ನವದೆಹಲಿ: JEE Main Session 4 Result 2021 Latest Updates - ಸುದೀರ್ಘ ಕಾಯುವಿಕೆಯ ಬಳಿಕ ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ತಡರಾತ್ರಿ ಜೆಇಇ ಮುಖ್ಯ 2021 ರ ಫಲಿತಾಂಶಗಳನ್ನು ಪ್ರಕಟಿಸಿದೆ. ಇದರಲ್ಲಿ ಒಟ್ಟು 44 ಅಭ್ಯರ್ಥಿಗಳು 100 ಪರ್ಸೆಂಟೈಲ್ ಪಡೆದಿದ್ದಾರೆ. 18 ಅಭ್ಯರ್ಥಿಗಳು ಅಗ್ರ ಶ್ರೇಣಿಯನ್ನು ಪಡೆದಿದ್ದಾರೆ. ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮಂಗಳವಾರ ರಾತ್ರಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಅಧಿಕೃತ ವೆಬ್ ಸೈಟ್ ಮೇಲೆ ಫಲಿತಾಂಶ ಪರಿಶೀಲಿಸಬಹುದು 
ಒಟ್ಟು 7.8 ಲಕ್ಷ ವಿದ್ಯಾರ್ಥಿಗಳು ಜೆಇಇ-ಮುಖ್ಯ ಪರೀಕ್ಷೆಗೆ ತಮ್ಮ  ಹೆಸರನ್ನು ನೋಂದಾಯಿಸಿದ್ದರು. ವಿದ್ಯಾರ್ಥಿಗಳು ತಮ್ಮ ಜೆಇಇ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಪರಿಶೀಲಿಸಬಹುದು. ಇದಲ್ಲದೇ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ntaresults.nic.in ಅಥವಾ nta.ac.in ನಲ್ಲಿ ಪರಿಶೀಲಿಸಬಹುದು.


ವೆಬ್ ಸೈಟ್ ಮೇಲೆ JEE Main 2021 Result ಈ ರೀತಿ ಪರಿಶೀಲಿಸಿ 
ಹಂತ 1: ಅಧಿಕೃತ ವೆಬ್‌ಸೈಟ್ jeemain.nta.nic.in ಅಥವಾ ntaresults.nic.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ, 'JEE ಮುಖ್ಯ 2021 ಸೆಷನ್ 4 ಫಲಿತಾಂಶಗಳು' ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ.
ಹಂತ 4: ವಿವರಗಳನ್ನು ಭರ್ತಿ ಮಾಡಿದ ನಂತರ 'Submit' ಗುಂಡಿಯ ಮೇಲೆ ಕ್ಲಿಕ್ ಮಾಡಿ.
ಹಂತ 5: ಜೆಇಇ ಸೆಶನ್ 4 ರ ಮುಖ್ಯ ಫಲಿತಾಂಶವನ್ನು ಪರದೆಯ ಮೇಲೆ ಬಿತ್ತರಗೊಳ್ಳಲಿದೆ.
ಹಂತ 6: ಜೆಇಇ ಮುಖ್ಯ ಅಧಿವೇಶನ 4 ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.


JEE Main 2021 Topper List ಇಂತಿದೆ
SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ


ವರ್ಷದಲ್ಲಿ 4 ಬಾರಿ ಈ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ
ಈ ವರ್ಷದಿಂದ, ಜಂಟಿ ಪ್ರವೇಶ ಪರೀಕ್ಷೆ(ಜೆಇಇ-ಮುಖ್ಯ) ಯನ್ನು ವರ್ಷದಲ್ಲಿ ನಾಲ್ಕು ಬಾರಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ನೀಡಲಾಗಿದೆ. ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೆಯದನ್ನು ಮಾರ್ಚ್‌ನಲ್ಲಿ ನಡೆಸಲಾಗಿದೆ. ಮುಂದಿನ ಹಂತದ ಪರೀಕ್ಷೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿತ್ತು, ಆದರೆ ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಮುಂದೂಡಲಾಗಿತ್ತು.. ಮೂರನೇ ಹಂತವನ್ನು ಜುಲೈ 20-25 ರಿಂದ ನಡೆಸಲಾಯಿತು ಮತ್ತು ನಾಲ್ಕನೇ ಹಂತವನ್ನು ಆಗಸ್ಟ್ 26 ರಿಂದ ಸೆಪ್ಟೆಂಬರ್ 2 ರವರೆಗೆ ಆಯೋಜನೆಗೊಂಡಿತ್ತು.


ಇದನ್ನೂ ಓದಿ-Coronavirus: ಇನ್ನೂ ಎಷ್ಟು ದಿನ ಇರುತ್ತೆ ಈ ಸಾಂಕ್ರಾಮಿಕ ರೋಗ? ಕಳವಳಕಾರಿ ವಿಷಯ ಹೇಳಿದ WHO


ಈಗ JEE Advanced 2021ಗೆ ನೋಂದಣಿ ಆರಂಭ
ಇದುವರೆಗೆ ಜೆಇಇ ಅಡ್ವಾನ್ಸ್ಡ್ 2021 ರ ನೋಂದಣಿ ಮುಂದೂಡಲಾಗಿತ್ತು, ಏಕೆಂದರೆ ಜೆಇಇ-ಮುಖ್ಯ ಫಲಿತಾಂಶವಿಲ್ಲದೆ ಅಡ್ವಾನ್ಸ್ಡ್ ಗೆ ನೋಂದಣಿ ಸಾಧ್ಯವಿಲ್ಲ. ಜೆಇಇ ಮುಖ್ಯ ಫಲಿತಾಂಶ 2021 ಬಿಡುಗಡೆಯಾದ ನಂತರ, ಜೆಇಇ ಅಡ್ವಾನ್ಸ್ಡ್ ಗೆ ನೋಂದಣಿ ಆರಂಭವಾಗುತ್ತದೆ. ಕಟ್ಆಫ್‌ನಲ್ಲಿ ಅಗ್ರ ಶ್ರೇಯಾಂಕಗಳನ್ನು ಪಡೆದ 2.5 ಲಕ್ಷ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ 2021 ಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೀಡುವ ಮೂಲಕ ಜೆಇಇ ಅಡ್ವಾನ್ಸ್ಡ್‌ಗೆ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ-ಪಾಕ್ ನಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿದಂತೆ 6 ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.