ನವದೆಹಲಿ : ಹರಿಯಾಣ (Haryana) ಸರ್ಕಾರ ಆಮದು ಮಾಡಿದ ಪಟಾಕಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಮಾರಾಟ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಎಂದು ಘೋಷಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (ಡಿಸಿಗಳು) ಜಾಗರೂಕರಾಗಿರಬೇಕು ಮತ್ತು ಆಮದು ಮಾಡಿದ ಪಟಾಕಿಗಳ  (Firecrackers) ಮಾರಾಟ ಮತ್ತು ವಿತರಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. 


ಕೃಷಿ ತಾಜ್ಯದ ಬೆಂಕಿ ಬಗ್ಗೆ ನಿಗಾವಹಿಸಲು ಸುಪ್ರೀಂ ನಿಂದ ಸಮಿತಿ ರಚನೆ


ಆಮದು ಮಾಡಿದ ಪಟಾಕಿಗಳನ್ನು ಸಂಗ್ರಹಿಸದಿರಲು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಅಂಗಡಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಕೇಂದ್ರ ವಾಣಿಜ್ಯ ಸಚಿವಾಲಯ ಹೊರಡಿಸಿದ ಪತ್ರದ ಪ್ರಕಾರ ಪಟಾಕಿ ಆಮದು ನಿಷೇಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.


ಭಾರತೀಯ ರೈಲ್ವೆಯಿಂದ ಸಿದ್ದವಾಗ್ತಿದೆ ವಿಶ್ವದ ಮೊದಲ ವಿಶೇಷ ಸುರಂಗ


ವಿದೇಶಿ ವ್ಯಾಪಾರದ ಡೈರೆಕ್ಟರೇಟ್ ಜನರಲ್‌ನಿಂದ ಪರವಾನಗಿ ಅಥವಾ ಅಧಿಕಾರವನ್ನು ಪಡೆಯದೆ ಪಟಾಕಿಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳನ್ನು ಆಮದು ಮಾಡಿಕೊಳ್ಳಲು ನಿರ್ದೇಶನಾಲಯ ಜನರಲ್ ಯಾವುದೇ ಪರವಾನಗಿ ಅಥವಾ ಅಧಿಕಾರವನ್ನು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.


ಪಟಾಕಿಗಳ ಮಾರಾಟಕ್ಕೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ನೀಡುವ ಪರವಾನಗಿ ಅಗತ್ಯವಿದೆ. ರಾಜ್ಯದ ಎಲ್ಲಾ ಡಿಸಿಗಳು, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಮದು ಮಾಡಿದ ಪಟಾಕಿಗಳ ಮಾರಾಟವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ ಮತ್ತು ಅದನ್ನು ಬಳಸದಂತೆ ಜನರನ್ನು ಎಚ್ಚರಿಸಿದೆ ಎಂದು ಅವರು ಹೇಳಿದರು.