Power Crisis: ದೇಶದ 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ

Power Crisis: ದೇಶದಲ್ಲಿ ತಲೆದೂರಿರುವ ಕಲ್ಲಿದ್ದಲು ಕೊರತೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.  

Written by - Yashaswini V | Last Updated : Oct 12, 2021, 07:10 AM IST
  • ಕಲ್ಲಿದ್ದಲು ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ
  • 115 ಸ್ಥಾವರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕಲ್ಲಿದ್ದಲು
  • ಸರ್ಕಾರದಿಂದ ಪೂರೈಕೆಯ ಭರವಸೆ
Power Crisis: ದೇಶದ 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ title=
Power crisis due to coal shortage: ದೇಶದ 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ

Power Crisis:  ಕಲ್ಲಿದ್ದಲಿನ ಕೊರತೆಯಿಂದಾಗಿ ದೇಶದ ಹಲವು ರಾಜ್ಯಗಳು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೆ, ಕೇಂದ್ರ ಸರ್ಕಾರವು ಅಂತಹ ಯಾವುದೇ ಕೊರತೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಹಾಗಾದರೆ ದೇಶದಲ್ಲಿ ನಿಜವಾಗಿಯೂ ವಿದ್ಯುತ್ ಬಿಕ್ಕಟ್ಟು ಇದೆಯೇ ಅಥವಾ ವಿರೋಧ ಪಕ್ಷಗಳು ಈ  ರೀತಿಯ ಗೊಂದಲವನ್ನು ಹರಡುತ್ತಿದೆಯೇ? ಎಂಬುದನ್ನು ಅಸ್ತಿತ್ವದಲ್ಲಿರುವ ಕಲ್ಲಿದ್ದಲು ನಿಕ್ಷೇಪಗಳ ಪ್ರಸ್ತುತ ಸ್ಥಿತಿಯ ಮೂಲಕ ಅರ್ಥಮಾಡಿಕೊಳ್ಳಬಹುದು.

115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ:
ಕೇಂದ್ರೀಯ ವಿದ್ಯುತ್ ಪ್ರಾಧಿಕಾರವು (Central Electricity Authority) ಭಾರತದ ಕಲ್ಲಿದ್ದಲಿನ ವಿದ್ಯುತ್ ಸ್ಥಾವರಗಳ ಇತ್ತೀಚಿನ ಸ್ಥಿತಿಯ ಕುರಿತು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ದೇಶದ 135 ವಿದ್ಯುತ್ ಸ್ಥಾವರಗಳಲ್ಲಿ 115 ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ. ಈ ವರದಿಯನ್ನು ಪ್ರಾಧಿಕಾರವು ಅಕ್ಟೋಬರ್ 10 ರವರೆಗೆ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಸ್ಥಿತಿಯ ಕುರಿತು ನೀಡಿದೆ. ಇದು 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸಾಮಾನ್ಯಕ್ಕಿಂತ ಕೆಳಗಿರುವುದನ್ನು ತೋರಿಸುತ್ತದೆ. 

ಪ್ಲಾಂಟ್ಗಳಲ್ಲಿ ಹೆಚ್ಚಿನ ದಾಸ್ತಾನು ಇಲ್ಲ;
ವರದಿಯ ಪ್ರಕಾರ, ದೇಶದ 17 ವಿದ್ಯುತ್ ಸ್ಥಾವರಗಳಲ್ಲಿ (Power Plants) ಒಂದು ದಿನದ ಕಲ್ಲಿದ್ದಲು ದಾಸ್ತಾನು ಕೂಡ ಉಳಿದಿಲ್ಲ. 26 ವಿದ್ಯುತ್ ಸ್ಥಾವರಗಳಲ್ಲಿ ಕೇವಲ ಒಂದು ದಿನದ ಕಲ್ಲಿದ್ದಲು ದಾಸ್ತಾನು ಉಳಿದಿದೆ. ಇವುಗಳಲ್ಲಿ, 22 ವಿದ್ಯುತ್ ಸ್ಥಾವರಗಳಲ್ಲಿ 2 ದಿನಗಳು, 18 ಸ್ಥಾವರಗಳಲ್ಲಿ 3 ದಿನಗಳು ಮತ್ತು 13 ವಿದ್ಯುತ್ ಸ್ಥಾವರಗಳಲ್ಲಿ 4 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲನ್ನು ಮಾತ್ರ ದಾಸ್ತಾನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Power Crisis: ದೆಹಲಿ ನಂತರ ಮಹಾರಾಷ್ಟ್ರದಲ್ಲಿ ವಿದ್ಯುತ್ ಬಿಕ್ಕಟ್ಟು, ಕಲ್ಲಿದ್ದಲು ಕೊರತೆಯಿಂದ 13 ಘಟಕಗಳು ಬಂದ್

ಅದೇ ರೀತಿ, ದೇಶದ 11 ವಿದ್ಯುತ್ ಸ್ಥಾವರಗಳಲ್ಲಿ (Power Plants), 5 ದಿನಗಳ ಕಲ್ಲಿದ್ದಲು ದಾಸ್ತಾನು ಉಳಿದಿದ್ದರೆ, 8 ವಿದ್ಯುತ್ ಸ್ಥಾವರಗಳಲ್ಲಿ 6 ದಿನಗಳ ಕಲ್ಲಿದ್ದಲು ಮಾತ್ರ ಉಳಿದಿದೆ. ಈ ಅಂಕಿಅಂಶಗಳಿಂದ ದೇಶದ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿವೆ ಮತ್ತು ಅವುಗಳಿಗೆ ವಿದ್ಯುತ್ ಪೂರೈಕೆಗೆ ಅಗತ್ಯವಾದ ಸ್ಟಾಕ್‌ನ ತುರ್ತು ಅವಶ್ಯಕತೆ ಇದೆ ಎಂಬುದು ಸ್ಪಷ್ಟವಾಗಿದೆ.

ಉತ್ತರ ಪ್ರದೇಶ-ಹರಿಯಾಣದಲ್ಲಿ ಕೆಲವು ಪ್ಲಾಂಟ್ಗಳು ಖಾಲಿ:
ಇತ್ತೀಚಿನ ಮಾಹಿತಿಯ ಪ್ರಕಾರ, ಹರಿಯಾಣದಲ್ಲಿ ನಿರ್ಮಿಸಲಾದ 5 ರಲ್ಲಿ 4 ವಿದ್ಯುತ್ ಸ್ಥಾವರಗಳಲ್ಲಿ (Power Plants) ಒಂದೇ ಒಂದು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲನ್ನು ಸಹ ಹೊಂದಿಲ್ಲ. ಆದರೆ ಒಂದು ಸ್ಥಾವರದಲ್ಲಿ 3 ದಿನಗಳ ಕಲ್ಲಿದ್ದಲು ಸಂಗ್ರಹವಿದೆ. ಅದೇ ರೀತಿ, ಉತ್ತರಪ್ರದೇಶದ 19 ವಿದ್ಯುತ್ ಸ್ಥಾವರಗಳಲ್ಲಿ, 3 ಸ್ಥಾವರಗಳಲ್ಲಿ ಕಲ್ಲಿದ್ದಲು ಪೂರ್ಣ ಖಾಲಿಯಾಗಿದೆ. 5 ಸ್ಥಾವರಗಳಲ್ಲಿ ಒಂದು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ಬಾಕಿ ಉಳಿದಿದ್ದರೆ, ಇನ್ನುಳಿದ ಐದರಲ್ಲಿ 2 ದಿನಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲು, 3 ವಿದ್ಯುತ್ ಸ್ಥಾವರಗಳಲ್ಲಿ 3 ದಿನಕ್ಕೆ ಬೇಕಾದಷ್ಟು ಕಲ್ಲಿದ್ದಲು, ಒಂದು ಸ್ಥಾವರದಲ್ಲಿ 5 ದಿನ ಬೇಕಾಗುವಷ್ಟು ಕಲ್ಲಿದ್ದಲು, ಇನ್ನೊಂದು ಸ್ಥಾವರದಲ್ಲಿ 6 ದಿನ ಮತ್ತು ಮತ್ತೊಂದರಲ್ಲಿ 8 ದಿನಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲು ಮಾತ್ರ ಉಳಿದಿದೆ. 

ಪಂಜಾಬ್ ನಲ್ಲಿ ನಿರ್ಮಿಸಲಾದ 5 ವಿದ್ಯುತ್ ಸ್ಥಾವರಗಳಲ್ಲಿ, 1 ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಪೂರ್ಣವಾಗಿ ಖಾಲಿ ಆಗಿದೆ. ರಾಜ್ಯದ ಎರಡು ವಿದ್ಯುತ್ ಸ್ಥಾವರಗಳಲ್ಲಿ, 2 ದಿನಕ್ಕೆ ಬೇಕಾದಷ್ಟು ಕಲ್ಲಿದ್ದಲು, 1 ರಲ್ಲಿ 4 ದಿನಕ್ಕೆ ಅಗತ್ಯವಾದಷ್ಟು ಕಲ್ಲಿದ್ದಲು ಮತ್ತು 1 ರಲ್ಲಿ 7 ದಿನಗಳ ಕಾಲ ಬೇಕಾದಷ್ಟು ಕಲ್ಲಿದ್ದಲು (Coal) ಮಾತ್ರ ಉಳಿದಿದೆ. ರಾಜಸ್ಥಾನದಲ್ಲಿ ನಿರ್ಮಿಸಲಾದ 4 ವಿದ್ಯುತ್ ಸ್ಥಾವರಗಳಲ್ಲಿ, 1 ವಿದ್ಯುತ್ ಸ್ಥಾವರ ಖಾಲಿಯಾಗಿದೆ, ಒಂದು ವಿದ್ಯುತ್ ಸ್ಥಾವರವು 1 ದಿನಕ್ಕೆ ಕಲ್ಲಿದ್ದಲು ಹೊಂದಿದ್ದರೆ 1 ರಲ್ಲಿ 4 ದಿನಕ್ಕೆ ಅಗತ್ಯವಿರುವಷ್ಟು ಮತ್ತು ಇನ್ನೊಂದರಲ್ಲಿ 5 ದಿನಗಳಿಗೆ ಬೇಕಾದಷ್ಟು ಕಲ್ಲಿದ್ದಲು ಮಾತ್ರ ಇದೆ.

ಇದನ್ನೂ ಓದಿ- ಇಡೀ ದೇಶದಲ್ಲಿ ವಿದ್ಯುತ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ- ಅರವಿಂದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಅಕ್ಟೋಬರ್ 9 ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ, ದೇಶದ 5 ಕಲ್ಲಿದ್ದಲು ಉತ್ಪಾದಿಸುವ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಪಡೆಯುವ ಬಗ್ಗೆ ಉಲ್ಲೇಖಿಸಿದ್ದರು. ಆ 5 ವಿದ್ಯುತ್ ಸ್ಥಾವರಗಳಲ್ಲಿ ಒಂದು ಖಾಲಿ ಇದೆ, 1 ಸ್ಥಾವರದಲ್ಲಿ ಕೇವಲ 1 ದಿನಕ್ಕೆ ಅಗತ್ಯವಾದಷ್ಟು ಕಲ್ಲಿದ್ದಲು ಉಳಿದಿದೆ. ಇನ್ನೊಂದರಲ್ಲಿ 2 ದಿನಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲು ಉಳಿದಿದ್ದರೆ, ಮತ್ತೊಂದರಲ್ಲಿ 3 ದಿನಗಳಿಗೆ ಬೇಕಾದಷ್ಟು ಮತ್ತು 1 ರಲ್ಲಿ 6 ದಿನಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲಿನ್ನು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಕಲ್ಲಿದ್ದಲು ಉತ್ಪಾದನೆ ಏಕೆ ಕಡಿಮೆಯಾಯಿತು?
ದೇಶದಲ್ಲಿ ತಲೆದೂರಿರುವ ಕಲ್ಲಿದ್ದಲು ಕೊರತೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ. ಇದಲ್ಲದೆ ಹೊರಗಿನಿಂದ ಬರುವ ಕಲ್ಲಿದ್ದಲಿನ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದೆ. ಮಳೆಗಾಲದ ಆರಂಭದಲ್ಲಿ, ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇರಲಿಲ್ಲ. ಈ ಕಾರಣಗಳಿಂದಾಗಿ, ವ್ಯಾಪಾರ ಬಿಕ್ಕಟ್ಟಿನಂತಹ ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯ ಎದುರಾಗಿದೆ ಎಂದು ತಿಳಿದುಬಂದಿದೆ.

ಕಲ್ಲಿದ್ದಲಿನ ಪೂರೈಕೆ ಹೆಚ್ಚಿಸಲು ಕ್ರಮ:
ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ವಿದ್ಯುತ್ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಕೋಲ್ ಇಂಡಿಯಾಕ್ಕೆ ಇನ್ನೂ 24 ದಿನಗಳ ಕಲ್ಲಿದ್ದಲು ದಾಸ್ತಾನು ಉಳಿದಿದೆ. ಹಾಗಾಗಿ ವಿದ್ಯುತ್ ಕೊರತೆ ಆಗುವುದಿಲ್ಲ. ರಾಜ್ಯಗಳಿಗೂ ಕೂಡ ವೇಗವಾಗಿ ಕಲ್ಲಿದ್ದಲನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News