PSLV-C51/Amazonia-1 Launch: ಬಾಹ್ಯಾಕಾಶದಲ್ಲಿ ಗೀತಾ ಸಂದೇಶದ ಪ್ರತಿಧ್ವನಿ, ಇಂದು ISRO ನಿಂದ PSLV-C51/Amazonia-1 ಉಡಾವಣೆ
PSLV-C51/Amazonia-1: PSLV-C51, ISRO ಮಿಷನ್ ಆಗಿದೆ. ಈ ರಾಕೆಟ್ ಮೂಲಕ ಬ್ರೆಜಿಲ್ ನ Amazonia-1 ಹಾಗೂ ಇತರೆ 18 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ಗಿದೆ. ಈ ರಾಕೆಟ್ ಉಡಾವಣೆಗೆ ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟಾ ಕೇಂದ್ರ ಸಜ್ಜುಗೊಂಡಿದೆ.
ನವದೆಹಲಿ: PSLV-C51/Amazonia-1 - ಆತ್ಮನಿರ್ಭರ್ ಭಾರತ್ ಪಾಲಿಗೆ ಇಂದು ಐತಿಹಾಸಿಕ ದಿನ. ಏಕೆಂದರೆ ಬಾಹ್ಯಾಕಾಶದಲ್ಲಿ 'ಜೈ ಹಿಂದ್' ಪ್ರತಿಧ್ವನಿಸಲಿದೆ. ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಈ ಬಾರಿ ಉಪಗ್ರಹದ ಜೊತೆಗೆ ಭಗವದ್ಗೀತೆಯ ಎಲೆಕ್ಟ್ರಾನಿಕ್ ನಕಲನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ನ್ಯಾನೋ ಉಪಗ್ರಹದಲ್ಲಿ ಪಿಎಂ ನರೇಂದ್ರ ಮೋದಿ (Narendra Modi) ಅವರ ಚಿತ್ರವೂ ಇರಲಿದೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಅನ್ನು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಉಡಾವಣೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ
ಪಿಎಸ್‌ಎಲ್‌ವಿ-ಸಿ 51 ಪಿಎಸ್‌ಎಲ್‌ವಿಯ 53 ನೇ ಮಿಷನ್ ಆಗಿದೆ. ಈ ರಾಕೆಟ್‌ನೊಂದಿಗೆ ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟದಿಂದ ರಾಕೆಟ್ ಉಡಾವಣೆಯಾಗಲಿದೆ. ಈ ಉಪಗ್ರಹಗಳಲ್ಲಿ ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾದ (SKI) ಸತೀಶ್ ಧವನ್ ಎಸ್‌ಎಟಿ (SDSAT) ಶಾಮೀಲಾಗಿವೆ. ಈ ಬಾಹ್ಯಾಕಾಶ ನೌಕೆಯ ಮೇಲಿನ ಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿದೆ. ಇದಲ್ಲದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರನ್ನು ಈ ಕೆಳಗಿನ ಫಲಕದಲ್ಲಿ ಬರೆಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ SKI, 'ಪ್ರಧಾನಿ (Prime Minister Narendra Modi) ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ಒಗ್ಗಟ್ಟು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ' ಎಂದು ಹೇಳಿದೆ.
ಇದನ್ನೂ ಓದಿ-Isro's Bhuvan Vs Google Maps:ವಿದೇಶಿ ಆಪ್ ಮರೆತ್ಹೋಗಿ, ನಿಮಗೆ ದಾರಿ ತೋರಿಸಲಿದೆ ISROದ Bhuvan App
ಡಿಜಿಟಲ್ ಗೀತಾ ಹಾಗೂ 25 ಸಾವಿರ ಭಾರತೀಯರ ಹೆಸರು
ಈ ಮಿಷನ್ ಮೂಲಕ SKI ಡಿಜಿಟಲ್ ಭಗವದ್ಗೀತೆಯನ್ನು ಎಸ್‌ಡಿ (ಸುರಕ್ಷಿತ ಡಿಜಿಟಲ್) ಕಾರ್ಡ್‌ನಲ್ಲಿ ಹಾಕಿ ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ, ಹಾಗೆಯೇ ಈ ಉಪಗ್ರಹವು 25 ಸಾವಿರ ಭಾರತೀಯ ಜನರ ಹೆಸರುಗಳನ್ನು ಕೂಡ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಿದೆ. ಇಸ್ರೋದ ವಾಣಿಜ್ಯ ಕೈ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಗೆ ಇಂದಿನ ದಿನ ತುಂಬಾ ವಿಶೇಷ ದಿನವಾಗಿದೆ. ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ 51 / ಅಮೆಜೋನಿಯಾ -1 ಯುಎಸ್‌ನಲ್ಲಿ ಸಿಯಾಟಲ್‌ನ ಸ್ಯಾಟಲೈಟ್ ರೈಡ್‌ಶೇರ್ ಮತ್ತು ಮಿಷನ್ ಮ್ಯಾನೇಜ್‌ಮೆಂಟ್ ಪ್ರೊವೈಡರ್ ಸ್ಪೇಸ್‌ಪ್ಲೈಟ್ ಇಂಕ್‌ನ ವಾಣಿಜ್ಯ ನಿರ್ವಹಣೆಯಡಿಯಲ್ಲಿ ಪ್ರಾರಂಭಿಸಲಾಗುವ ಎನ್‌ಎಸ್‌ಐಎಲ್‌ನ ಮೊದಲ ಮೀಸಲಾದ ವಾಣಿಜ್ಯ ಮಿಷನ್ ಇದಾಗಿದೆ. ಎನ್‌ಎಸ್‌ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ನಾರಾಯಣ್ ಮಾತನಾಡಿ, 'ನಾವು ಉಡಾವಣೆಗೆ ಕುತೂಹಲದಿಂದ ಕಾಯುತ್ತಿದ್ದೇವೆ. ಬ್ರೆಜಿಲ್‌ನಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವನ್ನು ಉಡಾಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ-ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ Satellite ಓಟಕ್ಕೆ ಮುನ್ನುಡಿ ಬರೆದ ISRO
ಅಮೆಜೋನಿಯಾ -1 ಬ್ರೆಜಿಲ್ ನ ಮೊದಲ ಉಪಗ್ರಹವಾಗಿದೆ
637 ಕೆಜಿ ತೂಕದ ಅಮೆಜೋನಿಯಾ -1 ಭಾರತದಿಂದ ಉಡಾಯಿಸಲ್ಪಡುವ ಬ್ರೆಜಿಲ್‌ನ ಮೊದಲ ಉಪಗ್ರಹವಾಗಿದೆ. ಇದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (INPI) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಅಮೆಜೋನಿಯಾ -1 ಮೂಲಕ ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶದ ಮೇಲ್ವಿಚಾರಣೆ ಮತ್ತು ಬ್ರೆಜಿಲ್ ಪ್ರದೇಶದಲ್ಲಿನ ವೈವಿಧ್ಯಮಯ ಕೃಷಿಯ ವಿಶ್ಲೇಷಣೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹವು ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾ ಒದಗಿಸಲಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ- ಬಾಹ್ಯಾಕಾಶದಲ್ಲಿ ಭಾರತೀಯ, ರಷ್ಯಾ ಉಪಗ್ರಹಗಳು ಮುಖಾಮುಖಿ, ದೊಡ್ಡ ಅನಾಹುತ ತಪ್ಪಿದ್ದೇಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.