ನವದೆಹಲಿ: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಎಂ) ಗೆ ಸೇರಿದ ಕನಿಷ್ಠ ಅರ್ಧ ಡಜನ್ ಭಯೋತ್ಪಾದಕರು ಫಿರೋಜ್ಪುರ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ  ಭಾರತಕ್ಕೆ ಪ್ರವೇಶಿಸಿದ್ದಾರೆ. ಈಗ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಪಂಜಾಬ್ ಪೊಲೀಸರ ಗುಪ್ತಚರ ಇಲಾಖೆ ತಿಳಿಸಿದೆ ಎಂದು ಐಎಏನ್ಎಸ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಕೌಂಟರ್ ಇಂಟೆಲಿಜೆನ್ಸ್ ಇನ್ಸ್ಪೆಕ್ಟರ್ ಜನರಲ್ ನೀಡಿದ ಪತ್ರವೊಂದರಲ್ಲಿ, "ಕನಿಷ್ಠ ಆರರಿಂದ ಏಳು ಭಯೋತ್ಪಾದಕರು ಪಂಜಾಬ್ನಲ್ಲಿ (ಬಹುಶಃ ಫಿರೋಜ್ಪುರ್ ಪ್ರದೇಶ) ಇದ್ದಾರೆ ಅವರು ಪಂಜಾಬ್ ನಿಂದ ದೆಹಲಿ ಕಡೆಗೆ ಸಾಗುತ್ತಿರುವ ಮಾಹಿತಿ ಇದೆ ಆದ್ದರಿಂದ ." ಭದ್ರತಾ ಹಂತವನ್ನು, ವಿಶೇಷವಾಗಿ ಗಡಿಯುದ್ದಕ್ಕೂ, ಮತ್ತು ರಾಜ್ಯದಾದ್ಯಂತ ಪರಿಶೀಲಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.


ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಎರಡನೇ ಹಂತದ ರಕ್ಷಣಾ ಪರಿಶೀಲನೆ ಯನ್ನು ಬಲಪಡಿಸುವುದು ಮತ್ತು ಬಿಎಸ್ಎಫ್ ಮತ್ತು ಇತರ ಪೋಲಿಸ್ / ರಕ್ಷಣಾ ಸಂಸ್ಥೆಗಳು ಈ ಪ್ರದೇಶಗಳಲ್ಲಿ ಸಂಘಟಿಸಲು ಅಗತ್ಯವಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.