ನವದೆಹಲಿ: ವಿಶ್ವದ ಸಾಮಾಜಿಕ ಮಾಧ್ಯಮದ ದಿಗ್ಗಜ ಕಂಪನಿಯಾಗಿರುವ Facebook ಇತ್ತೀಚೆಗಷ್ಟೇ ಭಾರತೀಯ ಕಂಪನಿಯಾಗಿರುವ ರಿಲಯನ್ಸ್ ನಲ್ಲಿ ಭಾರಿ ಹೂಡಿಕೆ ಮಾಡುವ ಕುರಿತು ಘೋಷಣೆ ಮಾಡಿತ್ತು . ರಿಲಯನ್ಸ್ ಹಾಗೂ ಫೇಸ್ಬುಕ್ ನಡುವೆ ನಡೆದ ಈ ಡೀಲ್ ಅಡಿ WhatsApp ಹಾಗೂ Reliance Jio ಸಂಸ್ಥೆಗಳ ಮಧ್ಯೆ ಒಂದು ವಾಣಿಜ್ಯಾತ್ಮಕ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ, ಈ ಒಪ್ಪಂದ ಆನ್ಲೈನ್ ವೆಂಚರ್ JioMart ಗಾಗಿ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಜಿಯೋಮಾರ್ಟ್ ಅನ್ನು ಇದೀಗ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಗುತ್ತಿದೆ. ಇದು ರಿಲಯನ್ಸ್ ರಿಟೇಲ್‌ನ ಇ-ಕಾಮರ್ಸ್ ಉದ್ಯಮವಾಗಲಿದ್ದು, ಆರಂಭದಲ್ಲಿ ಇದನ್ನು ಮುಂಬೈನಿಂದ ಪ್ರಾರಂಭಿಸಲಾಗುತ್ತಿದೆ.


ಕೊರೊನಾ ವೈರಸ್ ಔಟ್ ಬ್ರೇಕ್ ಹಿನ್ನೆಲೆ ಸಧ್ಯ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ರಿಲಯನ್ಸ್ ಜಿಯೋ ಮಾರ್ಟ್ ಗೆ ಲಾಭ ಸಿಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ ಜಿಯೋ ಮಾರ್ಟ್ ವಾಟ್ಸ್ ಆಪ್ ಬೇಸ್ಡ್ ಆನ್ಲೈನ್ ಪೋರ್ಟಲ್ ಇರಲಿದ್ದು, ಇದರಿಂದ ವಾಟ್ಸ್ ಆಪ್ ಬಳಕೆದಾರರ ಬೇಸ್ ಲಭಾ ರಿಲಯನ್ಸ್ ಗೆ ಸಿಗಲಿದೆ ಎನ್ನಲಾಗಿದೆ.


ಸದ್ಯ ಭಾರತದಲ್ಲಿ ಸರಿ ಸುಮಾರು 400 ಮಿಲಿಯನ್ ಬಳಕೆದಾರು WhatsApp ಅನ್ನು ಬಳಸುತ್ತಾರೆ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಎರಡೂ ಸಂಸ್ಥೆಗಳ ನಡುವಿನ ಈ ಡೀಲ್ ಫೈನಲ್ ಆಗಿದ್ದು, ಇದೆ ಅವದಿಯಲ್ಲಿ ಇದನ್ನು ಆರಂಭಿಸಲಾಗುತ್ತಿದೆ.


ರಿಲಯನ್ಸ್ ತನ್ನ ಈ ಸೇವೆಯ ಪೈಲಟ್ ರನ್ ಇತರೆ ರಾಜ್ಯಗಳಲ್ಲಿಯೂ ಕೂಡ ಪ್ರಾರಂಭಿಸುವ ಸಾಧ್ಯತೆ ಇದ್ದು, ರಿಲಯನ್ಸ್ ಜಿಯೋ ಮಾರ್ಟ್ ಅನ್ನು ಮುನ್ನಡೆಸಲು ವಾಟ್ಸ್ ಆಪ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ.


JioMart ಸೇವೆಯನ್ನು ಬಳಸಲು ಮೊದಲು ಬಳಕೆದಾರರು ತಮ್ಮ ಮೊಬೈಲ್ ನಲ್ಲಿ 8850008000 ಸಂಖ್ಯೆಯನ್ನು ಸೇವ್ ಮಾಡಬೇಕು. ಇದಾದ ಬಳಿಕ ಜಿಯೋ ಮಾರ್ಟ್ ತನ್ನ ಗ್ರಾಹಕರ ಜೊತೆಗೆ ಲಿಂಕ್ ವೊಂದನ್ನು ಹಂಚಿಕೊಳ್ಳಲಿದ್ದು, ಈ ಲಿಂಕ್ ಬಳಸಿ ಆರ್ಡರ್ ಪ್ಲೇಸ್ ಮಾಡಬಹುದು.


ಜಿಯೋ ಮಾರ್ಟ್ ಅನ್ನು ರಿಲಯನ್ಸ್ ದೇಶದ ನೂತನ ಅಂಗಡಿ ಎಂದು ಹೇಳಿಕೊಳ್ಳುತ್ತಿದ್ದು, ಇದರ ಅಡಿ ಕಂಪನಿ ಲಕ್ಷಾಂತರ ಕಿರಾಣಿ ಅಥವಾ ದಿನಸಿ ಅಂಗಡಿಗಳನ್ನು ತನ್ನ ಪ್ಲಾಟ್ ಫಾರ್ಮ್ ಜೊತೆಗೆ ಜೋಡಿಸಲಿದೆ. ಸದ್ಯ ಈ ಸೇವೆ ಮುಂಬೈನ ಕೆಲ ಆಯ್ದ ಪ್ರದೇಶಗಳಾಗಿರುವ ನವಿ ಮುಂಬೈ, ಠಾಣೆ ಹಾಗೂ ಕಲ್ಯಾಣ್ ಗಳಲ್ಲಿ ಆರಂಭಿಸಿದೆ ಎನ್ನಲಾಗಿದೆ.