ಶ್ರೀನಗರ: Shopian Encounter-  ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೊಯ್ಬಾದ (ಎಲ್‌ಇಟಿ) ಮೂವರು ಭಯೋತ್ಪಾದಕರು ಭದ್ರತಾ ಪಡೆಗಳಿಂದ ಹತರಾಗಿದ್ದಾರೆ. ಸೋಮವಾರ ಸಂಜೆ, ಭಯೋತ್ಪಾದಕರು ಮನೆಯಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು, ಸೈನಿಕರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ:
ಈ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್ಇಟಿ)-ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಭಯೋತ್ಪಾದಕರನ್ನು (Terrorist) ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರಿಂದ ಅಪರಾಧ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಗಂದರ್‌ಬಾಲ್‌ನ ಮುಖ್ತಾರ್ ಷಾ ಕೂಡ ಸೇರಿದ್ದಾನೆ ಎಂದು ಹೇಳಲಾಗಿದೆ.


ಇದನ್ನೂ ಓದಿ- Power Crisis: ದೇಶದ 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ


ಸೋಮವಾರ ಶೋಪಿಯಾನ್ ನ ತುಲ್ರಾನ್ ಗ್ರಾಮದ ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆ (Security Force) ಮತ್ತು ಪೊಲೀಸರು ಮೊದಲಿಗೆ ಭಯೋತ್ಪಾದಕರಿಗೆ ಶರಣಾಗುವಂತೆ ಅವಕಾಶ ನೀಡಿದರು. ಆದರೆ ಶರಣಾಗತಿಗೆ ಸಿದ್ದರಾಗದ ಉಗ್ರರು, ಭದ್ರತಾ ಪಡೆಗಳ ಮೇಲೆ ಗುಂಡಿನ ಸುರಿಮಳೆಗೈದರು. ಬಳಿಕ ಪ್ರತೀಕಾರವಾಗಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಕೊಂದರು ಎಂದು ತಿಳಿದುಬಂದಿದೆ.


ಪೂಂಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 5 ಯೋಧರು ಹುತಾತ್ಮರಾಗಿದ್ದಾರೆ:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ, ಸೇನೆಯ ಜೆಸಿಒ ಸೇರಿದಂತೆ 5 ಯೋಧರು ಹುತಾತ್ಮರಾಗಿದ್ದಾರೆ. ಗುಪ್ತಚರ ಮಾಹಿತಿ ಪಡೆದ ನಂತರ, ಭದ್ರತಾ ಪಡೆಗಳು ಭಯೋತ್ಪಾದಕರನ್ನು ಹುಡುಕುವ ಕಾರ್ಯಾಚರಣೆಗಾಗಿ ಪಿರ್ ಪಂಜಾಲ್ ಕಾಡುಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಭಯೋತ್ಪಾದಕರು ಹೊಂಚು ಹಾಕಿ ದಾಳಿ ಮಾಡಿದರು, ಇದರಲ್ಲಿ 5 ಸೈನಿಕರು ಹುತಾತ್ಮರಾದರು ಎಂದು ವರದಿಯಾಗಿದೆ.


ಹುತಾತ್ಮ ಯೋಧರು:
- ನಾಯಬ್ ಸುಬೇದಾರ್ ಜಸ್ವಿಂದರ್ ಸಿಂಗ್
- ನಾಯಕ್
- ಮನ್ ದೀಪ್ ಸಿಂಗ್
- ಸಿಪಾಯಿ ಗಜನ್ ಸಿಂಗ್ - ಸಿಪಾಯಿ ಸರಜ್ ಸಿಂಗ್ ಮತ್ತು
- ಸಿಪಾಯಿ ವೈಶಾಖ್ ಎಚ್


ಇದನ್ನೂ ಓದಿ- Poonch Encounter: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಧಿಕಾರಿ ಸೇರಿದಂತೆ 4 ಸೈನಿಕರು ಹುತಾತ್ಮ


ಭದ್ರತಾ ಪಡೆಗಳು ಇತರ 2 ಸ್ಥಳಗಳಲ್ಲಿ ಭಯೋತ್ಪಾದಕರನ್ನು ಎದುರಿಸುತ್ತಿವೆ:
ಸೋಮವಾರ, ಕಣಿವೆಯ ಇತರ ಭಾಗಗಳಲ್ಲಿ, ಭದ್ರತಾ ಪಡೆಗಳು ಇತರ ಎರಡು ಸ್ಥಳಗಳಲ್ಲಿ ಭಯೋತ್ಪಾದಕರನ್ನು ಎದುರಿಸಿದವು. ಲಷ್ಕರ್ ಭಯೋತ್ಪಾದಕ ಇಮ್ತಿಯಾಜ್ ಅಹ್ಮದ್ ದಾರನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಡಿಪೋರಾದ ಹಜಿನ್ ಪ್ರದೇಶದ ಗುಂಡಜಹಂಗೀರ್ ನಲ್ಲಿ ಹತ್ಯೆಗೈದಿದ್ದಾರೆ. ಅದೇ ಸಮಯದಲ್ಲಿ, ಅನಂತನಾಗ್‌ನಲ್ಲಿ ತಡರಾತ್ರಿಯಿಂದ ಆರಂಭವಾದ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್ಕೌಂಟರ್ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ. ಈ ಎನ್ ಕೌಂಟರ್ ನಲ್ಲಿ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ