ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಯೆಸ್ ಬ್ಯಾಂಕ್ ದಿವಾಳಿಯಾಗಿರುವ ಹಿನ್ನಲೆಯಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೆಸರಿನಲ್ಲಿರುವ ಪರೋಡಿ ಟ್ವಿಟ್ಟರ್ ಖಾತೆಯಿಂದ ಮಾಡಿರುವ ಟ್ವೀಟ್ ಈಗ ಭಾರಿ ಗಮನ ಸೆಳೆದಿದೆ.


COMMERCIAL BREAK
SCROLL TO CONTINUE READING

ನೆಹರು ತಮ್ಮ ಟ್ವೀಟ್ ನಲ್ಲಿ 'ಯಾರಾದರೂ ನನ್ನ ಮೇಲೆ ಆರೋಪ ಮಾಡುವ ಮೊದಲು ನಾನು ಈಗಲೇ ಸ್ಪಷ್ಟಪಡಿಸುತ್ತೇನೆ ಯೆಸ್ ಬ್ಯಾಂಕ್ 2004 ರಲ್ಲಿ ಸ್ಥಾಪಿತವಾಗಿದೆ ' ಎಂದು ಟ್ವೀಟ್ ಮಾಡಲಾಗಿದೆ. ಇದುವರೆಗೆ ಈ ಟ್ವೀಟ್ 18 ಸಾವಿರ ಲೈಕ್ ಗಳನ್ನು ಗಳಿಸಿದ್ದರೆ, 4.3 ಸಾವಿರ ಬಾರಿ ರಿಟ್ವೀಟ್ ಮಾಡಲಾಗಿದೆ.



ಯೆಸ್ ಬ್ಯಾಂಕ್ ಈಗ ದಿವಾಳಿಯಾಗಿರುವ ಹಿನ್ನಲೆಯಲ್ಲಿ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇನ್ನೊಂದೆಡೆಗೆ ಕೇಂದ್ರ ಸರ್ಕಾರ ಠೇವಣಿದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಇನ್ನೊಂದೆಡೆ ಈಗ ಈ ಸಂಕಷ್ಟದ ಮಧ್ಯದಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣ ಮಧ್ಯಪ್ರವೇಶಿಸಿ ಯೆಸ್ ಬ್ಯಾಂಕ್ ನ್ನು ತನ್ನ ವಶಕ್ಕೆ ತೆಗೆದುಕೊಂಡು ಒಂದು ಖಾತೆಯಿಂದ ಹಣ ತೆಗೆದುಕೊಳ್ಳುವ ಮೀತಿಯನ್ನು 50,000 ರೂ ಸೀಮಿತಗೋಳಿಸಲಾಗಿದೆ.