ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,34,281 ಹೊಸ ಕೋವಿಡ್ -19 (Covid-19)ಪ್ರಕರಣಗಳು ದಾಖಲಾಗಿವೆ. 

Edited by - Chetana Devarmani | Last Updated : Jan 30, 2022, 10:28 AM IST
  • ಕಳೆದ 24 ಗಂಟೆಗಳಲ್ಲಿ 2,34,281 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ
  • ಇದೆ ವೇಳೆಯಲ್ಲಿ 893 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ
  • ಸಕ್ರಿಯ ಪ್ರಕರಣಗಳ ಸಂಖ್ಯೆ 18,84,937 ಕ್ಕೆ ಏರಿದೆ
ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿ  title=
ಕೋವಿಡ್

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,34,281 ಹೊಸ ಕೋವಿಡ್ -19 (Covid-19)ಪ್ರಕರಣಗಳು ದಾಖಲಾಗಿವೆ. ಇದೆ ವೇಳೆಯಲ್ಲಿ 893 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4,94,091 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ (ಜನವರಿ 30, 2022) ಬಿಡುಗಡೆ ಮಾಡಿದೆ. 

ಇದನ್ನೂ ಓದಿ: R Ashok : 'ರಾಜ್ಯದಲ್ಲಿ ಜನವರಿ 31ರಿಂದ ನೈಟ್ ಕರ್ಫ್ಯು ತೆರವು'

ಸಕ್ರಿಯ ಪ್ರಕರಣಗಳ ಸಂಖ್ಯೆ 18,84,937 ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ 1,19,396 ಪ್ರಕರಣಗಳ ಇಳಿಕೆ ದಾಖಲಾಗಿದೆ. 3,52,784 ಜನ ಕೊರೊನಾದಿಂದ (Corona) ಗುಣಮುಖರಾಗಿದ್ದು, ಒಟ್ಟು ಗುನಮುಖರಾದವರ ಸಂಖ್ಯೆ 3,87,13,494 ಕ್ಕೆ ತಲುಪಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ರಾಷ್ಟ್ರೀಯ ಕೋವಿಡ್ -19 (Covid Positivity Rate) ಚೇತರಿಕೆ ದರವು 94.21 ಪ್ರತಿಶತದಷ್ಟಿದೆ. ದೈನಂದಿನ ಸಕಾರಾತ್ಮಕತೆಯ ದರವು ಶೇಕಡಾ 14.50 ರಷ್ಟಿದ್ದರೆ, ವಾರದ ಸಕಾರಾತ್ಮಕತೆಯ ದರವು ಶೇಕಡಾ 16.40 ರಷ್ಟಿದೆ.

ಹೆಚ್ಚುವರಿಯಾಗಿ, ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ (Corona Vaccine) ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಸಂಚಿತ ಡೋಸ್‌ಗಳು 165.70 ಕೋಟಿ ಮೀರಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ, ಭ್ರಷ್ಟಾಚಾರ ಹಿಂದಿನಂತೆಯೇ ಮುಂದುವರೆದಿದೆ-ಸಿದ್ಧರಾಮಯ್ಯ

"ದೇಶದಲ್ಲಿ ಅರ್ಹ ಜನಸಂಖ್ಯೆಯ 75% ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ" ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News