Paytmನಲ್ಲಿ ಭರ್ಜರಿ ಅವಕಾಶ; 300ಕ್ಕೂ ಅಧಿಕ ಜನರಿಗೆ ಸಿಗಲಿದೆ ಉದ್ಯೋಗ!
ದೇಶದ ಬಹುದೊಡ್ಡ ಇ-ಕಾಮರ್ಸ್ ಕಂಪೆನಿಗಳಲ್ಲಿ ಒಂದಾದ ಪೇಟಿಎಂ ಮಾಲ್ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸುವ ಯೋಜನೆ ಹಮ್ಮಿಕೊಂಡಿದೆ.
ನವದೆಹಲಿ: ದೇಶದ ಬಹುದೊಡ್ಡ ಇ-ಕಾಮರ್ಸ್ ಕಂಪೆನಿಗಳಲ್ಲಿ ಒಂದಾದ ಪೇಟಿಎಂ ಮಾಲ್ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸುವ ಯೋಜನೆ ಹಮ್ಮಿಕೊಂಡಿದೆ. ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆನ್ಲೈನ್ ಕಂಪನಿಯಾದ ಪೇಟಿಎಂ, ಕಳೆದ ಆರು ತಿಂಗಳುಗಳಲ್ಲಿ ಕಂಪೆನಿಯ O2O(Online to Offline) ವ್ಯವಹಾರವು 200 ಪ್ರತಿಶತದಷ್ಟು ಹೆಚ್ಚಾಗಿದೆ.
ಪಿಟಿಎಂ ಮಾಲ್ ನ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೋಥೆ ಮಾತನಾಡಿ, "ನಾವು O2O ವ್ಯವಹಾರದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಹೊಂದಿದ್ದೇವೆ. ಈ ಬೆಳವಣಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಉದ್ಯೋಗ ಸಮೂಹವನ್ನು ಪುನರ್ರಚನೆ ಮಾಡುವ ಉದ್ದೇಶ ಹೊಂದಿದ್ದು, ಈಗಿರುವ 200 ಉದ್ಯೋಗಿಗಳನ್ನು ಹೊರತುಪಡಿಸಿ, ಮುಂಬರುವ ತಿಂಗಳುಗಳಲ್ಲಿ, ವ್ಯವಹಾರ, ತಂತ್ರಜ್ಞಾನ ಮತ್ತು ಉತ್ಪನ್ನ ವಿಭಾಗದಲ್ಲಿ 300ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಪೆಟಿಎಂ ಮಾಲ್ ನ ವ್ಯವಹಾರ ವೃದ್ಧಿಗೆ, ಒನ್ 97 ಕಮ್ಯೂನಿಕೇಶನ್ಸ್ನಿಂದ 1000 ಕ್ಕಿಂತ ಹೆಚ್ಚು ಜನರನ್ನು ಇ-ಕಾಮರ್ಸ್ ವಿಭಾಗಕ್ಕೆ ಕರೆತಂದಿದೆ. ಇತ್ತೀಚೆಗೆ, ಪೇಟಿಎಂ ಮಾಲ್ ಅಲಿಬಾಬಾದಿಂದ ಫಂಡ್ ಸಹ ದೊರೆತಿದ್ದು, ಕಲ ದಿನಗಳ ಹಿಂದಿನ ವರದಿಯ ಪ್ರಕಾರ, ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಪೇಟಿಎಂ ನಾಲ್ಕನೇ ಸ್ಥಾನ ಪಡೆದಿದೆ.