Bishnoi faction statement: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ನಂತರ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಬಾಬಾ ಸಿದ್ದಿಕಿ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಸ್ನೇಹಿತ ಮತ್ತು ಅವರಿಬ್ಬರ ನಡುವಿನ ಆತ್ಮೀಯತೆಯ ಕಾರಣದಿಂದಲೇ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಕೈವಾಡವಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಗ್‌ ಬಾಸ್‌ ಅರ್ಧಕ್ಕೆ ಕೈಬಿಟ್ಟ ಕಿಚ್ಚ ಸುದೀಪ್‌: ಇನ್ಮುಂದೆ ಈ ಸೀಸನ್‌ನ್ನು ಹೋಸ್ಟ್‌ ಮಾಡೋದು ಇವರೇ! ಕನ್ನಡದ ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ʼಬಿಗ್‌ʼ ಜವಾಬ್ದಾರಿ!?


ಬಾಬಾ ಸಿದ್ದಿಕಿ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಸ್ನೇಹಿತನ ಸಾವಿನ ಸುದ್ದಿ ಕೇಳಿದ ಸಲ್ಮಾನ್ ಖಾನ್ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದಿದ್ದಾರೆ. ಇನ್ನು ಮುಂದೆ ಯಾರನ್ನೂ ವಿಶೇಷವಾಗಿ ಭೇಟಿಯಾಗುವುದಿಲ್ಲ ಎಂದು ಸಲ್ಲು ಭಾಯ್ ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಇದೆ. ಬಾಬಾ ಸಿದ್ದಿಕಿ ಹತ್ಯೆ ಬಳಿಕ ಮುಂಬೈ ಪೊಲೀಸರು ಸಲ್ಮಾನ್‌ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಈ ಎಲ್ಲದರ ಮಧ್ಯೆ ಸಲ್ಮಾನ್ ಖಾನ್ ಬದುಕಿರಬೇಕೆಂದರೆ ಒಂದೇ ದಾರಿ ಇದೆ ಎಂದು ಬಿಷ್ಣೋಯ್ ಗುಂಪು ಎಚ್ಚರಿಸಿದೆಯಂತೆ.


1999ರಲ್ಲಿ ತೆರೆಕಂಡ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಶೂಟಿಂಗ್‌ಗಾಗಿ 1998ರಲ್ಲಿ ಸಲ್ಮಾನ್ ಖಾನ್ ರಾಜಸ್ಥಾನಕ್ಕೆ ಹೋಗಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಅವರು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೀಗಾಗಿ ಅವರಿಗೆ ಜಾಮೀನು ಸಿಕ್ಕಿತ್ತು. ಆದರೆ ಬಿಷ್ಣೋಯ್ ಸಮುದಾಯಕ್ಕೆ, ಕೃಷ್ಣಮೃಗ ದೇವತೆಗೆ ಸಮನಾಗಿರುತ್ತದೆ. ತಾವು ಪೂಜಿಸುವ ಕೃಷ್ಣಮೃಗಗಳನ್ನು ಸಲ್ಮಾನ್ ಬೇಟೆಯಾಡಿ ಕೊಂದಿದ್ದಾರೆ. ಇದೇ ಕಾರಣಕ್ಕೆ ಆತನನ್ನು ಸಹ ಹೇಗಾದರೂ ಮಾಡಿ ಸಾಯಿಸುತ್ತೇವೆ ಎಂದು ಬಿಷ್ಣೋಯ್ ಬಣ ಈಗಾಗಲೇ ಘೋಷಿಸಿದೆ.


ಇದನ್ನೂ ಓದಿ: ಈ ಎಣ್ಣೆ ಹಚ್ಚಿದ 2 ನಿಮಿಷಕ್ಕೆ ಬುಡದಿಂದಲೇ ಗಾಢ ಕಪ್ಪಾಗುತ್ತದೆ ಬಿಳಿಕೂದಲು: ಎಷ್ಟೇ ಬೆಳ್ಳಗಾಗಿದ್ದರೂ ಒಮ್ಮೆ ಹಚ್ಚಿದ್ರೆ ಸಾಕು... ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ


ಸಲ್ಮಾನ್ ಖಾನ್ ಪರವಾಗಿ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಕ್ಷಮೆಯಾಚಿಸಿದ್ದರು. ಆದರೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಷ್ಣೋಯ್ ಬಣ, ಸಲ್ಮಾನ್ ಕ್ಷಮೆಯಾಚಿಸಿದರೆ ಬಿಷ್ಣೋಯ್ ಸಮುದಾಯ ಅದನ್ನು ಪರಿಗಣಿಸುತ್ತದೆ. ಸೋಮಿ ಅಲಿ ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಆಕೆಯ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಸಲ್ಮಾನ್ ದೇವಸ್ಥಾನಕ್ಕೆ ಬರಬೇಕು. ಅದರ ನಂತರ ಅವರೇ ಕ್ಷಮೆ ಕೇಳಬೇಕು. ಆ ಬಳಿಕ ಆತನಿಗೆ ಯಾವ ಶಿಕ್ಷೆ ವಿಧಿಸಬೇಕು ಎಂದು ಯೋಚಿಸಬಹುದು’’ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ