ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದ ಸರ್ಕಾರ
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಿದೆ.
ಬ್ಯಾಂಕ್ ನೇಮಕಾತಿ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇಂದ್ರಾಡಳಿತ ಪ್ರದೇಶದ ಸರ್ಕಾರ ಗುರುವಾರ 250 ಪ್ರೊಬೇಷನರಿ ಅಧಿಕಾರಿಗಳು ಮತ್ತು 1,200 ಬ್ಯಾಂಕಿಂಗ್ ಸಹವರ್ತಿಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.ಜಮ್ಮು ಮತ್ತು ಕಾಶ್ಮೀರ ನೇಮಕಾತಿ ಪ್ರಕ್ರಿಯೆಯು 2018 ರಲ್ಲಿ ಪ್ರಾರಂಭವಾಯಿತು.
ಈ ಖಾಲಿ ಹುದ್ದೆಗಳ ವಿರುದ್ಧ ಹೊಸದಾಗಿ ನೇಮಕಾತಿಯನ್ನು ಮೂರು ತಿಂಗಳ ಸಮಯದೊಳಗೆ ಬ್ಯಾಂಕ್ ಪ್ರಾರಂಭಿಸುತ್ತದೆ ಮತ್ತು ಪೂರ್ಣಗೊಳಿಸುತ್ತದೆ ಎಂದು ಜೆ & ಕೆ ಸರ್ಕಾರದ ಅಧಿಕೃತ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.