ನವದೆಹಲಿ : ಭಾರತೀಯ ವಾಯುಪಡೆ (Jobs Alert 2021: Indian Air Force) ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಾಯುಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ (Recruitment) ಆರಂಭವಾಗಿದೆ. 10ನೇ ತರಗತಿಯಿಂದ ಪದವಿ ಪಾಸ್ ಆದವರಿಗೆ ಅವಕಾಶವಿದೆ. 18 ವರ್ಷದಿಂದ  25ವರ್ಷದವರು ಅರ್ಜಿ ಸಲ್ಲಿಸಬಹುದಾಗಿದೆ. ವಾಯುಸೇನೆಯ ವೆಬ್ ಸೈಟಿನಲ್ಲಿ www. airmenselection.cdac.in ಎಲ್ಲಾ ವಿವರ ಲಭ್ಯವಿದೆ.


COMMERCIAL BREAK
SCROLL TO CONTINUE READING

ಭಾರತೀಯ ವಾಯುಸೇನೆ (Indian Air Force) ಈ ಸಲ 255 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹೌಸ್ ಕೀಪಿಂಗ್  ಸ್ಟಾಫ್, ಮೆಸ್ ಸ್ಟಾಫ್, ಎಲ್ಡಿ ಸಿ, ಕ್ಲರ್ಕ್, ಸ್ಟೆನೋಗ್ರಾಫರ್, ಸ್ಟೋರ್ ಕೀಪರ್, ಲಾಂಡ್ರಿ ಮೆನ್, ಕುಕ್ ಮತ್ತು ಫೈಯರ್ ಮೆನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏ.18, 2021 ಮತ್ತು ಏ.22, 2021ರ ನಡುವೆ ಈ ಹುದ್ದೆಗಳಿಗೆ ಪರೀಕ್ಷೆ (Exam) ನಡೆಯಲಿದೆ. 


ಇದನ್ನೂ ಓದಿ : HAL Recruitment 2021: ಹೆಚ್‌ಎಎಲ್ ನಲ್ಲಿ 165 ಹುದ್ದೆಗಳಿಗೆ ಅರ್ಜಿ ಆಹ್ವಾನ!


ಅರ್ಹತೆಗಳೇನು..?
ಎಲ್ಲಾ ಹುದ್ದೆಗಳಿಗೆ ಬೇರೆ ಬೇರೆ ಶೈಕ್ಷಣಿಕ ಅರ್ಹತೆಗಳಿವೆ (Eligibility). ಕೆಲವು ಹುದ್ದೆಗಳಿಗೆ ಕನಿಷ್ಠ 10ನೇ ಕ್ಲಾಸ್ ಪಾಸಾಗಿರಬೇಕು. ಇನ್ನು ಕೆಲವು ಹುದ್ದೆಗಳಿಗೆ 12ನೇ ಕ್ಲಾಸ್ ಇನ್ನು ಕೆಲವು ಹುದ್ದೆಗಳಿಗೆ ಪದವಿ ಪಾಸಾಗಿರುವುದು ಅನಿವಾರ್ಯವಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಒಬಿಸಿಯವರಿಗೆ (OBC) 3 ವರ್ಷ, ಎಸ್ಸಿತ, ಎಸ್ಟಿಠ 5 ವರ್ಷ, ದಿವ್ಯಾಂಗರಿಗೆ 10 ವರ್ಷ ರಿಯಾಯಿತಿ ಸಿಗಲಿದೆ. 


ವೇತನ ಶ್ರೇಣಿ (Salary Scale) : 
ಭಿನ್ನ ಭಿನ್ನ ಹುದ್ದೆಗಳಿಗೆ ಭಿನ್ನ ವೇತನ ಶ್ರೇಣಿ ಇದೆ. ಲೆವೆಲ್ 1ರ ಹುದ್ದೆಗಳಿಗೆ 18,000, ಲೆವೆಲ್ 2 ರ ಹುದ್ದೆಗಳಿಗೆ 19,900 ಮತ್ತು ಲೆವೆಲ್ 4 ಹುದ್ದೆಗಳಿಗೆ ಪ್ರತಿ ತಿಂಗಳು 25,500 ರೂಪಾಯಿ ಸಾಲರಿ ಸಿಗಲಿದೆ. 


ಇದನ್ನೂ ಓದಿ : JOBS: ಡಿಗ್ರಿ ಮುಗಿಸಿದವರಿಗೆ ಗುಡ್​ ನ್ಯೂಸ್​: SSCಯಲ್ಲಿ 6,506 ಹುದ್ದೆಗಳ ಭರ್ತಿಗೆ ಅರ್ಜಿ!


ಅರ್ಜಿ ಸಲ್ಲಿಸುವುದು ಹೇಗೆ.(How to apply)? :
ವೆಬ್ ಸೈಟಿನಲ್ಲಿ (website) ಅರ್ಜಿ ಡೌನ್ ಲೋಡ್  (Download) ಮಾಡಿ, ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಲಗತ್ತಿಸಿ ಕೊಟ್ಟಿರುವ ವಿಳಾಸಕ್ಕೆ ರವಾನಿಸಿ. ಕವರಿಗೆ ಹತ್ತು ರೂಪಾಯಿ ಪೊಸ್ಟಲ್ ಸ್ಟಾಂಪ್ ಹಾಕಿರಬೇಕು ಜೊತೆಗೆ ಯಾವ ಹುದ್ದೆಗೆ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ಕವರಿನ ಮೇಲೆ ನಮೂದಿಸಿರಬೇಕು.


ಗೊತ್ತಿರಲಿ ಮಾಚ್ 13, 2021 ಅರ್ಜಿ ಸಲ್ಲಿಕೆಗೆ ಇರುವ ಕೊನೆಯ ದಿನಾಂಕ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.