ನವದೆಹಲಿ: ತಮಿಳುನಾಡಿನ ಕ್ರೀಡೆ ಜಲ್ಲಿಕಟ್ಟು ವಿಷಯವನ್ನು ಸಂವಿಧಾನ ಪೀಠಕ್ಕೆ  ಸುಪ್ರೀಂ ಕೋರ್ಟ್ ವರ್ಗಾಯಿಸಿದೆ. ಈ ವಿಷಯದಲ್ಲಿ ಐದು ಪ್ರಶ್ನೆಗಳನ್ನು ರೂಪಿಸಿರುವ ಸುಪ್ರೀಂ ಕೋರ್ಟ್ ಸಂವಿಧಾನಾತ್ಮಕ ಪೀಠದಿಂದ ತೀರ್ಪು ನೀಡಬೇಕೆಂದು ತಿಳಿಸಿದೆ. 


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ನ್ಯಾಯಮೂರ್ತಿ ನಾರಿಮನ್ "ನಾವು ಸಂವಿಧಾನಾತ್ಮಕ ಪೀಠಕ್ಕೆ ಐದು ಪ್ರಶ್ನೆಗಳನ್ನು ರೂಪಿಸಿದ್ದೇವೆ" ಎಂದು ಹೇಳಿದ್ದಾರೆ.


ಸಾಂಸ್ಕೃತಿಕ ಹಕ್ಕುಗಳನ್ನು ವಿವರಿಸಿರುವ ಸಂವಿಧಾನದ ವಿಧಿ 29(1) ರ ಅಡಿಯಲ್ಲಿ ಜಲ್ಲಿಕಟ್ಟು ಮತ್ತು ಬುಲ್ ಕಾರ್ಟ್ ರೇಸಿಂಗ್ ಗೆ ಸಂಬಂಧಿಸಿದಂತೆ ರಾಜ್ಯಗಳು ಆಂತರಿಕ ಕಾನೂನುಗಳನ್ನು ರಚಿಸಲು "ಶಾಸಕಾಂಗ ಸಾಮರ್ಥ್ಯ" ಹೊಂದಿದೆಯೆ, ಇಲ್ಲವೇ ಮತ್ತು ಸಂವಿಧಾನಕ ರಕ್ಷಣೆ ದೊರೆಯಲಿದೆಯೇ ಎಂಬುದರ ಕುರಿತು ಲಾರ್ಜರ್ ಬೆಂಚ್ ನಿರ್ಧರಿಸಲಿದೆ ಎಂದು ನ್ಯಾಯಾಲಯವು ತನ್ನ ಆದೇಶವನ್ನು ಮೀಸಲಿರಿಸಿದ ಸಂದರ್ಭದಲ್ಲಿ ಹೇಳಿತ್ತು. 


ತಮಿಳುನಾಡು ಮತ್ತು ಮಹಾರಾಷ್ಟ್ರವು 1960ರ ಪೇಟಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಜಲ್ಲಿಕಟ್ಟು ಮತ್ತು ಬುಲ್ ಕಾರ್ಟ್ ರೇಸಿಂಗ್ ಗಳಿಗೆ ಅನುಮತಿ ನೀಡಿದ್ದವು. ಆದರೆ ರಾಜ್ಯ ಕಾನೂನುಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.