ನವದೆಹಲಿ: ದೇಶದ ದ್ವಿಚಕ್ರ ವಾಹನವನ್ನು ಹೊರತುಪಡಿಸಿ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ (FASTAG) ಕಡ್ಡಾಯವಾಗಿದೆ, ಇದರೊಂದಿಗೆ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಮತ್ತೊಂದು ಪ್ರಮುಖ ನಿಯಮ ಇಂದಿನಿಂದ ಜಾರಿಗೆ ಬಂದಿದೆ. ಈಗ ಯಮುನಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಲು, ನಿಮ್ಮ ಮೊಬೈಲ್‌ನಲ್ಲಿ ಹೆದ್ದಾರಿ ಸಾಥಿ ಆ್ಯಪ್ (Highway Saathi App) ಡೌನ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಅಪ್ಲಿಕೇಶನ್ ಇಲ್ಲದೆ ನಿಮಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.


COMMERCIAL BREAK
SCROLL TO CONTINUE READING

ಹೆದ್ದಾರಿ ಸಾಥಿ ಅಪ್ಲಿಕೇಶನ್‌ನ ಉದ್ದೇಶ?
ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳನ್ನು ಓಡಿಸಲು ಕಡ್ಡಾಯವಾಗಿರುವ ಹೆದ್ದಾರಿ ಸಾಥಿ ಆ್ಯಪ್‌ನ (Highway Saathi App) ಉದ್ದೇಶ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು. ನಿಮ್ಮ ಮೊಬೈಲ್‌ನಲ್ಲಿ ನೀವು ಹೆದ್ದಾರಿ ಸಾಥಿ ಅಪ್ಲಿಕೇಶನ್ ಹೊಂದಿದ್ದರೆ, ನಂತರ ಯಮುನಾ ಎಕ್ಸ್‌ಪ್ರೆಸ್‌ವೇ ತಲುಪಿದಾಗ, ನಿಮ್ಮ ಮೊಬೈಲ್ ಸರ್ವರ್ ಎಕ್ಸ್‌ಪ್ರೆಸ್‌ವೇಯ ಸರ್ವರ್‌ಗೆ ಸಂಪರ್ಕಗೊಳ್ಳುತ್ತದೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ಪ್ರತಿಯೊಂದು ವಾಹನವನ್ನು ಹೆದ್ದಾರಿ ಸಾಥಿ ಆಪ್‌ಗೆ ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ.


ಇದನ್ನೂ ಓದಿ - Accident ಸಂಭವಿಸುತ್ತಲೇ Ambulenceಗೆ ಮಾಹಿತಿ ಸಿಗಲಿದೆ, Hi-Tech ಸಿಸ್ಟಂ ಸಿದ್ಧತೆಯಲ್ಲಿ ಕೇಂದ್ರ ಸರ್ಕಾರ


ಈ ಆ್ಯಪ್ ಯಾವ ರೀತಿ ಸಹಾಯ ಮಾಡುತ್ತದೆ ?
ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಚ್ಚಿನ ಅಪಘಾತಗಳು ಹೆಚ್ಚಿನ ವೇಗ ಮತ್ತು ಮಂಜಿನಿಂದ ಸಂಭವಿಸುತ್ತಿವೆ ಎನ್ನಲಾಗಿದೆ. ಅಪಘಾತದ ನಂತರ ಸರಿಯಾದ ಸಮಯದಲ್ಲಿ ಸಹಾಯ ಪಡೆಯದ ಕಾರಣ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ಸರ್ವರ್ ವಾಹನದ ಪ್ರತಿಯೊಂದು ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತದೆ. ಚಾಲಕನ ಮೊಬೈಲ್ ಸಂಖ್ಯೆ, ವಾಹನದ ಸಂಖ್ಯೆ ನಿಯಂತ್ರಣ ಕೊಠಡಿಯಲ್ಲಿ ದಾಖಲಾಗಿರುತ್ತದೆ. ಯಾವುದೇ ಅಪಘಾತ ಸಂಭವಿಸಿದಲ್ಲಿ, ಹೆದ್ದಾರಿ ಪ್ರಾಧಿಕಾರವು ತಕ್ಷಣ ಅಪಘಾತವನ್ನು ಪತ್ತೆ ಮಾಡುತ್ತದೆ. ಇದರಿಂದಾಗಿ ಹೆದ್ದಾರಿ ಸಾಥಿ ಆ್ಯಪ್ (Highway Saathi App) ಮೂಲಕ ತಕ್ಷಣ ಸಹಾಯ ಮಾಡಬಹುದು.


ಇದನ್ನೂ ಓದಿ - ವಾಹನ ಸವಾರರೆ ಇಂದಿನಿಂದ ನಿಮ್ಮ ವಾಹನಕ್ಕೆ ಇದು ಕಡ್ಡಾಯ


ನಿರ್ಲಕ್ಷ್ಯಕ್ಕೆ ಬ್ರೇಕ್:
ಈ ನಿಯಮದ ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಹೆದ್ದಾರಿಯುದ್ದಕ್ಕೂ ಇರುವ ಬೂತ್‌ನ ಹೊರತಾಗಿ, ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway)ಯ ಟೋಲ್ ಬೂತ್‌ನಲ್ಲಿರುವ ಪ್ರತಿ ಸಂದರ್ಶಕರ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಪರಿಶೀಲಿಸಲು ಆಗ್ರಾ ಮತ್ತು ಗ್ರೇಟರ್ ನೋಯ್ಡಾ ಪ್ರಾಧಿಕಾರ ವ್ಯವಸ್ಥೆ ಮಾಡುತ್ತಿದೆ. ಇಂದಿನಿಂದ ಅಂದರೆ ಫೆಬ್ರವರಿ 15 ರಂದು ಹೆದ್ದಾರಿ ಸಾಥಿ ಆ್ಯಪ್ ಕಡ್ಡಾಯಗೊಳಿಸಲಾಗುವುದು. ಚಾಲಕರ ಫೋನ್‌ನಲ್ಲಿ ಈ ಅಪ್ಲಿಕೇಶನ್ ಇಲ್ಲದಿದ್ದರೆ, ಅದನ್ನು ಡೌನ್‌ಲೋಡ್ ಮಾಡಿದ ನಂತರವೇ ನೀವು ಮುಂದೆ ಸಂಚರಿಸಲು ಅನುಮತಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.