JeM ಭಯೋತ್ಪಾದಕ ಗುಂಪಿಗೆ ಸೇರಿದ ಉಗ್ರನ ಬಂಧನ
ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಜೈಶ್-ಎ-ಮೊಹಮ್ಮದ್(JeM)ನ ಪ್ರಮುಖ ಭಯೋತ್ಪಾದಕ ಸಹಚರನನ್ನು ಭದ್ರತಾ ಪಡೆಗಳು ಸೋಮವಾರ (ಡಿಸೆಂಬರ್ 23) ಬಂಧಿಸಿವೆ.
ಅವಂತಿಪೋರಾ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಜೈಶ್-ಎ-ಮೊಹಮ್ಮದ್(JeM)ನ ಪ್ರಮುಖ ಭಯೋತ್ಪಾದಕ ಸಹಚರನನ್ನು ಭದ್ರತಾ ಪಡೆಗಳು ಸೋಮವಾರ (ಡಿಸೆಂಬರ್ 23) ಬಂಧಿಸಿವೆ.
ಭದ್ರತಾ ಪಡೆಗಳ ಪ್ರಕಾರ, ರಾಸಿಕ್ ಮಕ್ಬೂಲ್ ಅವರು ಟ್ರಾಲ್ ಪ್ರದೇಶದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ಭಯೋತ್ಪಾದಕರಿಗೆ ಎಲ್ಲಾ ರೀತಿಯ ಲಾಜಿಸ್ಟಿಕ್ಸ್ ಮತ್ತು ಬೆಂಬಲವನ್ನು ನೀಡುವಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸೈದಾಬಾದ್ ಪಸ್ತೂನಾ ಗ್ರಾಮದ ಶೋಧ ಕಾರ್ಯಾಚರಣೆಯಲ್ಲಿ ಶೇಖ್ನನ್ನು ಬಂಧಿಸಲಾಗಿದೆ. ಭದ್ರತಾ ಪಡೆಗಳು ಶೇಖ್ ನನ್ನು ಬಂಧಿಸುವ ವೇಳೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಸಂಬಂಧಿತ ಕಾನೂನು ವಿಭಾಗಗಳ ಅಡಿಯಲ್ಲಿ ಟ್ರಾಲ್‌ನ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಮತ್ತೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ, ಲಷ್ಕರ್-ಎ-ತೈಬಾದ ಸಕ್ರಿಯ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಬಂಧಿಸಿವೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಬ್ರಾತ್ ಕಲಾನ್ ನ ಸದ್ದಾಂ ಮಿರ್ ಎಂದು ಗುರುತಿಸಲ್ಪಟ್ಟ ಭಯೋತ್ಪಾದಕನನ್ನು ಸೊಪೋರ್ನಲ್ಲಿ ಬಂಧಿಸಲಾಗಿದೆ. ಮಿರ್ ಹಾರ್ಡ್‌ಕೋರ್ ಎಲ್‌ಇಟಿ ಭಯೋತ್ಪಾದಕ ಸಾಜಾದ್ ಅವರ ನಿಕಟವರ್ತಿ ಎಂದು ತಿಳಿದು ಬಂದಿದ್ದು ಹೆಚ್ಚಿನ ವಿಚಾರಣೆ ಮುಂದುವರೆದಿದೆ.