ನವದೆಹಲಿ: ಗಣರಾಜ್ಯೋತ್ಸವದಂದು ಹಲವಾರು ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಸರ್ಕಾರ ಶೀಘ್ರದಲ್ಲೇ ಹೊಸ ನಿವಾಸ ನೀತಿಯನ್ನು ರೂಪಿಸಲಿದೆ ಮತ್ತು ಖಾಸಗಿ ವಲಯದಲ್ಲಿ ಶೇ.75 ರಷ್ಟು ಉದ್ಯೋಗಗಳನ್ನು ರಾಜ್ಯದ ಜನರಿಗೆ ಮೀಸಲಿಡಲಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ, ಸುಪ್ರೀಂಕೋರ್ಟ್ ನಿಂದ ತಡೆ


ಶಾಲಾ ಶಿಕ್ಷಕರು ಮತ್ತು ಪೊಲೀಸ್ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಲಿದೆ,2021 ನೇಮಕಾತಿಗಳ ವರ್ಷವಾಗಿರುತ್ತದ.ಹೊಸ ನಿವಾಸ ನೀತಿಯನ್ನು ರೂಪಿಸಲಾಗುವುದು ಮತ್ತು ಖಾಸಗಿ ವಲಯದ ಶೇಕಡಾ 75 ಹುದ್ದೆಗಳನ್ನು ಸ್ಥಳೀಯ ಜನರಿಗೆ ಮೀಸಲಿಡಲಾಗುವುದು (reservation).ಅಲ್ಪಸಂಖ್ಯಾತ ಶಾಲೆಗಳಲ್ಲಿ ಶಿಕ್ಷಕರ ನೇಮಕಕ್ಕೂ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.


ಇದನ್ನೂ ಓದಿ: 'ಬೋಧಕ ಸ್ಥಾನಗಳಿಗೆ ಮೀಸಲಾತಿ ನೀಡುವಂತಿಲ್ಲ'- ಕೇಂದ್ರಕ್ಕೆ IIM ಸಂಸ್ಥೆಗಳ ಮನವಿ


ರಾಜ್ಯದ ಎಲ್ಲಾ ವೃದ್ಧರಿಗೆ ತಿಂಗಳಿಗೆ ₹1,000 ಒದಗಿಸಲು ಸರ್ಕಾರ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಪ್ರಾರಂಭಿಸುತ್ತದೆ ಎಂದು ಸೊರೆನ್ ಹೇಳಿದರು.ಡುಮ್ಕಾದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ 500 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ ಪ್ರಗತಿಯಲ್ಲಿದೆ, ಇದು ಸಂತಲ್ ಪರಗಣ ವಿಭಾಗದಲ್ಲಿ ಆರೋಗ್ಯ ಸೌಲಭ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದಾಗಲೇ ಸಾಮಾಜಿಕ ನ್ಯಾಯ ಅನುಷ್ಠಾನಗೊಳ್ಳಲು ಸಾಧ್ಯ-ಸಿದ್ಧರಾಮಯ್ಯ


'ಧೋತಿ-ಸೀರೆ' ಯೋಜನೆಯನ್ನು ಸಹ ಪ್ರಾರಂಭಿಸಲಾಗುವುದು, ಇದರಡಿಯಲ್ಲಿ ರಾಜ್ಯದ 57 ಲಕ್ಷ ಬಡ ಕುಟುಂಬಗಳಿಗೆ ಧೋತಿ ಅಥವಾ ಲುಂಗಿ ಮತ್ತು ಸೀರೆಯನ್ನು ₹ 10 ರಂತೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಅವರು ಹೇಳಿದರು.ತಮ್ಮ ಸರ್ಕಾರವು ಈಗಾಗಲೇ ಕೃಷಿ ಸಾಲ ಮನ್ನಾ ಯೋಜನೆಯನ್ನು ಹೊರತಂದಿದೆ, ಅದರ ಅಡಿಯಲ್ಲಿ ₹ 50,000 ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.