Bollywood : ಫ್ಲ್ಯಾ ಟ್ ವಿಚಾರದಲ್ಲಿ ಕಂಗನಾ – ಊರ್ಮಿಳಾ ಟ್ವೀಟ್ ಯುದ್ಧ, ಬಾಲಿವುಡ್ ನಟಿಯರ ಏಟು ಎದಿರೇಟು..!

ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಮತ್ತು ಊರ್ಮಿಳಾ ಮಾತೋಂಡ್ಕರ್ ಮಧ್ಯೆ ನಿಲ್ಲುತ್ತಿಲ್ಲ ಟ್ವೀಟ್ ವಾರ್..
ನವದೆಹಲಿ : ಟ್ವೀಟ್ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಜನಪ್ರಿಯ ನಟಿ ಕಂಗನಾ ರಣಾವತ್ (Kangna Ranaut)ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಸಲ ಸುದ್ದಿಯಲ್ಲಿರುವುದು ಊರ್ಮಿಳಾ ಮಾತೋಂಡ್ಕರ್ (Urmila Mathondkar) ವಿಚಾರದಲ್ಲಿ. ವಿಷಯ ಇಷ್ಟೆ.! ಕಾಂಗ್ರೆಸ್ ತೊರೆದು ಇತ್ತೀಚೆಗೆ ಶಿವಸೇನಾ (Shivsena)ಸೇರಿರುವ ಬಾಲಿವುಡ್ ನಟಿ ಉರ್ಮಿಳಾ ಮಾತೊಂಡ್ಕರ್ ಮುಂಬಯಿಯಲ್ಲಿ ಸರಿ ಸುಮಾರು 3 ಕೋಟಿ ರೂಪಾಯಿ ಬೆಲೆ ಬಾಳುವ ಫ್ಲ್ಯಾಟ್ ಖರೀದಿಸಿದ್ದಾರೆ.
ಊರ್ಮಿಳಾ ಮಾತೊಂಡ್ಕರ್ (Urmila Matondkar) ಫ್ಲಾಟ್ ಖರೀದಿ ಮಾಡಿರುವ ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರ ಕಂಗನಾ ಗಮನಕ್ಕೂ ಬಂದಿದೆ. ಕೂಡಲೇ, ವ್ಯಂಗ್ಯದಲ್ಲಿ ಅಬ್ಬರಿಸಿರುವ ಕಂಗನಾ, (Kangana Ranaut) “ಡೀಯರ್ ಊರ್ಮಿಳಾ ಮಾತೋಂಡ್ಕರ್ ಜಿ, ನಾನು ಕಷ್ಟ ಪಟ್ಟು ಮನೆ ಕಟ್ಟಿದೆ. ಅದನ್ನೂ ಕಾಂಗ್ರೆಸ್ (Congress) ಒಡೆದು ಹಾಕುತ್ತಿದೆ. ಬಿಜೆಪಿಯನ್ನು (BJP) ಖುಷಿಪಡಿಸಿ ಕೇವಲ 25 ರಿಂದ 30 ಕೇಸ್ ಹಾಕಿಸಿಕೊಂಡೆ. ಬಹುಶಃ ನಾನು ನಿಮ್ಮಷ್ಟು ಬುದ್ದಿವಂತೆಯಾಗಿದ್ದರೆ ಕಾಂಗ್ರೆಸ್ ನ್ನು ಖುಷಿಪಡಿಸುತ್ತಿದ್ದೆ. ನಾನೆಷ್ಟು ದಡ್ಡಿ, ಅಲ್ಲವೇ..?” ಎಂದು ವ್ಯಂಗ್ಯದ ಒಗ್ಗರಣೆ ಹಾಕಿ ಟ್ವೀಟ್ ಮಾಡಿದ್ದಾರೆ.
Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ
ಕಂಗನಾ ಟ್ವೀಟ್ ವೈರಲ್ ಆಗುತ್ತಿದ್ದಂತೆ ನಖಶಿಖಾಂತ ಉರಿದು ಬಿದ್ದಿದ್ದಾರೆ ಊರ್ಮಿಳಾ ಮಾತೋಂಡ್ಕರ್. ಕಂಗನಾ ಟ್ವೀಟ್ ಗೆ ಎದಿರೇಟು ನೀಡಿದ್ದಾರೆ.
'ನಮಸ್ಕಾರ ಕಂಗನಾ ಅವರೇ.. ನಿಮ್ಮ ವಿಚಾರಧಾರೆಯನ್ನು ನಾನಷ್ಟೇ ಅಲ್ಲ, ಇಡೀ ದೇಶ ಕೇಳಿದೆ. 20-30 ವರ್ಷಗಳ ನನ್ನ ಕರಿಯರ್ ನಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ 2011ರಲ್ಲಿ ಅಂಧೇರಿಯಲ್ಲಿ ಫ್ಲ್ಯಾಟ್ ಖರೀದಿಸಿದ್ದೆ. ಅದಕ್ಕೆ ಎಲ್ಲಾ ದಾಖಲೆ ಇದೆ. ಅದನ್ನು ನಾನು ಮಾರ್ಚ್ ತಿಂಗಳಿನಲ್ಲಿ ಮಾರಾಟ ಮಾಡಿದ್ದೇನೆ. ಅದರಿಂದ ಬಂದ ಹಣದಿಂದಲೇ ನಾನು ಅಫೀಸ್ ಖರೀದಿಸಿದ್ದೇನೆ. ಅದಕ್ಕೂ ಎಲ್ಲಾ ಡಾಕ್ಯುಮೆಂಟ್ಸ್ ಇವೆ. ಇವೆಲ್ಲಾ ಆಗಿದ್ದು ನಾನು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ. ಈ ದಾಖಲೆಗಳನ್ನು ನಾನು ನಿಮಗೆ ತೋರಿಸುತ್ತೇನೆ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಡ್ರಗ್ಸ್ ದಂಧೆಯಲ್ಲಿ (Drug Mafia) ತೊಡಗಿರುವ ಲಿಸ್ಟ್ ನಿಮ್ಮಲ್ಲಿದೆ ಅದನ್ನು ಎನ್ ಸಿಬಿಗೆ (NCB) ಸಲ್ಲಿಸುತ್ತೇನೆ ಎಂದೆಲ್ಲಾ ಹೇಳಿದ್ದಿರಿ. ಆ ಲಿಸ್ಟ್ ನಲ್ಲಿರುವ ಕೆಲವರ ಹೆಸರನ್ನು ನಮಗೆ ತಿಳಿಸಿ ಎಂದು ಊರ್ಮಿಳಾ ಸವಾಲೆಸೆದಿದ್ದಾರೆ.
ಅಷ್ಟಕ್ಕೂ ಸುಮ್ಮನಿರದ ಊರ್ಮಿಳಾ, ಜಾಗ ಮತ್ತು ಸಮಯವನ್ನು ನೀವು ನಿರ್ಧಾರ ಮಾಡಿ. ನನ್ನಲ್ಲಿರುವ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಬಳಿ ಬರುತ್ತೇನೆ ಎಂದು ಚಾಲೆಂಜ್ ಮಾಡಿದ್ದಾರೆ. ಕಂಗನಾ – ಊರ್ಮಿಳಾ ವಾಗ್ಯುದ್ಧ ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.