ಜಮ್ಮು: ಅಮರ್ನಾಥ್ ಯಾತ್ರೆಗೆ ಮುಂಚಿತವಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ದಿಲ್ಬಾಗ್ ಸಿಂಗ್ ಕರೆ ನೀಡಿದ್ದಾರೆ.  ಭಾರತ-ಪಾಕ್ ಗಡಿಯಲ್ಲಿ ಭದ್ರತೆ ಬಲಪಡಿಸಲು ಮೂರು ಹಂತದ ವ್ಯವಸ್ಥೆಯನ್ನು ಅಳವಡಿಸಬೇಕೆಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಕತುವಾ ಮತ್ತು ಪೂಂಚ್ ಜಿಲ್ಲೆಯ ಗಡಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಜಮ್ಮು-ಕಾಶ್ಮೀರ ಡಿಜಿಪಿ ಸೂಕ್ಷ್ಮ ಪ್ರದೇಶಗಳ ಮೇಲ್ವಿಚಾರಣೆ ಅಗತ್ಯ ಎಂದಿದ್ದಾರೆ.


ಗಡಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲು ಕತುವಾ ಜಿಲ್ಲೆಯ ಮತ್ತು ಇತರ ಭದ್ರತಾ ಸಂಸ್ಥೆಗಳ ಅಧಿಕಾರಿಗಳಿಗೆ ಡಿಜಿಪಿ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಒಂದು ವಿಂಡೋ ಕ್ಲಿಯರೆನ್ಸ್ ಮತ್ತು ವಾಹನ ತಪಾಸಣೆ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಬೇಕು ಎಂದು ಸಿಂಗ್ ಹೇಳಿದ್ದಾರೆ. ಅಮರನಾಥ್ ಯಾತ್ರೆ ಜುಲೈ 1 ರಿಂದ ಆರಂಭವಾಗಲಿದೆ. ಸಮಾಜ ವಿರೋಧಿ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಸುರಕ್ಷತಾ ಪರಿಶೀಲನಾ ಕೇಂದ್ರ ಮತ್ತು ನಿಯಂತ್ರಣ ಕೊಠಡಿಗಳನ್ನು ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಬೇಕು ಎಂದು ಅವರು ಸೂಚಿಸಿದ್ದಾರೆ.


ಇದಲ್ಲದೆ, ಸೇನೆಯೊಂದಿಗೆ ಸಂವಹನ ನಡೆಸಿದ ಅವರು, ಗ್ರಾಮ ಸಂರಕ್ಷಣಾ ಸಮಿತಿಯನ್ನು(ವಿಡಿಸಿ) ಬಲಪಡಿಸಲು ಕರೆ ನೀಡಿದ್ದಾರೆ.