ನೀತಿ ಆಯೋಗದ ಮೊದಲ ನಾವೀನ್ಯತೆ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ..!
ನೀತಿ ಆಯೋಗದ ಪಾಲುದಾರರಾದ ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟೆಟಿವ್ನೆಸ್ ಗುರುವಾರದಂದು ಇಂಡಿಯಾ ಇನ್ನೋವೇಶನ್ ಇಂಡೆಕ್ಸ್( ಭಾರತದ ನಾವಿನ್ಯತೆ ಸೂಚ್ಯಂಕ) 2019 ನ್ನು ಬಿಡುಗಡೆ ಮಾಡಿದೆ.
ನವದೆಹಲಿ: ನೀತಿ ಆಯೋಗದ ಪಾಲುದಾರರಾದ ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟೆಟಿವ್ನೆಸ್ ಗುರುವಾರದಂದು ಇಂಡಿಯಾ ಇನ್ನೋವೇಶನ್ ಇಂಡೆಕ್ಸ್( ಭಾರತದ ನಾವಿನ್ಯತೆ ಸೂಚ್ಯಂಕ) 2019 ನ್ನು ಬಿಡುಗಡೆ ಮಾಡಿದೆ.
ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕರ್ನಾಟಕಕ್ಕೇ ಅಗ್ರಸ್ತಾನ ದೊರೆತಿದೆ. ಈ ಪಟ್ಟಿಯ ಪ್ರಮುಖ ಗುರಿ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆ ಸಾಮರ್ಥ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸುವುದಾಗಿದೆ.ಕರ್ನಾಟಕದ ನಂತರ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮತ್ತು ಆಂಧ್ರಪ್ರದೇಶ ರಾಜ್ಯಗಳು ನಂತರ ಸ್ಥಾನವನ್ನು ಪಡೆದಿವೆ. ಇನ್ನು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿಯು ಅಗ್ರಸ್ಥಾನದಲ್ಲಿದ್ದರೆ, ಗುಡ್ಡಗಾಡು ರಾಜ್ಯಗಳಲ್ಲಿ ಸಿಕ್ಕಿಂಗೆ ಅಗ್ರಸ್ಥಾನ ಲಭಿಸಿದೆ.
ಗುರುವಾರದಂದು ಭಾರತದ ನಾವಿನ್ಯತೆ ಸೂಚ್ಯಂಕ- 2019 ನ್ನು ಬಿಡುಗಡೆ ಮಾಡಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ 'ಭಾರತ ನಾವಿನ್ಯತೆ ಸೂಚ್ಯಂಕ ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ವಿವಿಧ ಪಾಲುದಾರರ ನಡುವೆ ಸಹಯೋಗವನ್ನು ಸೃಷ್ಟಿಸುತ್ತದೆ ಮತ್ತು ಭಾರತವು ಸ್ಪರ್ಧಾತ್ಮಕ ಉತ್ತಮ ಆಡಳಿತಕ್ಕೆ ಪರಿವರ್ತನೆಗೊಳ್ಳಲು ಸಹಾಯವಾಗುತ್ತದೆ' ಎಂದು ಹೇಳಿದರು.
ಭಾರತದ ನಾವಿನ್ಯತೆ ಸೂಚ್ಯಂಕ ಪ್ರಮಖವಾಗಿ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆ ಪರಿಸರದ ನಿರಂತರ ಮೌಲ್ಯಮಾಪನಕ್ಕಾಗಿ ವಿಸ್ತೃತ ಚೌಕಟ್ಟನ್ನು ರಚಿಸುವುದು. ಈ ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೂಚ್ಯಂಕದ ಆಧಾರದ ಮೇಲೆ ಶ್ರೇಣೀಕರಿಸುವುದು, ಆ ಮೂಲಕ ಅವಕಾಶಗಳು ಮತ್ತು ಸವಾಲುಗಳನ್ನು ಗುರುತಿಸುವುದು ಮತ್ತು ಹೊಸತನವನ್ನು ಬೆಳೆಸಲು ಸರ್ಕಾರದ ನೀತಿಗಳನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.
ಈ ನಾವೀನ್ಯತೆ ಒಳಹರಿವುಗಳನ್ನು ಐದು ಸಕ್ರಿಯಗೊಳಿಸುವ ನಿಯತಾಂಕಗಳ ಮೂಲಕ ಮತ್ತು ಎರಡು ಕಾರ್ಯಕ್ಷಮತೆಯ ನಿಯತಾಂಕಗಳ ಮೂಲಕ ನಾವೀನ್ಯತೆ ಉತ್ಪಾದನೆಯನ್ನು ಅಳೆಯಲಾಗುತ್ತದೆ. ಮಾನವ ಬಂಡವಾಳ, ಹೂಡಿಕೆ, ಜ್ಞಾನ ಕಾರ್ಮಿಕರು, ವ್ಯಾಪಾರ ಪರಿಸರ, ಸುರಕ್ಷತೆ ಮತ್ತು ಕಾನೂನು ಪರಿಸರವನ್ನು ಸಕ್ರಿಯಗೊಳಿಸುವ ನಿಯತಾಂಕಗಳಾಗಿ ಗುರುತಿಸಲಾಗಿದ್ದು, ಜ್ಞಾನದ ಉತ್ಪಾದನೆ ಮತ್ತು ಜ್ಞಾನ ಪ್ರಸರಣವನ್ನು ಕಾರ್ಯಕ್ಷಮತೆಯ ನಿಯತಾಂಕಗಳಾಗಿ ಆಯ್ಕೆ ಮಾಡಲಾಗಿದೆ.