ನವದೆಹಲಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್(Bipin Rawat) ಅವರ ಸಾವು ಜನರ ಮನಸ್ಸಿನಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್(Sanjay Raut) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

‘ಚೀನಾ ಮತ್ತು ಪಾಕಿಸ್ತಾನ(China & Pakistan) ವಿರುದ್ಧ ದೇಶದ ಸೇನಾ ಪ್ರತಿರೋಧ ರೂಪಿಸುವಲ್ಲಿ ರಾವತ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇಂತಹ ಆಘಾತಕಾರಿ ಘಟನೆಗಳು ನಡೆದಾಗ ಜನರ ಮನಸ್ಸಿನಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತದೆ’ ಅಂತಾ ಸಂಜಯ್ ರಾವತ್ ಹೇಳಿದ್ದಾರೆ. ‘ಬಿಪಿನ್ ರಾವತ್ ವಾಯುಪಡೆಯ ಅತ್ಯಾಧುನಿಕ ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಇದಕ್ಕೆ ಎರಡು ಎಂಜಿನ್‌ಗಳು ಕೂಡ ಇದ್ದವು. ಸಶಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸಿರುವುದಾಗಿ ನಾವು ಹೇಳಿಕೊಳ್ಳುತ್ತೇವೆ. ಹಾಗಾದರೆ ಈ ಘಟನೆ ನಡೆಯಲು ಹೇಗೆ ಸಾಧ್ಯವಾಯಿತು?’ ಅಂತಾ ಅವರು ಪ್ರಶ್ನಿಸಿದ್ದಾರೆ.  


ಇದನ್ನೂ ಓದಿ: LIC ಈ ಯೋಜನೆಯಲ್ಲಿ ದಿನಕ್ಕೆ ₹8 ಹೂಡಿಕೆ ಮಾಡಿ ₹17 ಲಕ್ಷ ಲಾಭ ಪಡೆಯಿರಿ! ಹೇಗೆ ಇಲ್ಲಿದೆ ನೋಡಿ


Bipin Rawat Death) ಮುಖ್ಯ ಪಾತ್ರ ವಹಿಸಿದ್ದರು. ಈ ಆಘಾತಕಾರಿ ದುರಂತದಿಂದ ಇಡೀ ದೇಶ ಮತ್ತು ನಾಯಕತ್ವವೇ ಗೊಂದಲಕ್ಕೆ ಸಿಲುಕಿದೆ. ದೇಶದ ರಕ್ಷಣಾ ಸಚಿವರು ಅಥವಾ ಪ್ರಧಾನಿ ಮೋದಿ ಈ ಎಲ್ಲಾ ಅನುಮಾನಗಳನ್ನು ಪರಿಹರಿಸಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಬೇಕೆಂದು’ ಅವರು ಆಗ್ರಹಿಸಿದ್ದಾರೆ.


ತಮಿಳುನಾಡಿನ ಕೂನೂರು ಸಮೀಪ ಬುಧವಾರ ಮಧ್ಯಾಹ್ನ ಐಎಎಫ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು(Helicopter Crash). ಇದರಲ್ಲಿ ಪ್ರಯಾಣಿಸುತ್ತಿದ್ದ 14 ಜನರ ಪೈಕಿ ಸಿಡಿಎಸ್ ಬಿಪಿನ್ ರಾವತ್(Bipin Rawat Death) ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ತೀವ್ರ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.   


ಇದನ್ನೂ ಓದಿ: ನಿಮಗೆ ಗೊತ್ತಿಲ್ಲದಂತೆ ನಿಮ್ಮ ಫೇಸ್ ಬುಕ್ ಪ್ರೊಫೈಲನ್ನು ಯಾರು ಚೆಕ್ ಮಾಡುತ್ತಿದ್ದಾರೆ ಹೀಗೆ ತಿಳಿಯಿರಿ


ಕೂನೂರಿನ ನಂಜಪ್ಪ ಛತ್ರಂ ಗ್ರಾಮದಲ್ಲಿ ನಡೆದಿರುವ ಅಪಘಾತದ ಸ್ಥಳದಲ್ಲಿ ಐಎಎಫ್ ಮತ್ತು ಸ್ಥಳೀಯ ಪೊಲೀಸರ ತಂಡಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ