ಬರೊಬ್ಬರಿ ಐನೂರು ವರ್ಷಗಳ ಭಾರತೀಯರ ಕನಸು ಇಂದು ನನಸಾಗಿದೆ.‌ ಲೋಕದೊಡೆಯ ರಾಮಲಲ್ಲಾನ ಪ್ರತಿಷ್ಠಾಪನೆ ಮೂಲಕ ನರೇಂದ್ರ ಮೋದಿಯವರ ಕೈಯಿಂದ ಪ್ರಭು ಬಾಲ ರಾಮನಿಗೆ ಜೀವ ತುಂಬಿದ್ದಾರೆ. ಈ ಮೂಲಕ ಇದು ಮಂದಿರ ಉದ್ಘಾಟನೆಯಲ್ಲ ಹಿಂದೂ ಧರ್ಮದ ಪುನರುತ್ಥಾನ ಎಂದು ತೋರಿಸಿದ್ದಾರೆ.ಇದಕ್ಕೆ ಸಾತ್ ಎಂಬಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪ್ರಭು ರಾಮಲಲ್ಲಾನ ಅನುಗ್ರಹಕ್ಕಾಗಿ ಪ್ರಾರ್ಥನೆ, ಭಜನೆ, ಅನ್ನದಾನ, ಸೇರಿ ವಿವಿಧ ಭಕ್ತಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತಂತಾದ ಪೂರ್ತಿ ವರದಿ ಇಲ್ಲಿದೆ‌.


COMMERCIAL BREAK
SCROLL TO CONTINUE READING

ಹೌದು... ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ಭರತಕಂಡದ ಮಹಾಪ್ರಭು ರಾಮಲಲ್ಲಾ ಪ್ರತಿಷ್ಠಾಪನೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಾಲ ರಾಮನಿಗೆ ಮರು ಜೀವ ತುಂಬಂತಾಗಿದೆ. ಕಾರ್ಯಕ್ರಮದಲ್ಲಿ ದೇಶದ ನಾನಾ ಸದ್ಗುರುಗಳು, ಮಠಾದಿಪತಿಗಳು, ದೇಶದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಸ್ಥಳದಲ್ಲಿ ನೆರೆದು ಬಾಲರಾಮನ ಜೀವಕಳೆಯ ಕಾರ್ಯಕ್ರಮ‌ ಕಣ್ತುಂಬಿಕೊಂಡಿದ್ದಾರೆ.


ಇದನ್ನೂ ಓದಿ: ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ಕ್ಷಣಕ್ಕಾಗಿ ಇಡೀ ದೇಶವೇ ಕಾದು ಕುಳಿತಿದ್ದ ಸಮಯ ಕಣ್ಣೆದುರು ಬಂದಂತೆ ಎಲ್ಲೆಲ್ಲೂ ರಾಮನಾಮ ರಾಮ ಜಪ, ಭಜನೆಗಳು ಮೊಳಗಿದವು. ರಾಮರಾಜ್ಯ ಅಯೋಧ್ಯೆಯಲ್ಲಿ ಸಹಸ್ರಾರು ಜನ ರಾಮನಲಲ್ಲಾ  ಲೈವ್ ಕಾರ್ಯಕ್ರಮ ಕಣ್ತುಂಬಿಕೊಂಡ್ರೆ, ಇತ್ತ ರಾಜಧಾನಿ ಬೆಂಗಳೂರಿನಲ್ಲೆಡೆ ರಾಮನ ಪ್ರತಿಷ್ಟಾಪನೆಯ ಸುದಿನದ ಸಂತಸವನ್ನ ಹಂಚಿಕೊಂಡ್ರು.ಅದರಲ್ಲೂ ಕೋಟಿ ಕೋಟಿ ವ್ಯವಹಾರ ನಡೆಸುವ ಎಸ್.ಪಿ ರೋಡ್ ಇಂದು ಬಂದ್ ಮಾಡುವ ಮೂಲಕ ರಾಮನಿಗಾಗಿ ಅರ್ಪಣೆ ಮಾಡಿದರು. ಜೈ ಜೈ ರಾಮ್.. ಸೀತಾ ರಾಮ್, ಸೇರಿ ಇತರೆ ರಾಮಭಕ್ತಿಯ ಭಜನೆ ಮೂಲಕ ದೊಡ್ಡ LED ಅಳವಡಿಸಿ ರಾಮನಲಲ್ಲಾನ ಪ್ರತಿಷ್ಟಾಪನೆ ಕಾರ್ಯಕ್ರಮವನ್ನ ನೇರವಾಗಿ ನೆರೆದಿದ್ದ ಜನರಿಗೆ ವೀಕ್ಷಣೆ ಮಾಡುವಂತೆ ಮಾಡಿದ್ರು. ಜೊತೆಗೆ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯಿಂದ ಐದು ಸಾವಿರ ಜನರಿಗೆ ಲಡ್ಡು ಹಾಗೂ ಅನ್ನದಾನ ಮಾಡಿದರು.


ಇದನ್ನೂ ಓದಿ: ಗೋಕರ್ಣದಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆಯಂದು ಹೋಮ


ರಾಜಾಜಿನಗರದ ರಾಮಂದಿರದಲ್ಲಿ ಇಂದು ಮುಂಜಾನೆ ಐದುಗಂಟೆಯಿಂದಲೇ ರಾಮನಿಗಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನ ಹಮ್ಮಿಕೊಳ್ಳಲಾಗಿತ್ತು.ಎಂಟು ಅಡಿ ಎತ್ತರದ ರಾಮನಮೂರ್ತಿಗೆ ನಟ ಶ್ರೀಮುರಳಿಯಿಂದ ವಿಶೇಷ ಪೂಜೆ ಮಾಡಿಸಲಾಯ್ತು.ಒಟ್ನಲ್ಲಿ...ಭಾರತೀಯರ ಐನೂರು ವರ್ಷಗಳ ಕನಸು ಇಂದು ನನಸಾಗಿದೆ.ನಾಳೆಯಿಂದಲೇ ಅಯೋಧ್ಯೆಯಲ್ಲಿ ನೆಲೆಸಿದ ಮಹಾಪ್ರಭುವಿನ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.ಈ ಮೂಲಕ ಕರ್ನಾಟಕದ ಮೂಲೆ ಮೂಲೆಯ ಭಕ್ತರ ಸಾಲು ಅಯೋಧ್ಯೆಯತ್ತ ಸಾಗೋದ್ರಲ್ಲಿ ಅನುಮಾನವೇ ಇಲ್ಲ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ