ಹಾರ್ಟ್‌ ಬೀಟ್‌ ಹೆಚ್ಚಿಸ್ತಿದೆ ʼತುಪ್ಪದ ಬೆಡಗಿʼಯ ಫೋಟೋಶೂಟ್‌: ಪಡ್ಡೆ ಹುಡುಗ್ರು ಫುಲ್‌ ಫಿದಾ

ತುಪ್ಪದ ಬೆಡಗಿ ಎಂದೇ ಪ್ರಖ್ಯಾತಿ ಗಳಿಸಿರುವ ನಟಿ ರಾಗಿಣಿ ದ್ವಿವೇದಿಯವರ ಫೋಟೋಶೂಟ್‌ ಸಖತ್‌ ಸೌಂಡ್‌ ಮಾಡುತ್ತಿದೆ. ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟಿ ಇದೀಗ ಬ್ಲ್ಯಾಕ್‌ ಕಲರ್‌ನ ಸ್ವಿಮ್‌ ಸೂಟ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು, ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

1 /5

ಕಳೆದ ಕೆಲ ದಿನಗಳ ಹಿಂದೆ ಬರ್ತ್‌ಡೇ ಆಚರಿಸಿಕೊಂಡ ರಾಗಿಣಿ, ಅದೇ ದಿನ 'ಸಾರಿ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. 

2 /5

ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪಡ್ಡೆ ಹುಡುಗರ ಮನಗೆದ್ದಿದೆ. ಇವರು ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿಯಾಗಿದ್ದಾರೆ. 

3 /5

ಕಿಚ್ಚ ಸುದೀಪ್ ನಟನೆಯ 'ವೀರ ಮದಕರಿ' ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಗಿಣಿ ಇದುವರೆಗೆ ವಿವಿಧ ಭಾಷೆಗಳಲ್ಲಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

4 /5

ರಾಗಿಣಿ ದ್ವಿವೇದಿ ಇತ್ತೀಚೆಗೆಯಷ್ಟೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಬ್ಲ್ಯಾಕ್‌ ಕಲರ್‌ನ ಸ್ವಿಮ್‌ ಸೂಟ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು, ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

5 /5

ಕನ್ನಡದ ಬಹುತೇಕ ನಟರೊಂದಿಗೆ ಅಭಿನಯಿಸಿರುವ ರಾಗಿಣಿ, ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ಕುಮಾರ್‌ ಜೊತೆ ನಟಿಸಿದ ʻಶಿವʼ ಚಿತ್ರಕ್ಕೆ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿ ಆಯ್ಕೆಯಾಗಿದ್ದರು.