಕೋಟಿ ಕೋಟಿ ಆಸ್ತಿ ತ್ಯಜಿಸಿ ತಪಸ್ವಿಯಾದ ‘ಮಿಸ್ ಇಂಡಿಯಾ’ ಬ್ಯೂಟಿ ಈಕೆ!
ಅಂದಹಾಗೆ ಇದೀಗ ಆರ್ ಸಿಬಿಯಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಓಪನರ್ಸ್ ಆಗಿ ಇವರು ಆಡಲ್ಲ ಎಂಬ ಮಾತು ಕೇಳಿಬರುತ್ತಿದೆ.
ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ನಾಲ್ಕು ಟೆಸ್ಟ್’ಗಳಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದರು. ಧರ್ಮಶಾಲಾ ಟೆಸ್ಟ್’ನಲ್ಲಿ ಪುನರಾಗಮನ ಮಾಡುತ್ತಾರೆ ಎಂದು ಹಲವರು ಭಾವಿಸಿದ್ದರು. ಆದರೆ ಮಂಡಳಿಯು ಐದನೇ ಟೆಸ್ಟ್ಗೆ ತಂಡವನ್ನು ಪ್ರಕಟಿಸಿದ್ದು, ಅದರಲ್ಲೂ ವಿರಾಟ್ ಕೊಹ್ಲಿ ಹೆಸರಿಲ್ಲ.
ಅಂದಹಾಗೆ ರಾಂಚಿ ಟೆಸ್ಟ್ ಬಳಿಕ ಗವಾಸ್ಕರ್ ಪ್ರತಿಕ್ರಿಯಿಸಿದ್ದು, “ವಿರಾಟ್ ಈ ಸರಣಿಯಲ್ಲಿ ಆಡಲಿಲ್ಲ, ಐಪಿಎಲ್’ನಲ್ಲಿ ಆಡುತ್ತಾರಾ?” ಎಂದು ಪ್ರಶ್ನಿಸಿದ್ದರು.
ಮಾಜಿ ರಾಷ್ಟ್ರೀಯ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್’ನಲ್ಲಿ ಮಾತನಾಡಿದ್ದು, ‘ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯನ್ನು ಹೊರಗಿಟ್ಟರೆ, ಫಾಫ್ ಡು ಪ್ಲೆಸಿಸ್ ಆ ಅರ್ಥದಲ್ಲಿ ಫಾರ್ಮ್’ನಿಂದ ಹೊರಗಿದ್ದಾರೆ. ವಿರಾಟ್ ಕೊಹ್ಲಿ ಕೂಡ ಕ್ರಿಕೆಟ್ನಿಂದ ದೂರ ಉಳಿದು ಬಹಳ ದಿನಗಳಾಗಿವೆ. ಅಫ್ಘಾನಿಸ್ತಾನ ಸರಣಿಯ ನಂತರ ವಿರಾಟ್ ಆಡಲಿಲ್ಲ. ಈ ಪರಿಸ್ಥಿತಿಯಲ್ಲಿ ವಿರಾಟ್ ಮತ್ತು ಫಾಫ್ ಓಪನಿಂಗ್ ಸಮಸ್ಯೆಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಸಂಯೋಜನೆಯನ್ನು ಬದಲಾಯಿಸುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: 5ನೇ ಟೆಸ್ಟ್’ನಲ್ಲಿ ಪಡಿಕ್ಕಲ್’ಗೆ ಸಿಗುತ್ತಾ ಅವಕಾಶ? ಕನ್ನಡಿಗ ಎಂಟ್ರಿಕೊಟ್ಟರೆ ಈ ಆಟಗಾರ ಹೊರಕ್ಕೆ
ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ರನ್’ಗಳ ಕೊರತೆ ಕಂಡುಬಂದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ