ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಸಾಧ್ಯತೆ ಇರುವ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಜಯ ಬಚ್ಚನ್ ಅವರು ಬಿಜೆಪಿ ವಿರುದ್ಧ ಮಾತನಾಡಬಹುದು ಆದರೆ ತಮ್ಮ ವಿರುದ್ಧ ಎಂದಿಗೂ ಏನನ್ನೂ ಹೇಳುವುದಿಲ್ಲ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸೋಮವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'ನಾನು ಅವರನ್ನು ಪಶ್ಚಿಮ ಬಂಗಾಳದಲ್ಲಿ ಸ್ವಾಗತಿಸುತ್ತೇನೆ. ನಾನು ಅವರೊಂದಿಗೆ ಕುಟುಂಬ ಸಂಬಂಧವನ್ನು ಹೊಂದಿಲ್ಲವಾದರೂ, ಅವರು ನನಗೆ ಚೆನ್ನಾಗಿ ತಿಳಿದಿರುತ್ತಾರೆ. ಅವರು ಬಿಜೆಪಿ ವಿರುದ್ಧ ಮಾತನಾಡುತ್ತಾರೆ, ಆದರೆ ಎಂದಿಗೂ ನನ್ನ ವಿರುದ್ಧ ಏನನ್ನೂ ಹೇಳುವುದಿಲ್ಲ" ಎಂದು ಸುಪ್ರಿಯೋ ಎಎನ್‌ಐಗೆ ತಿಳಿಸಿದರು.


ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಜಯಾ ಬಚ್ಚನ್ ರಾಜಕೀಯ ಮಾಡುತ್ತಿದ್ದಾರೆ-ಜಯಪ್ರದಾ


ಟಿಎಂಸಿ ಅರುಪ್ ಬಿಸ್ವಾಸ್ ವಿರುದ್ಧ ಪಕ್ಷದ ಸಂಸದ ಬಾಬುಲ್ ಸುಪ್ರಿಯೋ ಅವರನ್ನು ಟೋಲಿಗಂಜ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.ಟಿಎಂಸಿ ಮೂಲಗಳ ಪ್ರಕಾರ, ಟಿಎಂಸಿ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ  ಜಯಾ ಬಚ್ಚನ್ ಏಪ್ರಿಲ್ 5 ರಿಂದ ಏಪ್ರಿಲ್ 8 ರವರೆಗೆ ಪಶ್ಚಿಮ ಬಂಗಾಳದಲ್ಲಿರುತ್ತಾರೆ.ಸೋಮವಾರ ಜಯ ಬಚ್ಚನ್ (Jaya Bachchan) ಅವರು ಟೋಲಿಗಂಗೆ ಅರುಪ್ ಬಿಸ್ವಾಸ್‌ನ ಟಿಎಂಸಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.


ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರಿಗೆ ಬಿಜೆಪಿಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯ ವಿರುದ್ಧ ಏಕೀಕೃತ ಮತ್ತು ಪರಿಣಾಮಕಾರಿ ಹೋರಾಟಕ್ಕಾಗಿ ಆಗ್ರಹಿಸಿ ಪತ್ರ ಬರೆದ ನಂತರ ಮತ್ತು ಸಭೆ ನಡೆಸಬೇಕೆಂದು ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.


ಇದನ್ನೂ ಓದಿ: ಜಯ ಬಚ್ಚನ್ ಮಾತಿಗೆ ಕೋಪಗೊಂಡು ಟ್ವೀಟ್ ಮೂಲಕ ಕಿಡಿಕಾರಿದ ಕಂಗನಾ ರನೌತ್


ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ,ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್, ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಸಿಪಿಐ (ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ನಾಷ್ಯನಲ್ ಕಾನ್ಫೆರನ್ಸ್  ಮುಖಂಡ ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರಿಗೆ ಈ ಪತ್ರವನ್ನು ಕಳುಹಿಸಲಾಗಿದೆ.


ಇದನ್ನೂ ಓದಿ: 'ಜಲ್ಸಾ' ಬಂಗಲೆಯ ಹೊರಗೆ ಬೈಕ್ ರೇಸಿಂಗ್‌ನಿಂದ ಅಸಮಾಧಾನಗೊಂಡ ಜಯಾ ಬಚ್ಚನ್ ಮಾಡಿದ್ದೇನು?


ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 1 ರಂದು ನಡೆಯಿತು. ಮುಂದಿನ ಹಂತದ ಮತದಾನ ಏಪ್ರಿಲ್ 6 ರಂದು ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy