ಪಿಒಕೆ ಭೂಮಿ ಖಾಲಿ ಮಾಡುವಂತೆ ಮೋದಿ ಚೀನಾಗೆ ಹೇಳಲಿ-ಕಪಿಲ್ ಸಿಬಲ್ ಸವಾಲ್
ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪಿಒಕೆ ಯಲ್ಲಿ 5,000 ಕಿ.ಮೀ ಭೂಮಿಯನ್ನು ಖಾಲಿ ಮಾಡುವಂತೆ ಹೇಳುವ ಮೂಲಕ ತಮ್ಮ 56 ಇಂಚಿನ ಎದೆಯನ್ನು ತೋರಿಸಬೇಕೆಂದು ಕೇಳಿಕೊಂಡರು.
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪಿಒಕೆ ಯಲ್ಲಿ 5,000 ಕಿ.ಮೀ ಭೂಮಿಯನ್ನು ಖಾಲಿ ಮಾಡುವಂತೆ ಹೇಳುವ ಮೂಲಕ ತಮ್ಮ 56 ಇಂಚಿನ ಎದೆಯನ್ನು ತೋರಿಸಬೇಕೆಂದು ಕೇಳಿಕೊಂಡರು.
ಅಲ್ಲದೆ ಭಾರತದಲ್ಲಿ 5ಜಿ ಯಾವುದೇ ಹುವಾವೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಿ ಎಂದು ಕಪಿಲ್ ಸಿಬಲ್ ಸವಾಲು ಹಾಕಿದ್ದಾರೆ.ಸಿಬಲ್ ಅವರ ಈ ಹೇಳಿಕೆ ಚೆನ್ನೈ ಬಳಿಯ ಮಾಮಲ್ಲಾಪುರಂನಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಶೃಂಗಸಭೆ ಹಿನ್ನಲೆಯಲ್ಲಿ ಬಂದಿದೆ.
370 ನೇ ವಿಧಿಯಲ್ಲಿ ಇಮ್ರಾನ್ ಖಾನ್ ಅವರನ್ನು ಕ್ಸಿ ಜಿನ್‌ಪಿಂಗ್ ಬೆಂಬಲಿಸಿದ್ದಾರೆ.ಆದ್ದರಿಂದ ಈಗ ಮೋದಿ ಜಿ ಅವರ ಕಣ್ಣಲ್ಲಿ ಕಣ್ಣಿಟ್ಟು ಚೀನಾ ಆಕ್ರಮಿಸಿರುವ ಪಿಒಕೆ ಯಲ್ಲಿ 5000 ಕಿ.ಮೀ ಭೂಮಿಯನ್ನು ಖಾಲಿ ಮಾಡಿ, ಅದೇ ರೀತಿಯಾಗಿ 5 ಜಿಗಾಗಿ ಭಾರತದಲ್ಲಿ ಹುವಾವೇ ಇಲ್ಲ ಎಂದು ಹೇಳುವ ಮೂಲಕ ನಿಮ್ಮ 56 ಇಂಚಿನ ಎದೆ ತೋರಿಸಿ 'ಅಥವಾ ಅದು: ಹಾತಿ ಕೆ ದಾಂತ್ ಖಾನೆ ಕೆ ಔರ್ ದಿಖಾನೆ ಕೆ ಔರ್ ; ಎಂದು ಸಿಬಲ್ ಹೇಳಿದರು.
ಕ್ಸಿ ಕಾಶ್ಮೀರ ವಿಚಾರವಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಂಗ್ ಕಾಂಗ್ ನಲ್ಲಿ ಪ್ರಜಾಪ್ರಭುತ್ವ ಪರವಾದ ಚಳುವಳಿಯನ್ನು ಭಾರತ ನೋಡುತ್ತಿದೆ ಎಂದು ಏಕೆ ಹೇಳುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.