ನವದೆಹಲಿ : ಮೋದಿ ಸರ್ಕಾರ (Modi Government) ಒಂದು ಮ್ಯಾಜಿಕ್ ಮಾಡಲು ಹೊರಟಿದೆ. ದೇಶದ 4378 ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಶುರುವಿಟ್ಟುಕೊಂಡಿದೆ. 4378 ಪಟ್ಟಣಗಳ  2.86 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರು ತಲುಪಿಸುವ ಜಲಜೀವನ ಮಿಶನ್ ಯೋಜನೆಯನ್ನು (Jal Jeevan Mission)ಸಮರೋಪಾದಿಯಲ್ಲಿ ಜಾರಿಗೆ ತರಲು ಹೊರಟಿದೆ. 


COMMERCIAL BREAK
SCROLL TO CONTINUE READING

ಕುಡಿಯುವ ನೀರಿನ ಸರ್ವೇಕ್ಷಣೆ
ಜಲಜೀವನ ಮಿಶನ್  (Jal Jeevan Mission) ಯೋಜನೆ ಆರಂಭಿಸುವ ಮೊದಲು ಸರ್ಕಾರ ಒಂದು ಪೈಲೆಟ್ ಪ್ರಾಜೆಕ್ಟ್  (Pilot Project) ಆರಂಭಿಸಲಿದೆ. ಅದರಡಿ ದೇಶದ ಕುಡಿಯುವ ನೀರಿನ (Water) ಸರ್ವೇಕ್ಷಣೆ ನಡೆಯಲಿದೆ. ಇದುವರೆಗೆ ಎಂದೂ ನಮ್ಮ ದೇಶದಲ್ಲಿ ಕುಡಿಯುವ ನೀರಿನ ಸರ್ವೇಕ್ಷಣೆ ನಡೆದಿರಲಿಲ್ಲ. ಈ ಯೋಜನೆಯನ್ವಯ ಹತ್ತು ನಗರಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುವುದು. ಆಗ್ರಾ, ಬದಲ್ಪುರ್, ಭುವನೇಶ್ವರ, ಚುರು, ಕೊಚ್ಚಿ, ಮದುರೆ, ಪಟಿಯಾಲ, ರೋಹ್ಟಕ್, ಸೂರತ್  ಮತ್ತು ಟುಮ್ಕುರದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ನಡೆಯಲಿದೆ. 


ಇದನ್ನೂ ಓದಿ : Smriti Irani: 'ರಾಹುಲ್‌ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧಿಸಲಿ'


ಮಾರ್ಚ್ ತಿಂಗಳಲ್ಲೇ ಈ ಸರ್ವೇಕ್ಷಣೆ ಅಂತ್ಯ
ಜಲ ಪರೀಕ್ಷೆ ಮಾಚ್1 ಕ್ಕೆ ಆರಂಭವಾಗಿ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ.  ನೀರಿನ ಮೂಲ, ಅದರ ಮಟ್ಟ, ನೀರಿನ ಸುಧಾರಣೆ ಇತ್ಯಾದಿ ಮಾಹಿತಿಗಳನ್ನು ಪಡೆಯಲಾಗುವುದು. ಇದಲ್ಲದೆ ನೀರಿನ ವಿತರಣೆ, ನೀರಿನ ಮರುವಿತರಣೆ, ನೀರಿನ ಪೋಲು, ನೀರಿನ ಸಂರಕ್ಷಣೆ ಮೊದಲಾದ ವಿಚಾರದಲ್ಲೂ ರಣತಂತ್ರ ರೂಪಿಸಲಾಗುವುದು. ಈ ಸಂದರ್ಭದಲ್ಲಿ ನೀರಿನ ಗುಣಮಟ್ಟದ (Water Quality) ಪರೀಕ್ಷೆಗೆ ಆದ್ಯತೆ ನೀಡಲಾಗುವುದು. ನೀರು ನಿಜವಾಗಿಯೂ ಬಿಐಎಸ್ ಸ್ಟಾಂಡರ್ಡ್  (BIS Standard) ಮುಟ್ಟುತ್ತಾ ಎಂಬುದರ ಪರೀಕ್ಷೆ ನಡೆಸಲಾಗುವುದು.


ಈ ಎಲ್ಲಾ ಪರೀಕ್ಷೆ ನಡೆಸಿದ ನಂತರ ಜಲಜೀವನ ಮಿಶನ್ ಅನುಷ್ಠಾನಕ್ಕೆ ಬರಲಿದೆ. ಎರಡು ವರ್ಷಗಳಲ್ಲಿ ಕನಿಷ್ಠ 1.5 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರು ಮುಟ್ಟಿಸುವ ಟಾರ್ಗೆಟ್ (Target) ಇಟ್ಟುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನೀರಿನ ಗುಣಮಟ್ಟ ಉಳಿಸಲು ಗರಿಷ್ಠ ಆದ್ಯತೆ ನೀಡಲಾಗುವುದು.


ಇದನ್ನೂ ಓದಿ : ಎಚ್ಚರ..! ನಿಮ್ಮಲ್ಲಿರುವ FASTag ನಕಲಿಯಾಗಿರಬಹುದು..! NHAI ನೀಡಿದೆ ಎಚ್ಚರಿಕೆ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.