Terrorists Arrested:ಪಾಕ್ ನಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿದಂತೆ 6 ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

Terrorists Arrested: ಇಬ್ಬರು ಭಯೋತ್ಪಾದಕರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಡಿಸಿಪಿ ವಿಶೇಷ ತಂಡದ (Delhi Police Special Cell) ಪ್ರಮೋದ್ ಕುಮಾರ್ ಕುಶ್ವಾಹ (DCP Pramod Kumar Kushwah) ಮಾಹಿತಿ ನೀಡಿದ್ದಾರೆ.  ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : Sep 14, 2021, 08:39 PM IST
  • ಆರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ದೆಹಲಿ ಪೋಲೀಸರ ವಿಶೇಷ ಸೆಲ್
  • ಇವರಲ್ಲಿ ಇಬ್ಬರು ಭಯೋತ್ಪಾದಕರು ಪಾಕ್ ನಲ್ಲಿ ತರಬೇತಿ ಪಡೆದಿದ್ದಾರೆ.
  • ಅಲ್ಲಿಂದ ವಾಪಸ್ ಬಂದ ಬಳಿಕ ಇವರು ಸ್ಲೀಪರ್ ಸೆಲ್ ರೀತಿಯಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
Terrorists Arrested:ಪಾಕ್ ನಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿದಂತೆ 6 ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

Terrorists Arrested: ದೆಹಲಿ ಪೊಲೀಸರು ಆರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರ ವಿಶೇಷ ತಂಡ ಈ ಭಯೋತ್ಪಾದಕರನ್ನು ಬಂಧಿಸಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾಈ ಕಾರ್ಯಾಚರಣೆ ನಡೆಸಿದ್ದಾರೆ.  ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪಿನ ಜನರು ದೆಹಲಿ ಮತ್ತು ಸಮೀಪದ ಪ್ರದೇಶಗಳಲ್ಲಿ ಸ್ಫೋಟ ನಡೆಸಲು ಬಯಸಿದ್ದು.  ಅವರ ಗುರಿಯು ಜನನಿಬಿಡ ಸ್ಥಳಗಳೆಂದು ವಿಶೇಷ ತಂಡಕ್ಕೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ,  ಇಬ್ಬರು ಭಯೋತ್ಪಾದಕರನ್ನು ದೆಹಲಿಯಿಂದ ಬಂಧಿಸಲಾಗಿದೆ. ಇದಲ್ಲದೇ, ಯುಪಿ ಮತ್ತು ರಾಜಸ್ಥಾನದಿಂದ ಇತರ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೋಲೀಸರ ವಿಶೇಷ ತಂಡದ ಡಿಸಿಪಿ ಪ್ರಮೋದ್ ಕುಮಾರ್ ಕುಶ್ವಾಹ, "ದೆಹಲಿ ಪೋಲೀಸರ ವಿಶೇಷ ತಂಡ ಪಾಕ್ ಬೆಂಬಲಿತ ಉಗ್ರ ಮಾಡ್ಯೂಲ್ ನ (Terror Module) ಬಣ್ಣ ಬಯಲು ಮಾಡಿದ್ದು, ಇದರಲ್ಲಿ ಇಬ್ಬರು ಉಗ್ರರು ಪಾಕ್ ನಲ್ಲಿ ತರಬೇತಿ ಪಡೆದಿದ್ದಾರೆ. ಅವರ ಬಳಿಯಿಂದ ಸ್ಪೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಹೇಳಿದ್ದಾರೆ.

ಈ ಕುರಿತು ಹೇಳಿದೆ ನೀಡಿರುವ ದೆಹಲಿ ಪೋಲೀಸರ ವಿಶೇಷದ ಸಿಪಿ ನೀರಜ್ ಠಾಕೂರ್ (CP Neeraj Thakoor), ಇದು ಭಯೋತ್ಪಾದನೆ ವಿರೋಧಿ ಅಭಿಯಾನದಲ್ಲಿ ಸಿಕ್ಕ ದೊಡ್ಡ ಯಶಸ್ಸು ಇದಾಗಿದೆ ಎಂದಿದ್ದಾರೆ. ಮಲ್ಟಿಸ್ಟೇಟ್ ಕಾರ್ಯಾಚರಣೆಯಲ್ಲಿ (Multi-State Operation) ನಾವು ಆರು ಜನರನ್ನು ಬಂಧಿಸಿದ್ದೇವೆ ಎಂದಿದ್ದಾರೆ.  ಬಂಧಿತ ಶಂಕಿತ ಭಯೋತ್ಪಾದಕರನ್ನು ಸಮೀರ್, ಲಾಲಾ, ಜೀಶನ್ ಕಮರ್, ಒಸಾಮಾ, ಜಾನ್ ಮೊಹಮ್ಮದ್ ಅಲಿ ಶೇಖ್ ಮತ್ತು ಮೊಹಮ್ಮದ್ ಅಬು ಬಕರ್ ಎಂದು ಗುರುತಿಸಲಾಗಿದೆ. ವಿಶೇಷವೆಂದರೆ ಈ ಆರು ಮಂದಿಯಲ್ಲಿ ಈ ವರ್ಷ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಹಿಂದಿರುಗಿದ ಇಬ್ಬರು ಉಗ್ರರು ಕೂಡ ಶಾಮೀಲಾಗಿದ್ದಾರೆ. ಭಾರತದ ಕೆಲವು ನಗರಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕ ಘಟನೆಯನ್ನು ನಡೆಸಲು ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಆರದ ಮೇಲೆ  ದೆಹಲಿ ಪೊಲೀಸರ ವಿಶೇಷ ತಂಡ ಡಿಸಿಪಿ ಪ್ರಮೋದ್ ಕುಶ್ವಾಹ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುವ ವಿಶೇಷ ತಂಡವನ್ನು ರಚಿಸಿತ್ತು.

ಪಾಕಿಸ್ತಾನ್ ಹೇಗೆ ತಲುಪಿದ್ದರು?
ಮಾನವ ಹಾಗೂ ತಾಂತ್ರಿಕ ಇನ್ಪುಟ್ ಅನ್ನು ಪರಿಶೀಲನೆಗೆ ಒಳಪಡಿಸಿದಾಗ ಇದು ಹಲವು ರಾಜ್ಯಗಳಲ್ಲಿ ಹರಡಿರುವ ಒಂದು ದೊಡ್ಡ ನೆಟ್ವರ್ಕ್ ಆಗಿದೆ. ಇಂದು ಬೆಳಗ್ಗೆ ಈ ಆಪರೇಶನ್ ಗೆ ಅಂತ್ಯ ಹಾಡಲು ನಾವು ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆವು ಎಂದು ಸ್ಪೆಷಲ್ ಸೆಲ್ ಸಿಪಿ ನೀರಜ್ ಠಾಕೂರ್ ಮಾಹಿತಿ ನೀಡಿದ್ದಾರೆ. ಎಲ್ಲಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ವಾಸಿಸುವ ಸಮೀರ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಯಿತು. ಈತನನ್ನು ಕೋಟಾದ ಟ್ರೇನ್ ನಲ್ಲಿ ಬಂಧಿಸಲಾಗಿದೆ. ಇದಾದ ಬಳಿಕ ಇಬ್ಬರನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಈ ಇಬ್ಬರ ವಿಚಾರಣೆಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬಂಧಿತರಲ್ಲಿ ಇಬ್ಬರು ಇದೆ ವರ್ಷದ ಏಪ್ರಿಲ್ ನಲ್ಲಿ ಮಸ್ಕತ್ ಗೆ ಹೋಗಿದ್ದರು. ಅಲ್ಲಿಂದ ನೌಕಾಯಾನದ ಮೂಲಕ ಅವರನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ. ಅಲ್ಲಿನ ಒಂದು ಫಾರ್ಮ್ ಹೌಸ್ ನಲ್ಲಿ ಅವರನ್ನು ಇರಿಸಲಾಗಿತ್ತು. ಅಲ್ಲಿಯೇ ಅವರಿಗೆ ಸ್ಫೋಟಕಗಳನ್ನು ತಯಾರಿಸುವ ಮತ್ತು ಇತರ ತರಬೇತಿಗಳನ್ನು 15 ದಿನಗಳವರೆಗೆ ನೀಡಲಾಗಿದೆ. ತರಬೇತಿಯ ಬಳಿಕ ಅವರನ್ನು ಪುನಃ ಮಸ್ಕತ್ ಗೆ ಕಳುಹಿಸಲಾಗಿದೆ.

ಇದನ್ನೂ ಓದಿ-Taliban-ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿ ಬೆದರಿಕೆ ಬಗ್ಗೆ ಯುಎಸ್ ಎಚ್ಚರಿಸಿದೆ

ವಿಚಾರಣೆಯ ವೇಳೆ ತಿಳಿದ ಮಹತ್ವದ ಮಾಹಿತಿ ಎಂದರೆ, ಇವರನ್ನು ಮಸ್ಕತ್ ನಿಂದ ಕಳುಹಿಸುವಾಗ ಇವರ ತಂಡದಲ್ಲಿ ಸುಮಾರು 14 ರಿಂದ 15 ಜನರು ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ಅವರನ್ನು ಕೂಡ ಟ್ರೇನಿಂಗ್ ಗಾಗಿ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ವಾಪಸ್ ಬಂದ ಬಳಿಕ ಇವರು ಸ್ಲೀಪರ್ ಸೆಲ್ ರೀತಿಯಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇದರಲ್ಲಿ ಎರಡು ಪ್ರತ್ಯೇಕ ತಂಡಗಳು ರಚನೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ತಂಡವನ್ನು ಅಂಡರ್ವರ್ಲ್ಡ್ ಗೆ ಹಸ್ತಾಂತರಿಸಲಾಗಿದ್ದು, ಇದನ್ನು ದಾವುದ್ ಇಬ್ರಾಹಿಮ್ ಸಹೋದರ ಅನೀಸ್ ಇಬ್ರಾಹಿಮ್ ಆಪರೇಟ್ ಮಾಡುತ್ತಿದ್ದ. ಗಡಿಯಾಚೆಯಿಂದ ಬರುವ ಶಸ್ತ್ರಾಸ್ತ್ರಗಳನ್ನು ಭಾರತದ ವಿವಿಧ ನಗರಗಳಲ್ಲಿ ಅಡಗಿಸುವುದು ಈ ತಂಡದ ಕೆಲಸವಾಗಿದೆ. ಫಂಡ್ ಸಂಗ್ರಹಣೆ ಇವರ ಎರಡನೇ ಕೆಲಸವಾಗಿದೆ. ಮಹಾರಾಷ್ಟ್ರದಿಂದ ಬಂಧಿತ ಸಮೀರ್ ಹಾಗೂ ಉತ್ತರ ಪ್ರದೇಶದಿಂದ ಬಂಧಿತ ಲಾಲಾ ಹೆಸರಿನ ವ್ಯಕ್ತಿಗಳು ಇದೆ ಅಂಡರ್ವರ್ಲ್ಡ್ ಗುಂಪಿಗೆ ಸೇರಿದವರಾಗಿದ್ದಾರೆ.

ಇದನ್ನೂ ಓದಿ-ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ರಕ್ಷಣಾ ಪಡೆ, ಒಬ್ಬ ಯೋಧ ಹುತಾತ್ಮ

ಉದ್ದೇಶ ಏನಿತ್ತು?
ಈ ಕುರಿತು ಮಾಹಿತಿ ನೀಡಿರುವ ವಿಶೇಷ ತಂಡದ ಅಧಿಕಾರಿಗಳು, ಭಾರತದ ಪ್ರಮುಖ ನಗರಗಳಲ್ಲಿ ಜಾಗಗಳನ್ನು ಗುರುತಿಸುವುದು ಮತ್ತು ರೇಕಿ ನಡೆಸುವುದು ಎರಡನೇ ಕಂಪೋನೆಂಟ್ ಕೆಲಸವಾಗಿದೆ. ಮುಂಬರುವ ಹಬ್ಬದ ಸೀಜನ್ ನಲ್ಲಿ ಬ್ಲಾಸ್ಟ್ ನಡೆಸುವುದು ಇವರ ಉದ್ದೇಶವಾಗಿತ್ತು. ಇದುವರೆಗೆ ಜಪ್ತಿ ಮಾಡಲಾಗಿರುವ ವಸ್ತುಗಳಲ್ಲಿ ಸ್ಫೋಟಕ ಹಾಗೂ ಶಸ್ತ್ರಾಸ್ತ್ರಗಳು ಶಾಮೀಲಾಗಿವೆ. ವಿಚಾರಣೆಯ ವೇಳೆ ಇವರು ಟ್ರೇನಿಂಗ್ ನಲ್ಲಿ ಪಡೆದ ಮಾಹಿತಿಯ ಕುರಿತು ವಿವರವಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳನ್ನು ಕೇಂದ್ರೀಯ ತನಿಖಾ ತಂಡದ ಜೊತೆಗೆ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ-ಜಮ್ಮು ಕಾಶ್ಮೀರದ ಕುಲಗಾಮ್ ನಲ್ಲಿ ಭಯೋತ್ಪಾದಕ ದಾಳಿ ; ಬಿಜೆಪಿ ನಾಯಕ ಜಾವೇದ್ ಅಹಮ್ಮದ್ ದಾರ್ ಹತ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News