ನವದೆಹಲಿ: JIO ಈಗ ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡುವುದಿಲ್ಲ. ಅದರ ಬದಲಿಗೆ ಯುವಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬ ಮಹತ್ವದ ಹೇಳಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದು ಲಕ್ಷ ಉದ್ಯೋಗವನ್ನು JIO ಸೃಷ್ಟಿಸಲಿದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಯುವಜನರು, ನಿರುದ್ಯೋಗಿಗಳು ಮತ್ತು ಜಿಯೋನಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಪ್ರಕಟಣೆಯು ಸಿಹಿ ಸುದ್ದಿಯಾಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ ಉತ್ತರ ಪ್ರದೇಶಕ್ಕೆ10,000 ಕೋಟಿ ಹೂಡಿಕೆಯನ್ನು ಘೋಷಿಸಿದರು.


COMMERCIAL BREAK
SCROLL TO CONTINUE READING

3 ವರ್ಷಗಳಲ್ಲಿ 1 ಲಕ್ಷ ಜನರಿಗೆ ಉದ್ಯೋಗ
ಮುಂದಿನ ಮೂರು ವರ್ಷಗಳಲ್ಲಿ JIO ಉತ್ತರ ಪ್ರದೇಶ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶದ ಯುವಜನರಿಗೆ ಕೆಲಸದ ಬಾಗಿಲು ತೆರೆದಿರುತ್ತದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ..


ಡಿಜಿಟಲ್ ಭಾರತದಲ್ಲಿ ಉದ್ಯೋಗಾವಕಾಶ
ಉತ್ತರ ಭಾರತವನ್ನು ಆದರ್ಶ ರಾಜ್ಯವನ್ನಾಗಿ ಮಾಡಲು ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಉತ್ತೇಜಿಸುವುದು ಮುಖ್ಯವೆಂದು ಮುಕೇಶ್ ಅಂಬಾನಿ ಹೇಳಿದರು. ಇದಕ್ಕಾಗಿ, ದೇಶದಾದ್ಯಂತ ರಿಲಯನ್ಸ್ ವಿಶ್ವದರ್ಜೆಯ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಿದೆ. ಜಿಯೋ ಈಗಾಗಲೇ ಸುಮಾರು 40,000 ಉದ್ಯೋಗಗಳಿಗೆ ಅವಕಾಶಗಳನ್ನು ಸೃಷ್ಟಿಸಿದೆ ಮತ್ತು ಈಗ ಇವುಗಳನ್ನು ಹೆಚ್ಚಿಸಲು ಅವಕಾಶಗಳಿವೆ ಎಂದು ಅಂಬಾನಿ ತಿಳಿಸಿದರು.


ಇಲ್ಲಿಯವರೆಗೆ 40,000 ಉದ್ಯೋಗಗಳು
ಡಿಜಿಟಲ್ ಇಂಡಿಯಾ ಕಾರ್ಯಾಚರಣೆಯೊಂದಿಗೆ ರಿಲಯನ್ಸ್ ಜಿಯೋ ಎರಡು ವರ್ಷಗಳೊಳಗೆ ವಿಶ್ವದರ್ಜೆಯ ಡಿಜಿಟಲ್ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. JIO ಉತ್ತರ ಪ್ರದೇಶದಲ್ಲಿ ನೇರ ಮತ್ತು ಪರೋಕ್ಷ ರೀತಿಯಲ್ಲಿ ಸುಮಾರು 40,000 ಜನರಿಗೆ ಉದ್ಯೋಗ ನೀಡಿದೆ.


ಡಿಸೆಂಬರ್ 2018 ರವರೆಗೆ ಯುಪಿಯ ಎಲ್ಲಾ ಹಳ್ಳಿಗಳನ್ನು ತಲುಪಲಿದೆ JIO
ಉತ್ತರಪ್ರದೇಶದಲ್ಲಿ ಜಿಯೋ 20 ದಶಲಕ್ಷಕ್ಕೂ ಹೆಚ್ಚಿನ ಫೋನ್ಗಳನ್ನು ಒದಗಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಎರಡು ಕೋಟಿ ಚಂದಾದಾರರಿಗೆ ಕಡಿಮೆ ದರದಲ್ಲಿ ಹೆಚ್ಚಿನ ವೇಗದ ಡಾಟಾವನ್ನು ನೀಡಲಾಗುತ್ತಿದೆ. ಡಿಸೆಂಬರ್ 2018 ರ ಹೊತ್ತಿಗೆ, ಜಿಯೋ ಉತ್ತರಪ್ರದೇಶದ ಎಲ್ಲಾ ಹಳ್ಳಿಗಳನ್ನು ತಲುಪಲಿದೆ. ಅಲ್ಲಿ ಉನ್ನತ ಮಟ್ಟದ ವಿತರಣೆ ನಡೆಯಲಿದೆ.


ಉತ್ತರ ಪ್ರದೇಶದಲ್ಲಿ ಹೆಚ್ಚಿನ ನಿರುದ್ಯೋಗ
ಕಳೆದ ವರ್ಷ ಲೋಕಸಭೆಯಲ್ಲಿ, ಯುಪಿಯಲ್ಲಿನ ನಿರುದ್ಯೋಗ ದರವು ದೇಶದ ಸರಾಸರಿ ನಿರುದ್ಯೋಗ ದರಕ್ಕಿಂತ ಹೆಚ್ಚಿದೆ ಎಂದು ಕಾರ್ಮಿಕ ಸಚಿವರು ಹೇಳಿದ್ದಾರೆ. ರಾಷ್ಟ್ರೀಯ ಸರಾಸರಿ ನಿರುದ್ಯೋಗ 5.8 ಶೇಕಡಾ. ಅದೇ ಸಮಯದಲ್ಲಿ, ನಿರುದ್ಯೋಗ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ 5.8% ಮತ್ತು ನಗರ ಪ್ರದೇಶಗಳಲ್ಲಿ 6.5% ಆಗಿತ್ತು.