ಉದಯಪುರದ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ಟಿಸ್ಟ್‌ ಲಭಿಸಿದೆ. ಕನ್ಹಯ್ಯ ಲಾಲ್‌ನನ್ನು ಹತ್ಯೆ ಮಾಡಲು ಆರೋಪಿಗಳಾದ ಮೊಹಮ್ಮದ್‌ ಗೌಸ್‌ ಮತ್ತು ರಿಯಾಜ್‌ಗೆ ಪಾಕಿಸ್ತಾನದಿಂದ ಸಂದೇಶ ಬಂದಿತ್ತು ಎಂಬ ಮಾಹಿತಿ ಲಭಿಸಿದೆ.  


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಕನ್ಹಯ್ಯನನ್ನು ಹತ್ಯೆ ಮಾಡಿದ ಬಳಿಕ ವಾಟ್ಸಾಪ್ ಗ್ರೂಪ್‌ ಮೂಲಕ ಸಂದೇಶ ಕಳುಹಿಸಲಾಗಿದೆ. ಈ ಸಂದೇಶದಲ್ಲಿ 'ಕೊಟ್ಟ ಕಾರ್ಯ, ಪೂರ್ಣಗೊಳಿಸಿದ್ದಾರೆ' ಎಂದು ಬರೆಯಲಾಗಿದೆ. ಈ ವಾಟ್ಸಾಪ್ ಗ್ರೂಪ್‌ನಲ್ಲಿ ಪಾಕಿಸ್ತಾನದ ಕೆಲವರು ಇದ್ದಾರೆ ಎಂಬುದು ತಿಳಿದುಬಂದಿದೆ. ಇವಿಷ್ಟೇ ಅಲ್ಲದೆ, ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿ ಕುಳಿತಿರುವ ವ್ಯಕ್ತಿ ನೀಡಿದ ಆಜ್ಞೆಯ ಮೇರೆಗೆ, ಹಂತಕರು ಒಂದೇ ಹೊಡೆತದಲ್ಲಿ ಶಿರಚ್ಛೇದ ಮಾಡಲು ಭಾರೀ ಹರಿತವಾಗಿರುವ ಶಸ್ತ್ರಾಸ್ತ್ರಗಳನ್ನು ತಯಾರಿಸಿದ್ದರು.


ಇದನ್ನೂ ಓದಿ: ಹಾರ್ಟ್‌ ಬೀಟ್‌ ಹೆಚ್ಚಿಸ್ತಿದೆ ʼತುಪ್ಪದ ಬೆಡಗಿʼಯ ಫೋಟೋಶೂಟ್‌: ಪಡ್ಡೆ ಹುಡುಗ್ರು ಫುಲ್‌ ಫಿದಾ


ಮೂಲಗಳು ನೀಡಿದ ಮಾಹಿತಿ ಪ್ರಕಾರ ಕನ್ಹಯ್ಯ ಲಾಲ್‌ ಹತ್ಯೆ ಮಾಡಲು ಪಾಕಿಸ್ತಾನದಲ್ಲಿ ಕುಳಿತಿದ್ದ ವ್ಯಕ್ತಿ ಆದೇಶ ನೀಡಿದ್ದಾನೆ. ಪಾಕಿಸ್ತಾನದಲ್ಲಿದ್ದ ಮಾಸ್ಟರ್‌ ಮೈಂಡ್‌ ಹತ್ಯೆ ಮಾಡಲು ಗೌಸ್ ಮತ್ತು ರಿಯಾಜ್‌ನನ್ನು ಪ್ರೇರೇಪಿಸಿದ್ದಾನೆ. ಅಷ್ಟೇ ಅಲ್ಲದೆ, ಈ ಬಗ್ಗೆ ವಾಟ್ಸ್‌ಆಪ್‌ ಮೂಲಕ ಮಾಹಿತಿ ಸಹ ರವಾನೆಯಾಗಿದೆ. ಸದ್ಯ ಕನ್ಹಯ್ಯ ಹತ್ಯೆಯ ಹಿಂದೆ ಸುಮಾರು 10 ಜನರ ಕೈವಾಡ ಇದೆ ಎಂದೂ ಹೇಳಲಾಗುತ್ತಿದೆ. 


ಕನ್ಹಯ್ಯನ ಹತ್ಯೆಗೆಂದು ಮೊಹಮ್ಮದ್ ಗೌಸ್‌ ಹರಿತವಾದ ಆಯುಧವನ್ನು ತಯಾರಿಸಿದ್ದಾನೆ. ಈ ಆಯುಧವನ್ನು ಎಸ್‌ಕೆ ಇಂಜಿನಿಯರಿಂಗ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಈ ಹತ್ಯೆಯ ಉದ್ದೇಶವೆಂದರೆ, ಜನರಲ್ಲಿ ಭಯವನ್ನು ಸೃಷ್ಟಿಸುವುದಾಗಿತ್ತು.  


ಉದಯಪುರದ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ಸಂಗತಿಗಳು ಬಹಿರಂಗವಾಗುತ್ತಿವೆ. ಇದೀಗ ಈ ಕೊಲೆ ಪ್ರಕರಣದಲ್ಲಿ 4 ಅಲ್ಲ 5 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಮೊಹಮ್ಮದ್ ಗೌಸ್ ಮತ್ತು ರಿಯಾಜ್ ಇಬ್ಬರೂ ಕನ್ಹಯ್ಯನನ್ನು ಕೊಲೆ ಮಾಡಿದ್ದಾರೆ. ಆದರೆ ಈ ಕೊಲೆಗೆ ಸಂಚು ರೂಪಿಸಲು 5 ಜನ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸುತ್ತಿವೆ. 


ಇದನ್ನೂ ಓದಿ: MS Dhoni: ಎಂ.ಎಸ್.ಧೋನಿ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ..!


ಪೊಲೀಸ್ ಮೂಲಗಳ ಪ್ರಕಾರ, ಗೌಸ್ ಮತ್ತು ರಿಯಾಜ್ ಸಿಕ್ಕಿಬಿದ್ದರೆ ಅವರನ್ನು ಅಲ್ಲಿಂದ ಹೊರಗೆ ಹೇಗೆ ಕರೆತರುವುದು ಎಂಬ ಯೋಜನೆ ರೂಪಿಸುವುದು ಮೂವರ ಕೆಲಸವಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಮತ್ತಿಬ್ಬರು ಆರೋಪಿಗಳ ವಿಚಾರಣೆಯಲ್ಲಿ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಮೊಹ್ಸಿನ್ ಮತ್ತು ಆಸಿಫ್ ಅವರನ್ನು ಇಂದು ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ