#InternationalDayofYoga: ಎತ್ತರದ ಪರ್ವತದಿಂದ ಸಮುದ್ರದ ತೀರದವರೆಗೆ ಯೋಗ ಪ್ರದರ್ಶನ
ಸಿಕ್ಕಿಂನಲ್ಲಿ 19 ಸಾವಿರ ಅಡಿ ಎತ್ತರದಲ್ಲಿ ಬೀಡುಬಿಟ್ಟಿರುವ ಐಟಿಬಿಪಿ ಪಡೆಗಳು ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಯೋಗ ಪ್ರದರ್ಶನ ನಡೆಸುತ್ತಿದ್ದಾರೆ.
ನವದೆಹಲಿ: 5 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಎತ್ತರದ ಪರ್ವತದಿಂದ ಸಮುದ್ರದ ತೀರದವರೆಗೆ ಯೋಗ ಪ್ರದರ್ಶನ ಮೂಡಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಇಂದು 40 ಸಾವಿರ ಜನರೊಂದಿಗೆ ಯೋಗ ನಡೆಸಿದರು.
ಪಿಎಂ ಮೋದಿ, ಜನರ ನಡುವೆ ಕುಳಿತಾಗ, ಮೊದಲು ಕೈ ಜೋಡಿಸಿ ಓಂ ಎಂದು ಉಚ್ಚರಿಸಿದರು. ಇದರ ನಂತರ ಪಿಎಂ ಮೋದಿ ಪ್ರಾಣಾಯಾಮ ಮತ್ತು ನಂತರದ ಯೋಗದ ಅನೇಕ ಕ್ರಿಯೆಗಳ ಮೂಲಕ ರಾಷ್ಟ್ರ ಮತ್ತು ಜಗತ್ತಿಗೆ ಉತ್ತಮ ಆರೋಗ್ಯದ ಸಂದೇಶವನ್ನು ನೀಡಿದರು.
ಇಂದು, ಭಾರತದಲ್ಲಿ, ಪರ್ವತದ ಎತ್ತರದಿಂದ ಸಮುದ್ರದ ತೀರದವರೆಗೆ ಯೋಗವನ್ನು ಮಾಡಲಾಯಿತು. ಐಟಿಬಿಪಿ ಜವಾನರು ಹಿಮಭರಿತ ಬೆಟ್ಟಗಳ ನಡುವೆ ಯೋಗ ಮಾಡಿದರೆ, ಭಾರತೀಯ ನೌಕಾಪಡೆಯ ಸಿಬ್ಬಂದಿ ಐಎನ್‌ಎಸ್ ವಿರಾತ್ ಯುದ್ಧನೌಕೆಯಲ್ಲಿ ಯೋಗ ಮಾಡಿದರು.
ಸಿಕ್ಕಿಂನಲ್ಲಿ 19 ಸಾವಿರ ಅಡಿ ಎತ್ತರದಲ್ಲಿ ಬೀಡುಬಿಟ್ಟಿರುವ ಐಟಿಬಿಪಿ ಪಡೆಗಳು ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಯೋಗ ಪ್ರದರ್ಶನ ನಡೆಸುತ್ತಿದ್ದಾರೆ.
ಒಡಿಶಾದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿಯ ಮಧ್ಯದಲ್ಲಿ ಪ್ರಧಾನಿ ಮೋದಿ ಯೋಗ ಮಾಡುತ್ತಿರುವ ಒಂದು ಆಕಾರವನ್ನು ರಚಿಸಿದ್ದಾರೆ.