ಕೊಲ್ಕತ್ತಾ: 'ಜೈ ಶ್ರೀ ರಾಮ್' ಘೋಷಣೆಯು 'ಮಾ ದುರ್ಗಾ'ನಂತೆ ಬಂಗಾಳಿ ಸಂಸ್ಕೃತಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬಂಗಾಳಿಗಳ ಜೀವನದಲ್ಲಿ 'ಮಾ ದುರ್ಗಾ' ಸರ್ವವ್ಯಾಪಿಯಾಗಿದ್ದಾಳೆ. ಆದರೀಗ ಜನರನ್ನು ಹೊಡೆಯಲು ಜೈ ಶ್ರೀರಾಮ್ ಘೋಷಣೆ ಬಳಸಲಾಗುತ್ತಿದೆ. ರಾಮನವಮಿ ಆಚರಣೆ ಸಹ ಇತ್ತೀಚಿನ ದಿನಗಳಲ್ಲಿ ಚಾಲನೆಗೆ ಬಂದಿದೆ. ಹೊರಗಿನಿಂದ ಬಂದವರು ಬಂಗಾಳ ಸಂಸ್ಕೃತಿಯಲ್ಲಿ ಬೇರೆ ವಿಚಾರವನ್ನು ತೂರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಲ್ಲಿನ ಜಾದವ್‌ಪುರ ವಿಶ್ವವಿದ್ಯಾಲಯದ  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಬಡತನದ ಕುರಿತು ಮಾತನಾಡಿದ ಸೇನ್, "ಬಡ ಜನರ ಆದಾಯದ ಮಟ್ಟ ಹೆಚ್ಚಾಗುವುದರಿಂದಷ್ಟೇ ಅವರ ಸಮಸ್ಯೆಗಳು ಕಡಿಮೆಯಾಗುವುದಿಲ್ಲ. ಮೂಲಭೂತ ಆರೋಗ್ಯ, ಸರಿಯಾದ ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯಿಂದ ಬಡತನವನ್ನು ಕಡಿಮೆ ಮಾಡಬಹುದು" ಎಂದು ತಿಳಿಸಿದ್ದಾರೆ.


ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.