ಪತ್ರಕರ್ತನ ಬೈಕಿಗೆ ಐಎಎಸ್ ಅಧಿಕಾರಿ ಕಾರು ಡಿಕ್ಕಿ, ಪತ್ರಕರ್ತ ಸಾವು!
ತಿರುವನಂತಪುರಂನ ಐಎಎಸ್ ಅಧಿಕಾರಿಯೊಬ್ಬರು ವೇಗವಾಗಿ ಚಲಿಸುತ್ತಿದ್ದ ಕಾರು ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸಿರಾಜ್ ಪತ್ರಿಕೆಯ ಪತ್ರಕರ್ತಕೆ.ಎಂ.ಬಶೀರ್(35) ಸಾವನ್ನಪ್ಪಿದ್ದಾರೆ.
ತಿರುವನಂತಪುರ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಪತ್ರಕರ್ತ ಸಾವನ್ನಪ್ಪಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂನ ಐಎಎಸ್ ಅಧಿಕಾರಿಯೊಬ್ಬರು ವೇಗವಾಗಿ ಚಲಿಸುತ್ತಿದ್ದ ಕಾರು ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸಿರಾಜ್ ಪತ್ರಿಕೆಯ ಪತ್ರಕರ್ತಕೆ.ಎಂ.ಬಶೀರ್(35) ಸಾವನ್ನಪ್ಪಿದ್ದಾರೆ. ಇವರು ಸಿರಾಜ್ ಪತ್ರಿಕೆಯ ತಿರುವನಂತಪುರ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ಐಎಎಸ್ ಅಧಿಕಾರಿ ಮತ್ತು ಸರ್ವೇ ನಿರ್ದೇಶಕ ಶ್ರೀರಾಮ್ ವೆಂಕಟರಮಣ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದಾಗ ಶ್ರೀರಾಮ್ ತಮ್ಮ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದುದಾಗಿಯೂ, ಅವರ ಸ್ನೇಹಿತ ಕಾರು ಚಲನೆ ಮಾಡುತ್ತಿದ್ದುದಾಗಿಯೂ ಪೊಲೀಸ್ ತನಿಖೆವೇಳೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.