ನವದೆಹಲಿ : ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Debit/Credit Card)  ಬಳಕೆಯಲ್ಲಿಯೂ ಸಹ ಬ್ಯಾಂಕುಗಳು ವಿಮೆ (INSURANCE) ಯ ಸೌಲಭ್ಯವನ್ನು ಒದಗಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೇ ಯೋಜನೆಗಳೊಂದಿಗೆ ಅವರು ಈ ಸೇವೆಯ ದುಪ್ಪಟ್ಟು ಲಾಭವನ್ನು ಪಡೆಯಬಹುದು ಎಂಬುದರ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ.


COMMERCIAL BREAK
SCROLL TO CONTINUE READING

ವಿಮಾ ನಿಯಮಗಳ ಪ್ರಕಾರ ಡೆಬಿಟ್  ಕಾರ್ಡ್ (Debit Card) ಮತ್ತು ಕ್ರೆಡಿಟ್ ಕಾರ್ಡ್ (Credit Card) ಕಂಪನಿಗಳು ತಮ್ಮ ಬಳಕೆದಾರರಿಗೆ ಉಚಿತ ಅಪಘಾತ ವಿಮೆಯನ್ನು ನೀಡುತ್ತವೆ. ಇದಕ್ಕಾಗಿ ಈ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಬಳಸುವುದು ಅವಶ್ಯಕ.


ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಲ್ಲಿನ ವಿಮೆಯ ಲಾಭವು ಕೇವಲ ಒಂದು ಕಾರ್ಡ್‌ನಲ್ಲಿ ಲಭ್ಯವಿರುತ್ತದೆ. ಬಳಕೆದಾರರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಿಂದ ಕಾರ್ಡ್‌ಗಳನ್ನು ಹೊಂದಿದ್ದರೆ ಅವುಗಳಲ್ಲಿ ಕೇವಲ ಒಂದು ಕಾರ್ಡ್‌ನ ವಿಮೆಯನ್ನು ಪಡೆಯಬಹುದು. ವಿಭಿನ್ನ ಕಾರ್ಡ್‌ಗಳಿಗೆ ವಿಭಿನ್ನ ವಿಮಾ ಹಕ್ಕುಗಳನ್ನು ನೀಡಲಾಗುವುದಿಲ್ಲ. ಕಾರ್ಡ್‌ನಲ್ಲಿನ ವಿಮಾ ರಕ್ಷಣೆಯು 30,000 ರೂ.ಗಳಿಂದ 10 ಲಕ್ಷ ರೂ.ವರೆಗೆ ಇರುತ್ತದೆ.


ಜನ ಧನ್ ಖಾತೆದಾರರಿಗೆ ಲಾಭ:
ಜನ ಧನ್ (JAN DHAN) ಖಾತೆದಾರರಿಗೆ ಎಟಿಎಂ ಕಾರ್ಡ್‌ನಲ್ಲಿ ವಿಮಾ ಸೌಲಭ್ಯವನ್ನು ಸರ್ಕಾರ ನೀಡಿದೆ. ಜನ ಧನ್ ಖಾತೆ ಹೊಂದಿರುವ ಮತ್ತು ರುಪೇ ಡೆಬಿಟ್ ಕಾರ್ಡ್ ಬಳಸುವವರಿಗೆ 30,000 ರೂ.ಗಳ ವಿಮಾ ಸೌಲಭ್ಯ ಲಭ್ಯವಿದೆ. ಇದಲ್ಲದೆ ಸರ್ಕಾರವು  ಜನ ಧನ್ ಖಾತೆದಾರರಿಗೆ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪ್ರತ್ಯೇಕವಾಗಿ ನೀಡುತ್ತದೆ. ಈ ರೀತಿಯಾಗಿ  ಜನ ಧನ್ ಖಾತೆದಾರರಿಗೆ ಒಟ್ಟು ಎರಡು ಲಕ್ಷದ ಮೂವತ್ತು ಸಾವಿರ ರೂ.ಗಳ ವಿಮಾ ಸೌಲಭ್ಯ ಸಿಗಲಿದೆ.


ಈ ವಿಮಾ ರಕ್ಷಣೆಯ ಲಾಭ ಪಡೆಯಲು ನಿಮ್ಮ ಕಾರ್ಡ್ ಸಕ್ರಿಯವಾಗಿರಬೇಕು. ಕಾರ್ಡ್ ಹೊಂದಿರುವವರಿಗೆ ಅಪಘಾತ ಸಂಭವಿಸಿದಲ್ಲಿ ಮತ್ತು ಅವರ ನಾಮಿನಿ ವಿಮಾ ರಕ್ಷಣೆಯ ಮೊತ್ತಕ್ಕಾಗಿ ಬ್ಯಾಂಕ್‌ಗೆ ಹಕ್ಕು ಸಾಧಿಸಿದರೆ ಮೊದಳಿಗೆ ಕಳೆದ 60 ದಿನಗಳಲ್ಲಿ ಕಾರ್ಡ್‌ನೊಂದಿಗೆ ಯಾವುದೇ ವಹಿವಾಟು ನಡೆದಿದೆಯೇ ಎಂದು ಬ್ಯಾಂಕ್ ಪರಿಶೀಲಿಸುತ್ತದೆ.


ಕಳೆದ 60 ದಿನಗಳಿಂದ ಬಳಕೆದಾರರ ಕಾರ್ಡ್‌ಗಳು ಸಕ್ರಿಯವಾಗಿಲ್ಲದಿದ್ದರೆ ನಂತರ ವಿಮಾ ಹಕ್ಕು ರದ್ದುಗೊಳ್ಳುತ್ತದೆ. ಎಟಿಎಂ ಯಂತ್ರದಲ್ಲಿ ಕಾರ್ಡ್‌ನ ಬಳಕೆ ಕೂಡ ಮಾನ್ಯವಾಗಿರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಶಾಪಿಂಗ್ ಅಥವಾ ಕಾರ್ಡ್‌ನಿಂದ ಮಾತ್ರ ಪಾವತಿಯ ಆಧಾರದ ಮೇಲೆ ಮಾತ್ರ ಈ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದ್ದರಿಂದ ನೀವು ಬ್ಯಾಂಕಿನಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ, ಅದನ್ನು ನಿಯಮಿತವಾಗಿ ಬಳಸುವುದು ಉತ್ತಮ.