ನವದೆಹಲಿ: ಕರ್ನಾಟಕದಲ್ಲಿನ ಹಿಜಾಬ್-ಕೇಸರಿ ಶಾಲು ಸಂಘರ್ಷ(Hijab vs saffron shawls) ವಿಚಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪಾಠ ಹೇಳಿದ್ದ ಪಾಕಿಸ್ತಾನಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ತಿರುಗೇಟು ನೀಡಿದ್ದಾರೆ. ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿರುವ ಓವೈಸಿ, ‘ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಪಾಕಿಸ್ತಾನವು ತಮ್ಮ ಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ’ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

‘ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಲಾಯಿತು. ಅವರು ಪಾಕಿಸ್ತಾನವನ್ನೇ ತೊರೆಯಬೇಕಾಯಿತು. ತಮ್ಮ ದೇಶದ ಹೆಣ್ಣುಮಕ್ಕಳಿಗೆ ಭದ್ರತೆ ನೀಡಲು ವಿಫಲರಾಗಿರುವ ನೀವು ಈಗ ಭಾರತಕ್ಕೆ ಪಾಠ ಹೇಳುವುದು ಬೇಡ. ಪಾಕಿಸ್ತಾನ(Pakistan)ದ ಸಂವಿಧಾನವು ಮುಸ್ಲಿಮೇತರರಿಗೆ ಪ್ರಧಾನಿಯಾಗಲು ಅವಕಾಶ ನೀಡುವುದಿಲ್ಲ. ಪಾಕಿಸ್ತಾನಕ್ಕೆ ನನ್ನ ಸಲಹೆ ಏನೆಂದರೆ, ನೀವು ಈ ಕಡೆ ನೋಡಬೇಡಿ ನಿಮ್ಮ ಸ್ವಂತ ದೇಶವನ್ನು ನೋಡಿಕೊಳ್ಳಿರಿ’ ಅಂತಾ ಸಲಹೆ ನೀಡಿದ್ದಾರೆ.


ಜಮ್ಮು & ಕಾಶ್ಮೀರ ಕುರಿತು ಚೀನಾ ಅಧ್ಯಕ್ಷರ ಜೊತೆ ಪಾಕ್ ಪ್ರಧಾನಿ ಮಾತುಕತೆ!


ಉತ್ತರಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ‘ನಿಮ್ಮ ದೇಶದಲ್ಲಿಯೇ ನಿಮಗೆ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳ ಬಗ್ಗೆ ಮೊದಲು ಗಮನಹರಿಸಿ. ಭಾರತ ನಮ್ಮ ದೇಶ ಮತ್ತು ಇದು ನಮ್ಮ ಆಂತರಿಕ ವಿಚಾರ. ನಮ್ಮ ಸಮಸ್ಯೆಗಳಿಗೆ ನಿಮ್ಮ ಮೂಗು ತೂರಬೇಡಿ. ನಮ್ಮ ದೇಶದ ಹೆಣ್ಣುಮಕ್ಕಳು ಇಲ್ಲಿ ಚೆನ್ನಾಗಿಯೇ ಓದುತ್ತಾರೆ(Girl's Education) ಮತ್ತು ಅವರ ಭದ್ರತೆಗೆ ನಾವು ಹೊಣೆಗಾರರಾಗಿರುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ’ ಅಂತಾ ಪಾಕ್ ಗೆ ಓವೈಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ವಂಚಿತಗೊಳಿಸುವುದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್(Karnataka Hijab Row) ಧರಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಸಂಪೂರ್ಣ ದಬ್ಬಾಳಿಕೆಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರು ಹೇಳಿದ್ದರು. ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿದ್ದ ಓವೈಸಿ, ಸಹೋದರಿಯರೇ ನಿಮ್ಮ ಹಿಜಾಬ್ ಹೋರಾಟ ಯಶಸ್ವಿಯಾಗಲಿ’ ಅಂತಾ ಹೇಳಿದ್ದರು.


ಇದನ್ನೂ ಓದಿ: Covid 19: ಕೊರೊನಾದ ಈ 5 ಲಕ್ಷಣ ಕೇವಲ 2 ದಿನಗಳಲ್ಲಿ ಗೋಚರಿಸುತ್ತವೆ, ಆಘಾತಕಾರಿ ಅಂಶ ಬಹಿರಂಗ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.