ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ Satellite ಓಟಕ್ಕೆ ಮುನ್ನುಡಿ ಬರೆದ ISRO

ISRO - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space Research Organisation) ಯುಆರ್ ರಾವ್ ಉಪಗ್ರಹ ಕೇಂದ್ರದಿಂದ SpaceKidz India ಮತ್ತು Pixxel ಎಂಬ ಎರಡು ಭಾರತೀಯ ಸ್ಟಾರ್ಟ್‌ಅಪ್‌ಗಳ ಉಪಗ್ರಹಗಳನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ. 

Written by - Nitin Tabib | Last Updated : Feb 12, 2021, 11:50 AM IST
  • ಇನ್ಮುಂದೆ ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ ಉಪಗ್ರಹಗಳು ಕೂಡ ಕಾಣಿಸಲಿವೆ
  • ಖಾಸಗಿ ಉಪಗ್ರಹಗಳ ಉಡಾವಣೆಗೆ ಮುನ್ನುಡಿ ಬರೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ.
  • SpaceKidz India ಮತ್ತು Pixxel ಎಂಬ ಎರಡು ಭಾರತೀಯ ಸ್ಟಾರ್ಟ್‌ಅಪ್ ಗಳು ಉಪಗ್ರಹಗಳನ್ನು ವಿನ್ಯಾಸಗೊಳಿಸಿವೆ.
ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ Satellite ಓಟಕ್ಕೆ ಮುನ್ನುಡಿ ಬರೆದ ISRO title=
ISRO (File Photo_

ನವದೆಹಲಿ: ISRO - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space Research Organisation) ಯುಆರ್ ರಾವ್ ಉಪಗ್ರಹ ಕೇಂದ್ರದಿಂದ SpaceKidz India ಮತ್ತು Pixxel ಎಂಬ ಎರಡು ಭಾರತೀಯ ಸ್ಟಾರ್ಟ್‌ಅಪ್‌ಗಳ ಉಪಗ್ರಹಗಳನ್ನು  ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಉಪಗ್ರಹಗಳು ಮತ್ತು ರಾಕೆಟ್‌ಗಳ ವಿವಿಧ ಭಾಗಗಳನ್ನು ನಿರ್ಮಿಸಲು ಮಾತ್ರ ಸಹಾಯ ಮಾಡಿದ ಏಜೆನ್ಸಿಯ ಇದು ಮೊದಲ ಪ್ರಯತ್ನ ಎಂದೇ ಹೇಳಲಾಗುತ್ತಿದೆ.

ಕಳೆದ ವರ್ಷ ಜೂನ್‌ನಲ್ಲಿ ಭಾರತ ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ಪ್ರೈವೇಟ್ ಪ್ಲೇಯರ್ಸ್ ಗಳಿಗೆ ತೆರೆದ ಕಾರಣ ಇದು ಸಾಧ್ಯವಾಗಿದೆ. ಖಾಸಗಿ ವಲಯದ ಬಾಹ್ಯಾಕಾಶ ಚಟುವಟಿಕೆಯ ಮೇಲ್ವಿಚಾರಣೆಗೆ ಮಾತ್ರವಲ್ಲದೆ ಇಸ್ರೋ ಸೌಲಭ್ಯಗಳನ್ನು ನಿರ್ವಹಿಸಲು ಮತ್ತು ಹಂಚಿಕೊಳ್ಳಲು ಸ್ವತಂತ್ರ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರವನ್ನು (IN-SPACe) ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಈ ಪ್ರಕಟಣೆಯ ಕೇವಲ ಎಂಟು ತಿಂಗಳ ನಂತರ ಈ ತಿಂಗಳಾಂತ್ಯದಲ್ಲಿ ನಿಗದಿಯಾದಂತೆ ಪಿಎಸ್‌ಎಲ್‌ವಿ ಮಿಷನ್ ಮೂಲಕ ಇಸ್ರೋ ಈ ವಾಣಿಜ್ಯ ಉಪಗ್ರಹಗಳನ್ನು ಉಡಾಯಿಸಲು ಸಿದ್ಧವಾಗಿದೆ. ಭಾರತೀಯ ಉದ್ಯಮ ಕ್ಷೇತ್ರದ ವತಿಯಿಂದ  ವಾಣಿಜ್ಯಾತ್ಮಕವಾಗಿ ಉಪಗ್ರಹಗಳನ್ನು ಉಡಾಯಿಸುವ ISROದ ಮೊದಲ ಮಿಷನ್ ಇದಾಗಿದೆ.

SpaceKidz India ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದ ಒಂದು ಉಪಗ್ರಹವನ್ನು ISRO ಜನವರಿ 2019 ರಲ್ಲಿ ಪ್ರಾಯೋಗಿಕವಾಗಿ PSLV ಮೂರನೇ ಹಂತವನ್ನು ಉಪಯೋಗಿಸಿ ಲಾಂಚ್ ಮಾಡಲಾಗಿತ್ತು. ಸಾಮಾನ್ಯವಾಗಿ ಇದು ಹಾಳಾಗುತ್ತದೆ.

ಇದನ್ನು ಓದಿ-ಬಾಹ್ಯಾಕಾಶದಲ್ಲಿ ಭಾರತೀಯ, ರಷ್ಯಾ ಉಪಗ್ರಹಗಳು ಮುಖಾಮುಖಿ, ದೊಡ್ಡ ಅನಾಹುತ ತಪ್ಪಿದ್ದೇಗೆ?

PSLV C-51 ಮಿಷನ್, ಅಮೆರಿಕಾದ ಅಮೋನಿಯಾ-1 ಹೆಸರಿನ ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಮೂಲಕ ವಾಣಿಜ್ಯಾತ್ಮಕ ವ್ಯವಸ್ಥೆಯ ಅಡಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲಿದೆ. ಇದು ಇಸ್ರೋದ ಒಂದು ವಾಣಿಜ್ಯಾತ್ಮಕ ಶಾಖೆಯಾಗಿದೆ. ಇದಲ್ಲದೆ ಈ ಯಾನ ಸುಮಾರು 20 ಯಾತ್ರಿ ಉಪಗ್ರಹಗಳನ್ನು ಸಹ ಕೊಂಡೊಯ್ಯಲಿದೆ. ಇದರಲ್ಲಿ ಇಸ್ರೋ ವಿನ್ಯಾಸಗೊಳಿಸಿರುವ ಒಂದು ನ್ಯಾನೋ ಉಪಗ್ರಹ ಕೂಡ ಶಾಮೀಲಾಗಿದೆ.

ಇದನ್ನು ಓದಿ-ಇಂದು ಮತ್ತೆ ಇತಿಹಾಸ ಸೃಷ್ಟಿಸಲಿರುವ ಇಸ್ರೋ

ಮತ್ತೊಂದು ಸ್ಟಾರ್ಟ್ ಅಪ್ ಕಂಪನಿಯಾಗಿರುವ SKYROOT ಲಾಂಚಿಂಗ್ ವೆಹಿಕಲ್ ಅಭಿವೃದ್ಧಿಗೊಳಿಸುವ ದಿಕ್ಕಿನಲ್ಲಿ ಕಾರ್ಯತತ್ಪರವಾಗಿದೆ. ಈ ವರ್ಷಾಂತ್ಯದ ವೇಳೆಗೆ ಅದು ಉಡಾವಣೆಯಾಗುವ ನಿರೀಕ್ಷೆ ಇದೆ.

ಇದನ್ನು ಓದಿ-ಭಾರತದ ಉಪಗ್ರಹಗಳ ಮೇಲೆ ಹಲವಾರು ಸೈಬರ್ ದಾಳಿ ನಡೆಸಿದ್ದ ಚೀನಾ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News