ಪಾಟ್ನಾ: ಸರ್ಕಾರಿ ಕಚೇರಿಯಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ಗಳಂತಹ ಅನೌಪಚಾರಿಕ ಬಟ್ಟೆಗಳನ್ನು ಧರಿಸಬೇಡಿ ಎಂದು ಬಿಹಾರ ಸರ್ಕಾರ ಎಲ್ಲಾ ಸಚಿವಾಲಯದ ನೌಕರರಿಗೆ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಕಚೇರಿಯಲ್ಲಿ ಇರುವಾಗ ಹಿತವಾದ, ಯೋಗ್ಯ ಮತ್ತು ಆರಾಮದಾಯಕ ಔಪಚಾರಿಕ ಬಟ್ಟೆಗಳನ್ನು ಧರಿಸಲು ಸರ್ಕಾರ ನೌಕರರನ್ನು ಕೋರಿದೆ. ಬಿಹಾರ ಸಚಿವಾಲಯದ ಸಾಮಾನ್ಯ ಆಡಳಿತ ವಿಭಾಗ ಹೊರಡಿಸಿದ ಆದೇಶದಲ್ಲಿ 'ಅಧಿಕಾರಿಗಳು ಮತ್ತು ನೌಕರರು ಕ್ಯಾಶುಯಲ್ ಉಡುಪಿನಲ್ಲಿ ಕಚೇರಿಗೆ ಬರುತ್ತಿರುವುದು ಸಾಮಾನ್ಯವಾಗಿ ಕಚೇರಿಯ ಸಂಸ್ಕೃತಿ ಮತ್ತು ಘನತೆಗೆ ವಿರುದ್ಧವಾಗಿದೆ' ಎಂದು ಉಲ್ಲೇಖಿಸಲಾಗಿದೆ.


'ಆದ್ದರಿಂದ ಸಚಿವಾಲಯದ ನೌಕರರು ಸರಿಯಾದ ಔಪಚಾರಿಕ ಉಡುಪನ್ನು ಧರಿಸಲು ಸೂಚನೆ ನೀಡಲಾಗಿದೆ, ಬಟ್ಟೆ ಹಿತ, ಸಭ್ಯ ಮತ್ತು ಆರಾಮದಾಯಕವಾಗಬೇಕು' ಎಂದು ಉನ್ನತ ಕಾರ್ಯದರ್ಶಿ ಶಿವಮಹಾದೇವ್ ಪ್ರಸಾದ್ ಅವರು ಸಹಿ ಮಾಡಿದ ಆದೇಶದಲ್ಲಿ ತಿಳಿಸಲಾಗಿದೆ. 'ಉಡುಗೆ ಹವಾಮಾನ ಮತ್ತು ಕೆಲಸದ ಸ್ವರೂಪಕ್ಕೆ ಅನುಗುಣವಾಗಿರಬೇಕು.ಅವರು ಕಚೇರಿಯಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ಗಳಂತಹ ಅನೌಪಚಾರಿಕ ಉಡುಪನ್ನು ಧರಿಸುವುದಿಲ್ಲ ಎಂದು ಆದೇಶಿಸಲಾಗಿದೆ 'ಎಂದು ಹೇಳಿದೆ.