ಜೆಟ್ ಏರ್ವೇಸ್ ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ ಸಾಧ್ಯತೆ!
ಈಗಾಗಲೇ 8,000 ಕೋಟಿ ಸಾಲದ ಹೊರೆ ಹೊತ್ತಿರುವ ಜೆಟ್ ಏರ್ವೇಸ್, ಇದೀಗ 10ಕ್ಕಿಂತಲೂ ಕಡಿಮೆ ವಿಮಾನಗಳನ್ನು ಹೊಂದಿದೆ.
ಮುಂಬೈ: ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಝೀ ಮೀಡಿಯಾಗೆ ತಿಳಿಸಿವೆ.
ಈಗಾಗಲೇ 8,000 ಕೋಟಿ ಸಾಲದ ಹೊರೆ ಹೊತ್ತಿರುವ ಜೆಟ್ ಏರ್ವೇಸ್, ಇದೀಗ 10ಕ್ಕಿಂತಲೂ ಕಡಿಮೆ ವಿಮಾನಗಳನ್ನು ಹೊಂದಿದೆ.
ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಕಳೆದ ತಿಂಗಳಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಏರ್ಲೈನ್ನಲ್ಲಿ ಪಾಲನ್ನು ಪಡೆದುಕೊಳ್ಳಲು ಬಿಡ್ಡಿಂಗ್ನಿಂದ ದೂರ ಉಳಿದಿದ್ದಾರೆ.
ಈಗಾಗಲೇ ಏಪ್ರಿಲ್ 18ರವರೆಗೂ ತನ್ನ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ವೇಸ್, ಸಾಲದ ಸುಳಿಯಿಂದ ಹೊರಬರಲು ಹೊಸ ಯೋಜನೆ ರೂಪಿಸುತ್ತಿದೆ.