J&K encounter:ಪುಲ್ವಾಮಾ ದಾಳಿಯ ರೂವಾರಿ ಜಾಹಿದ್ ವಾನಿ ಸೇರಿದಂತೆ 5 ಉಗ್ರರು ಹತ
ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ, ಪುಲ್ವಾಮಾ ದಾಳಿಯ (Pulwama Attack) ರೂವಾರಿಯಾಗಿದ್ದ ಜೆಇಎಂನ ಉನ್ನತ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ 4 ಜೆಇಎಂ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಶ್ರೀನಗರ: ಪುಲ್ವಾಮಾದ ನೈರಾ ಪ್ರದೇಶ ಮತ್ತು ಬುದ್ಗಾಮ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (J&K encounter) 5 ಉಗ್ರರು ಹತರಾಗಿದ್ದಾರೆ.
ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿ
ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಜೆಇಎಂ ಕಮಾಂಡರ್ ಭಯೋತ್ಪಾದಕ ಜಾಹಿದ್ ವಾನಿ ಸೇರಿದಂತೆ ಸಕ್ರಿಯ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾ (Let) ಮತ್ತು ಜೈಶ್-ಎ-ಮೊಹಮ್ಮದ್ (JeM) ನ ಐವರು ಭಯೋತ್ಪಾದಕರನ್ನು ರಾತ್ರೋರಾತ್ರಿ ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.
Terrorist) ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.
ಪುಲ್ವಾಮಾ ಜಿಲ್ಲೆಯ ನೈರಾ ಪ್ರದೇಶದಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಬದ್ಗಾಮ್‌ನ ಚ್ರಾರ್-ಇ-ಶರೀಫ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಜಾಹಿದ್ ಮಂಜೂರ್ ವಾನಿ:
ಜಾಹಿದ್ ಮಂಜೂರ್ ವಾನಿ ಹೆಸರಿನ ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಭಯೋತ್ಪಾದಕರ ಪೈಕಿ ಒಬ್ಬನಾಗಿದ್ದ. ದೇಶಕಂಡ ಘೋರ ಉಗ್ರ ದಾಳಿಗಳ ಸಾಲಿಗೆ ನಿಲ್ಲುವ ಪುಲ್ವಾಮಾ ದಾಳಿಯ ರೂವಾರಿ ಈ ಜಾಹಿದ್ ವಾನಿ (JEM commander Zahid Wani). ಫೆಬ್ರವರಿ 14, 2019 ರಂದು 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದ ಲೆಟ್‌ಪುರ ಘಟನೆಯಲ್ಲಿ ಜಾಹಿದ್ ಭಾಗಿಯಾಗಿದ್ದ.
ಇದನ್ನೂ ಓದಿ: ADR Report: ಶ್ರೀಮಂತ ಪಕ್ಷವಾಗುತ್ತಿರುವ ಬಿಜೆಪಿ; ಯಾವ ಪಕ್ಷಕ್ಕೆ ಎಷ್ಟು ಆಸ್ತಿ ಇದೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.